Advertisement
ಉಡುಪಿ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ನಡೆದ ಚುನಾವಣೆಯ ಭತ್ತೆ, ಮೇ, ಜೂನ್, ಜುಲೈ ತಿಂಗಳ ವೇತನ ಬಂದಿಲ್ಲ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇ, ಜೂನ್, ಜುಲೈ ತಿಂಗಳ ವೇತನ ಬಂದಿಲ್ಲ. ದ.ಕ. ಗ್ರಾಮಾಂತರದಲ್ಲಿ ಜೂನ್, ಜುಲೈ ವೇತನ ಬಂದಿಲ್ಲ.
ಗೃಹರಕ್ಷಕರಿಗೆ ದಿನಕ್ಕೆ 380 ರೂ. ಪಗಾರ ಸಿಗುತ್ತದೆ. ಗೃಹರಕ್ಷಕರು ಸಾಮಾನ್ಯವಾಗಿ ಪೊಲೀಸ್, ಅಬಕಾರಿ, ಆರ್‌ಟಿಒ, ಅಗ್ನಿಶಾಮಕ ದಳ, ಪ್ರವಾಸೋದ್ಯಮ, ಗಣಿ ಇಲಾಖೆ ಹೀಗೆ ವಿವಿಧೆಡೆ ನಿಯೋಜನೆ ಗೊಂಡಿರುತ್ತಾರೆ. ಚುನಾವಣೆ ಹೊತ್ತಿಗೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ ತಮಗೆ ಇಷ್ಟು ಗೃಹ ರಕ್ಷಕರು ಬೇಕೆಂದು ಬೇಡಿಕೆ ಮಂಡಿಸುತ್ತಾರೆ. ಕಮಾಂಡೆಂಟರು ಗೃಹರಕ್ಷಕದಳದವರ ಮನೆಗೆ ಹೋಗಿ, ಒತ್ತಾಯ ಮಾಡಿ ಒಂದಿಷ್ಟು ಜನರನ್ನು ಒಲಿಸಿ ಚುನಾವಣಾ ಕರ್ತವ್ಯಕ್ಕೆ ಕಳುಹಿಸುತ್ತಾರೆ. ಕಳೆದ ಚುನಾವಣೆಯಲ್ಲಿ ಉಡುಪಿಯಲ್ಲಿ 325 ಗೃಹರಕ್ಷಕರು, ದ.ಕ. ಜಿಲ್ಲೆಯಲ್ಲಿ ಸುಮಾರು 800 ಗೃಹರಕ್ಷಕರನ್ನು ನಿಯೋಜಿಸಲಾಗಿತ್ತು. ಚುನಾವಣೆ ಭತ್ತೆ ನೀಡಿಲ್ಲ
ಉಡುಪಿ ಜಿಲ್ಲೆಯ ಗೃಹರಕ್ಷಕರಿಗೆ ಚುನಾ ವಣೆ ಭತ್ತೆ ನೀಡಿಲ್ಲ. ಜತೆಗೆ ಮೇ, ಜೂನ್, ಜುಲೈ ತಿಂಗಳ ವೇತನ ಬಂದಿಲ್ಲ. ದ.ಕ. ಜಿಲ್ಲೆಯಲ್ಲಿ ಚುನಾವಣಾ ಭತ್ತೆ ಬಂದಿದೆ. ಇನ್ನು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇ, ಜೂನ್, ಜುಲೈ ವೇತನ ಬಂದಿಲ್ಲ ದ.ಕ. ಎಸ್‌ಪಿ ವ್ಯಾಪ್ತಿಯಲ್ಲಿ ಜೂನ್, ಜುಲೈ ವೇತನ ಬಂದಿಲ್ಲ. ಜುಲೈನ ವೇತನ ವಾದರೂ ಮುಂದಿನ ತಿಂಗಳ 10ನೆಯ ತಾರೀಕಿನವರೆಗೆ ಅವಕಾಶವಿದೆ. ಬಜೆಟ್ ಅನುದಾನ ಕೊರತೆಯಿಂದ ಹೀಗಾಗಿದೆ ಎನ್ನಲಾಗುತ್ತಿದೆ.
Related Articles
– ಡಾ| ಮುರಳೀ ಮೋಹನ್,
– ಡಾ| ಪ್ರಶಾಂತ್ ಶೆಟ್ಟಿ ಉಭಯ ಜಿಲ್ಲಾ ಕಮಾಂಡೆಂಟ್ಸ್
Advertisement