Advertisement

ಶೀರೂರು ಶ್ರೀ ಸಾವಿನ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ:IGP ಸ್ಪಷ್ಟನೆ

03:35 PM Jul 24, 2018 | Team Udayavani |

ಉಡುಪಿ: ಶೀರೂರು ಮಠಾಧೀಶರಾಗಿದ್ದ ಲಕ್ಷ್ಮೀವರ ತೀರ್ಥರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂದು ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ ಸ್ಪಷ್ಟ ಪಡಿಸಿದ್ದಾರೆ. 

Advertisement

ಶೀರೂರು ಶ್ರೀ ಸಾವಿನ ಕುರಿತಾಗಿ ಮಂಗಳವಾರ ಎಸ್‌ಪಿ ಕಚೇರಿಯಲ್ಲಿ  ಪ್ರಕರಣದ ತನಿಖೆಯ ಪ್ರಗತಿಯ ಕುರಿತಾಗಿ ಮಹತ್ವದ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 

ಶ್ರೀಗಳ ಸಾವಿನ ಕುರಿತು ತನಿಖೆಗಾಗಿ 5 ತಂಡಗಳನ್ನು ರಚಿಸಿದ್ದೇವೆ. ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ ಅವರು ಯಾವುದೇ ಹೆಚ್ಚಿನ ಮಾಹಿತಿಗಳನ್ನು ನೀಡಿಲ್ಲ. 

ಶೀರೂರು ಮೂಲ ಮಠಕ್ಕೆ ಭೇಟಿ ನೀಡಿದ ಐಜಿಪಿ ಪರಿಶೀಲನೆ ನಡೆಸಿದರು. ಸ್ವಾಮೀಜಿ ನಿಧನದ ಬಳಿಕ ಅಂತಿಮ ವಿಧಿ ವಿಧಾನಗಳು ನಡೆಯುವ ವೇಳೆ ಐಜಿಪಿ ಉಪಸ್ಥಿತರಿದ್ದರು. 

ಹಿರಿಯಡಕ ಬಳಿಯಿರುವ ಶೀರೂರು ಮೂಲ ಮಠವನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Advertisement

ಹಲವು ಗಾಳಿ ಸುದ್ದಿಗಳು !
ಶೀರೂರು ಶ್ರೀ ನಿಧನದ ಬಳಿಕ ಹಲವು ಗಾಳಿ ಸುದ್ದಿಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.ಶ್ರೀಗಳ ಆಪ್ತೆ ಎನ್ನಲಾದ  ರಮ್ಯಾ ಶೆಟ್ಟಿಯನ್ನು ನಿಧನದ 2 ದಿನಗಳ ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ಸುದ್ದಿ ಯಾಗಿತ್ತು.

ಮಂಗಳವಾರ ಬೆಳಗ್ಗೆ ಬೆಳ್ತಂಗಡಿಯ ಅಳದಂಗಡಿ ಬಳಿ ರಮ್ಯಾ ಶೆಟ್ಟಿಯನ್ನು ಇತರ ಮೂವರು ಮಹಿಳೆಯರು ಮತ್ತು ಕಾರು ಚಾಲಕನೊಂದಿಗೆ ಪೊಲೀಸರು ವಶಕ್ಕೆ ಪಡೆದಿದ್ದರು ಎನ್ನಲಾಗಿತ್ತು. ಆದರೆ ಪೊಲೀಸರು ಯಾವುದೇ ಮಾಹಿತಿಯನ್ನೂ ಬಿಟ್ಟು ಕೊಟ್ಟಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next