Advertisement
ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯರಸ್ತೆ ಅಗಲೀಕರಣ ವಿಳಂಬದಿಂದ ಅಲ್ಲಿನ ನಿವಾಸಿಗಳಿಗೆ ಹಾನಿ ಹೆಚ್ಚಾಗಲಿದೆ. ಕಳೆದೆರಡು ವರ್ಷಗಳಿಂದ ಮಳೆ ಹೆಚ್ಚಾಗಿದ್ದರಿಂದ ಮನೆಯಲ್ಲಿ ಬಳಸಿದ ನೀರು ಇಂಗು ಗುಂಡಿಗಳಲ್ಲಿ ತುಂಬಿಕೊಂಡಿದೆ. ಚರಂಡಿ ಸೌಲಭ್ಯವಿಲ್ಲದ ಕೆಲವರು ಇದರಿಂದ ತಪ್ಪಿಸಿಕೊಳ್ಳಲು ಬಳಕೆ ಮಾಡಿದ ನೀರನ್ನು ಮುಖ್ಯರಸ್ತೆಗೆ ಬಿಡುತ್ತಿದ್ದಾರೆ. ಇದರಿಂದ ವಾಹನ ಸಂಚರಿಸುವಾಗ ನೀರು ಸಿಡಿದು ಸಾಕಷ್ಟುತೊಂದರೆಯಗುತ್ತಿದೆ. ಕೂಡಲೇ ಯುಜಿಡಿ ಅಧಿಕಾರಿಗಳು ಮುಖ್ಯರಸ್ತೆಯಲ್ಲಿ ಕೆಲಸ ಆರಂಭಿಸುವಂತೆ ಸೂಚಿಸಿದರು.
Related Articles
Advertisement
ಹೈಮಾಸ್ಕ್ ದೀಪ ಅಳವಡಿಸಿ: ಸದಸ್ಯ ಈರಣ್ಣ ಬಣಕಾರ ಮಾತನಾಡಿ, ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಹೆಸ್ಕಾಂ ನೆರವಿನಿಂದ ಉಚಿತವಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು, ಅವುಗಳಿಗೆ ಪುರಸಭೆ ವತಿಯಿಂದ ಹೈಮಾಸ್ಕ್ ಬಲ್ಬ್ಗಳನ್ನು ಅಳವಡಿಸುವಂತೆ ಆಗ್ರಹಿಸಿದರು. ಇದಕ್ಕೆ ಸಭೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು. ಬಸ್ ನಿಲ್ದಾಣ ನಿರ್ಮಿಸಿ: ಸದಸ್ಯೆ ಗಾಯತ್ರಿ ರಾಯ್ಕರ್ ಮಾತನಾಡಿ, ನೆಹರು ನಗರದಲ್ಲಿ ಸಾರ್ವಜನಿಕರು ಬಸ್ ನಿಲ್ದಾಣವಿಲ್ಲದೇ ರಸ್ತೆ ಬದಿಯಲ್ಲಿ ನಿಂತುಸಾರಿಗೆ ಬಸ್ ಹತ್ತಬೇಕಾಗಿದೆ. ಕೂಡಲೇ ಪುರಸಭೆ ವತಿಯಿಂದ ನೆಹರು ನಗರದಲ್ಲಿ ಮೋಟೆಬೆನ್ನೂರ ರಸ್ತೆಗೆ ಹೊಂದಿಕೊಂಡು ಬಸ್ ಶೆಲ್ಟರ್ ನಿರ್ಮಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾ ಧಿಕಾರಿ ವಿ.ಎಂ.ಪೂಜಾರ, ಪುರಸಭೆ ಅನುದಾನದಲ್ಲಿ ಬೇಡ. ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ಬಸ್ ಶೆಲ್ಟರ್ ನಿರ್ಮಿಸೋಣ ಎಂದರು.
ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಛಲವಾದಿ, ಮಂಜಣ್ಣ ಬಾರ್ಕಿ, ಜಮೀಲಾ ಹೆರRಲ್, ಸುಭಾಸ್ ಮಾಳಗಿ, ಸರೋಜಾ ಉಳ್ಳಾಗಡ್ಡಿ, ಮೆಹಬೂಬ್ ಅಗಸನಹಳ್ಳಿ, ಹನುಮಂತ ಮ್ಯಾಗೇರಿ,ಚಂದ್ರಣ್ಣ ಶೆಟ್ಟರ, ಮಂಗಳ ಗೆಜ್ಜೆಳ್ಳಿ, ಕಮಲವ್ವ ಕುರಕುಂದಿ, ಮಹ್ಮದ್ ರಫೀಕ್ ಮುದಗಲ್, ರೇಷ್ಮಾಬಾನು ಶೇಖ್, ಸಂಜೀವ ಮಡಿವಾಳರ, ಗಣೇಶ ಅಚಲಕರ, ಗಿರಿಜಾ ಪಟ್ಟಣಶೆಟ್ಟಿ, ಪ್ರೇಮಾ ಬೆನ್ನೂರ, ಹನುಮಂತ ಕೋಡಿಹಳ್ಳಿ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
ರಸ್ತೆ ಪಕ್ಕದಲ್ಲಿರುವ ಇಸ್ಲಾಂಪುರಗಲ್ಲಿ ಹಾಗೂ ಶಿವಪುರ ಬಡಾವಣೆ ಅಂಗನವಾಡಿ ಕಟ್ಟಡಗಳಿಗೆ ಸಂಪೂರ್ಣ ಕಾಂಪೌಂಡ್‌ಗಳನ್ನು ನಿರ್ಮಿಸಿ ಅಲ್ಲಿನ ಮಕ್ಕಳನ್ನು ಅಪಾಯದಿಂದ ಪಾರು ಮಾಡಿ. ಇಲ್ಲದಿದ್ದರೆ, ಅನಾಹುತ ತಪ್ಪಿದ್ದಲ್ಲ. –ಶಂಕರ ಕುಸಗೂರ, ಪುರಸಭೆ ಸದಸ್ಯ