Advertisement
ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಬೇಕು ಎಂದು ಜಾತ್ಯತೀತವಾಗಿ, ಪಕ್ಷಾತೀತವಾಗಿ ಬಯಸಿದ್ದಾರೆ. ಅದನ್ನು ತಪ್ಪು ಅಂತ ಹೇಳಿದರೆ ಅಂತಹವರಿಗೆ ಏನು ಹೇಳಬೇಕೂಂತ ಗೊತ್ತಾಗುತ್ತಿಲ್ಲ. ನಮಗೆ ಮುಂದಿನ ದಿನಗಳಲ್ಲಿ ಒಳ್ಳೆ ನಾಯಕ ಮುಖ್ಯಮಂತ್ರಿ ಹುದ್ದೆಗೇರಬೇಕು, ಎಲ್ಲಾ ವರ್ಗದ ವರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ ಬೇಕು ಅಂತ ಹೇಳಿದ್ದಾರೆ. ಅದರಲ್ಲೇನು ತಪ್ಪು ಎಂದು ಗುರುವಾರ ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.
Related Articles
Advertisement
ಹೆಚ್‌ಡಿಕೆ ಸೂಚನೆ ಕೊಡುವುದು ಸರಿಯಲ್ಲ: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದುಕೊಂಡು ಒಂದು ರಾಷ್ಟ್ರೀಯ ಪಕ್ಷದವರಿಗೆ ಸೂಚನೆ ನೀಡುವುದು ಎಷ್ಟರಮಟ್ಟಿಗೆ ಸರಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 37 ಸ್ಥಾನ ಗೆದ್ದು ಮುಖ್ಯಮಂತ್ರಿಯಾಗಿ 80 ಸ್ಥಾನ ಗೆದ್ದವರಿಗೆ ನೀವು ಹೀಗೆ ನಡೆದುಕೊಳ್ಳಬೇಕು, ಹಾಗೇ ನಡೆದುಕೊಳ್ಳಬೇಕು ಎಂದು ಸೂಚನೆ ಕೊಡುತ್ತಾರೆ. ಆದರೆ ಅವರ ನಡವಳಿಕೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಮಾಡಿಕೊಳ್ಳುವುದಿಲ್ಲ. ಯಾವುದೇ ಮೈತ್ರಿ ಸರ್ಕಾರದಲ್ಲಿ ನಾವು ಈ ರೀತಿಯ ನಡವಳಿಕೆಯನ್ನು ನೋಡಿಲ್ಲ ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರದ ವಿರುದ್ಧ ತಮ್ಮ ಅಸಮಾ ಧಾನ ಹೊರಹಾಕಿದರು.
ಹಣ ನುಂಗಿದವರು ಜೆಡಿಎಸ್‌ನವರು: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಭ್ರಷ್ಟಾಚಾರ ನಡೆಸಿ ಹಣ ನುಂಗಿದವರು ಶಿವಮೊಬ್ಬದ ಜೆಡಿಎಸ್ ಅಧ್ಯಕ್ಷ ಮಂಜುನಾಥ್‌ಗೌಡರು. ಈಗ ಅವರನ್ನು ವಿಚಾರಣೆಗೆ ಒಳಪಡಿಸಿದರೂ ಅವ್ಯವಹಾರ ಹೊರಗೆ ಬರುತ್ತದೆ ಎಂದು ಆರೋಪಿಸಿದ ಚಲುವರಾಯಸ್ವಾಮಿ, ಬ್ಯಾಂಕಿನ ಅಧ್ಯಕ್ಷರಾಗಿ ರಾಜಣ್ಣ ಅತ್ಯಂತ ಗೌರವಯುತವಾಗಿ ಆಡಳಿತ ನಡೆಸುತ್ತಿದ್ದಾರೆ. ಯಾವುದೇ ಅವ್ಯವಹಾರವಿಲ್ಲದೆ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದರೂ ಅದನ್ನು ಮುಚ್ಚಿಟ್ಟು ರಾಜಣ್ಣ ಅವರ ಮೇಲೆ ತಪ್ಪು ಹಾಕಬಹುದು. ಏಕೆಂದರೆ, ಕೋ-ಆಪರೇಟಿವ್ ಅಧಿಕಾರಿಗಳು ಹೆಣ್ಣನ್ನ, ಗಂಡು ಮಾಡ್ತಾರೆ, ಅವ್ವನ್ನ ಅಪ್ಪ ಮಾಡ್ತಾರೆ ಎಂದು ಟೀಕಿಸಿದರು.
ಮಂಡ್ಯ: ಚುನಾವಣೆಯಲ್ಲಿ ನಾವು ಯಾರ ಪÃವಾಗಿಯೂ ಕೆಲಸ ಮಾಡಿಲ್ಲ. ತಟಸ್ಥರಾಗಿ ಉಳಿದಿದ್ದೆವು. ನಾವು ಸೋತಿರುವವರು. ಜನ ನಮ್ಮನ್ನು ಬೇಡ ಎಂದು ತಿರಸ್ಕರಿಸಿದ್ದಾರೆ. ಅದರಿಂದ ನಮ್ಮ ಕೆಲಸ ಮಾಡಿಕೊಂಡು ಹೋಗ್ತಿದ್ದೇವೆ ಎಂದು ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.
ನಾನು ನಮ್ಮ ಕಾರ್ಯಕರ್ತರನ್ನು ಕರೆದು ಸುಮಲತಾ ಪರ ಕೆಲಸ ಮಾಡಬೇಕು ಅಂತಾ ಸೂಚಿಸಿದ್ದಿರಿ ಅಂತ ಜೆಡಿಎಸ್‌ನವರು ಹೇಳುತ್ತಿದ್ದಾರೆ. ನಾನು ಯಾವ ರೀತಿ ಮುಕ್ತವಾಗಿ ಸುಮಲತಾ ಪರ ಚುನಾವಣೆ ಮಾಡಿದ್ದೇನೆ ಅಂತಾ ನೀವು ಹೇಳಬೇಕು. ನಮಗಾಗದವರು ಏನಾದ್ರೂ ಒಂದು ಹೇಳ್ತಾನೇ ಇರ್ತಾರೆ. ಮೊಸರಲ್ಲಿ ಕಲ್ಲು ಹುಡುಕೋದು ಅವರ ಸ್ವಭಾವ ಎಂದು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ತಟಸ್ಥವಾಗಿದ್ದೆವು: ಶ್ರೀರಂಗಪಟ್ಟಣದಲ್ಲಿ ಬಂಡಿಸಿದ್ದೇಗೌಡ ವಂಶಿಕರಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು. ಆ ವೇಳೆ ಕುಟುಂಬದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಇಷ್ಟೆಲ್ಲಾ ಆದರೂ ಕೂಡ ಯಾಕೆ ಸುಮ್ಮನಿದ್ದೀರಿ. ನಮ್ಮನ್ನು ಸ್ವತಂತ್ರವಾಗಿ ಬಿಟ್ಟರೆ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದರು. ಆದರೂ ಚುನಾವಣೆಯಲ್ಲಿ ತಟಸ್ಥವಾಗಿದ್ದೆವು ಎಂದು ತಿಳಿಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರದಲ್ಲೂ ಜೆಡಿಎಸ್‌ನ ಎಂಟು ಜನ ಶಾಸಕರು, ಮೂರು ಜನ ಎಂಎಲ್ಸಿ ಇದ್ದಾರೆ. ಅವರಿಗಿಂತ ಚಿಕ್ಕವರು ನಾವು. ಅದರಲ್ಲೂ ಸೋತಿರೋರು. ಜನ ನಮ್ಮನ್ನು ಬೇಡ ಅಂತಾ ಹೇಳಿದ್ದಾರೆ. ಆದರಿಂದ ನಾವು ನಮ್ಮ ಕೆಲಸ ಮಾಡಿಕೊಂಡು ಹೋಗ್ತಿದ್ದೇವೆ ಎಂದರು.
ಕಾಂಗ್ರೆಸ್ಸಿಗರ ಟಾರ್ಗೆಟ್: ಮಂಡ್ಯ ಕಾಂಗ್ರೆಸ್ಸಿಗರನ್ನು ಸರ್ಕಾರ ಬಂದ ದಿನದಿಂದಲೂ ಟಾರ್ಗೆಟ್ ಮಾಡಲಾಗುತ್ತಿದೆ. ಸ್ಥಳೀಯವಾಗಿ ನಡೆದ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆದಿದೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಾಕಷ್ಟು ಸೀರಿಯಸ್ ಆಗಿ ಚುನಾವಣೆ ಮಾಡುತ್ತಿದ್ದೇವೆ. ಈ ಚುನಾವಣೆಯಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಎಂದು ತಿಳಿಸಿದರು..
ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಚುನಾವಣೆ ನಡೆದು ಮೂರು ತಿಂಗಳು ಆಗಬೇಕಿತ್ತು. ಈವರೆಗೆ ಚುನಾವಣೆ ನಡೆಸಿಲ್ಲ. ಸೋಲು – ಗೆಲುವನ್ನು ಜನ ತೀರ್ಮಾನ ಮಾಡಿದ ಮೇಲೆ ಒಪ್ಪಿಕೊಳ್ಳಬೇಕು ಎಂದು ರಮೇಶ್ ಬಂಡಿಸಿದ್ದೇಗೌಡ ಹೇಳಿದರು.