ದಾವಣಗೆರೆ: ಪೆಟ್ರೋಲ್, ಡೀಸೆಲ್ ದರ ಪ್ರತಿದಿನ ಪರಿಷ್ಕರಣೆ ಕ್ರಮ ವಿರೋಧಿ ಸಿ ಇಂದು ಡಿಸ್ಟ್ರಿಕ್ಟ್ ಪೆಟ್ರೋಲಿಯಂ ಡೀಲರ್ ಅಸೋಸಿಯೇಷನ್‌ನಿಂದ ಸಾಂಕೇತಿಕ ಮುಷ್ಕರ ನಡೆಯಲಿದ್ದು, ದಿನಪೂರ್ತಿ ಬಂಕ್‌ಗಳಲ್ಲಿ ವಹಿವಾಟು ಸ್ಥಗಿತಗೊಳ್ಳಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಆರ್.ಜಿ. ದತ್ತರಾಜು ತಿಳಿಸಿದ್ದಾರೆ.
ಪೆಟ್ರೋಲ್ ಬಂಕ್‌ಗಳು ಖರೀದಿ ಮತ್ತು ಮಾರಾಟ ಪ್ರಕ್ರಿಯೆಯನ್ನು ಸಾಂಕೇತಿಕವಾಗಿ ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಿ ರಾಜ್ಯಾದ್ಯಂತ ಪ್ರತಿಭಟಿಸಲಿದ್ದು, ಅದೇ ರೀತಿ ದಾವಣಗೆರೆ ಜಿಲ್ಲೆಯಲ್ಲಿಯೂ ಸಹ ಸಾಂಕೇತಿಕ ಮುಷ್ಕರ ನಡೆಸಲಿದ್ದೇವೆ. ಪ್ರತಿದಿನ ದರ ಪರಿಷ್ಕರಣೆ ವಿಧಾನ ಅವೈಜ್ಞಾನಿಕವಾಗಿದೆ.
ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಕಷ್ಟಕರ. ಈ ಹೊಸ ವಿಧಾನ ಜಾರಿಯಾದಲ್ಲಿ ಗ್ರಾಹಕರು ಮತ್ತು ಡೀಲರ್‌ಗಳು ಸದಾ ಗೊಂದಲದ ನಡುವೆ ವ್ಯವಹರಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಲ್ಲದೆ, ಹೊಸ ವಿಧಾನ ಜಾರಿಗೆ ಆಟೋಮೋಷನ್ ಯಂತ್ರ ಅಳವಡಿಸಬೇಕಿದೆ.
ಈಗಾಗಲೇ ನಗರ ಪ್ರದೇಶಗಳ ಕೆಲ ಬಂಕ್‌ಗಳಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ. ಯಾವುದೇ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಘಟಕದಲ್ಲಿ ಹಲವಾರು ಲೋಪದೋಷಗಳು ಕಂಡುಬಂದಿವೆ. ಆಟೋಮೋಷನ್‌ನಿಂದ ಒಂದು ಯೂನಿಟ್‌ನಲ್ಲಿ ದೋಷ ಕಂಡುಬಂದಲ್ಲಿ ಬಂಕ್‌ನ ಎಲ್ಲಾ ಪಂಪ್‌ಗ್ಳು ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ಬಂಕ್‌ನ ಸಂಪೂರ್ಣ ವ್ಯವಹಾರ ಸ್ಥಗಿತಗೊಳ್ಳಲಿದೆ.
ಹೊಸ ವಿಧಾನ ಜಾರಿಗೆ ತರುವ ಮುನ್ನ ಸಾಧಕ, ಬಾಧಕ ಚರ್ಚಿಸದೇ ಏಕಾಏಕಿ ಕೈಗೊಂಡಿರುವ ತೀರ್ಮಾನ ಖಂಡಿಸಿ ಇಂದು ಬಂಕ್‌ಗಳ ಬಂದ್ ಮೂಲಕ ಸಾಂಕೇತಿಕ ಮುಷ್ಕರ ನಡೆಸಲಿದ್ದೇವೆ. ಪ್ರತಿಭಟನೆಯಿಂದದಾಗುವ ಅಡಚಣೆಗೆ ಸಾರ್ವಜನಿಕರು ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.