Advertisement

ಸಭಾಪತಿ ಸ್ಥಾನಕ್ಕೆ ಯಾರೂ ಅಂತಿಮವಾಗಿಲ್ಲ: ಪಾಟೀಲ

06:00 AM Dec 10, 2018 | |

ಗದಗ: ವಿಧಾನ ಪರಿಷತ್‌ ಸಭಾಪತಿ ಆಯ್ಕೆಗೆ ಸಂಬಂಧಿ ಸಿದಂತೆ ಎರಡೂ ಪಕ್ಷದ ಶಾಸಕಾಂಗ ಪಕ್ಷದ ಸಭೆ ಮತ್ತು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚೆಯಾಗಿದೆ. ಆದರೆ, ಸಭಾಪತಿ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬುದು ಇನ್ನೂ ಅಂತಿಮಗೊಂಡಿಲ್ಲ ಎಂದು ಮಾಜಿ ಸಚಿವ  ಎಚ್‌.ಕೆ. ಪಾಟೀಲ ತಿಳಿಸಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಮೊದಲಿನಿಂದಲೂ ಸಭಾಪತಿ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ. ಬೆಳಗಾವಿಯಲ್ಲಿ  ಆರಂಭಗೊಳ್ಳುವ ಚಳಿಗಾಲದ ಅ ಧಿವೇಶನದಲ್ಲಿ ಆಡಳಿತ ಪಕ್ಷದ ಹಿರಿಯ ಶಾಸಕರು ಗೈರಾಗುತ್ತಿದ್ದಾರೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ. ಇಲ್ಲಿ ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಚರ್ಚೆಯೂ ನಡೆಯಲಿದೆ ಎಂದರು. 

ಕಳೆದ ಅಧಿವೇಶನದಲ್ಲಿ ಮೌಡ್ಯ ನಿಷೇಧ ಕಾಯ್ದೆ ಮಂಡನೆ ಬಳಿಕ ಇದೀಗ ರಾಜ್ಯದ ಮುಖ್ಯಮಂತ್ರಿಗಳೇ ಹೋಮ-ಹವನದಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂಬುದರ ಸೂಕ್ಷ್ಮತೆಯನ್ನು ಸರ್ಕಾರ, ಮಾಧ್ಯಮ ಹಾಗೂ ಜನರು ಅರಿತುಕೊಳ್ಳುತ್ತಿಲ್ಲ. ಅಧಿ ಕಾರದಲ್ಲಿದ್ದವರು, ಅ ಧಿಕಾರಕ್ಕೆ ಬರಬೇಕೆನ್ನುವವರೂ ಕೂಡ ಇದನ್ನು ಮಾಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next