Advertisement

Haryana ನೂಹ್‌ನಲ್ಲಿ ಇಂಟರ್‌ನೆಟ್‌, ಎಸ್‌ಎಂಎಸ್‌ ಸೇವೆ ಸ್ಥಗಿತ

08:46 PM Aug 26, 2023 | Team Udayavani |

ಚಂಡೀಗಢ: ಹರ್ಯಾಣದ ನೂಹ್‌ ಜಿಲ್ಲೆಯಲ್ಲಿ ಆ.26 ರಿಂದ 28ರವರೆಗೆ ಅಂತರ್ಜಾಲ ಹಾಗೂ ಎಸ್‌ಎಂಎಸ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

Advertisement

ಸರ್ವ ಜಾತಿಯ ಹಿಂದೂ ಮಹಾ ಪಂಚಾಯತ್‌ ವತಿಯಿಂದ ಆ.28ರ ಸೋಮವಾರದಂದು ಬ್ರಿಜ್‌ ಮಂಡಲ್‌ ಶೋಭಾಯಾತ್ರೆಯನ್ನು ನಡೆಸಲು ಆಯೋಜಿಸಲಾಗಿದೆ. ಇದಕ್ಕೆ ಜಿಲ್ಲಾಡಳಿತವೂ ಅನುಮತಿ ನೀಡಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು-ಸುದ್ದಿಗಳನ್ನು ಹಬ್ಬಿಸಿ, ಸಂಘರ್ಷ ಸೃಷ್ಟಿಸುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next