Advertisement
ಇಲ್ಲಿರುವುದು 9 ಮಲೆಕುಡಿಯ ಕುಟುಂಬಗಳು. ಸುತ್ತಲೂ ಅರಣ್ಯ ವಾದರೂ ಕಂಗು-ತೆಂಗಿನ ತೋಟ, ಗದ್ದೆಗಳೂ ಇವೆ. ರಸ್ತೆ, ವಿದ್ಯುತ್ ಇದ್ದರೆ ಇವರದು ಸಂತೃಪ್ತ ಜೀವನ. ಶಿರ್ಲಾಲುಗ್ರಾ.ಪಂ.ನಿಂದ ಕೇವಲ ಆರೇಳು ಕಿ.ಮೀ. ದೂರದಲ್ಲಿದೆ ಈ ಊರು.
ಇಲ್ಲಿಯ ಮನೆಗಳೆಲ್ಲವೂ ರಾತ್ರಿ ಯಾಗುತ್ತಲೇ ಚಿಮಿಣಿ ದೀಪಗಳಿಂದ ಪ್ರಕಾಶಮಾನವಾಗಿ ಕಾಣುತ್ತವೆ. ಹತ್ತು ವರ್ಷಗಳ ಹಿಂದೆ ಯಾವುದೋ ಸಂಸ್ಥೆ ಯೊಂದು ಸೋಲಾರ್ ಲೈಟ್ಸ್ ನೀಡಿದ್ದರೂ ತಿಂಗಳೊಳಗೆ ಕೆಟ್ಟು ಗುಜುರಿ ಅಂಗಡಿ ಸೇರಿವೆ ಎನ್ನುತ್ತಾರೆ ಗ್ರಾಮಸ್ಥರು. ಇತ್ತೀಚೆಗೆ ಇಲ್ಲಿಗೆ ಸೌಭಾಗ್ಯ ಯೋಜನೆ ಯಡಿಯಲ್ಲಿ ಸೋಲಾರ್ ಸಂಪರ್ಕ ನೀಡಿದರೂ ಕೆಲವು ಮನೆಗಳ ಬಲ್ಬುಗಳು ಉರಿಯುವುದೇ ಇಲ್ಲ. ಇಲ್ಲಿನ ಮಕ್ಕಳು ಶಾಲಾ – ಕಾಲೇಜುಗಳಿಗೆ ಏಳೆಂಟು ಕಿ.ಮೀ. ದೂರ ಕಾಲ್ನಡಿಗೆ ಯಲ್ಲಿ ಪ್ರಯಾಣಿಸಬೇಕಿದೆ.
Related Articles
ಅರಣ್ಯ ಹಕ್ಕು ಕಾಯ್ದೆ ಇಲ್ಲಿನ ನಿವಾಸಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ. 2006ರಲ್ಲಿ ಕಾಯ್ದೆ ಜಾರಿಯಾದಾಗ ತುಂಬಾ ಖುಷಿ ಪಟ್ಟಿದ್ದೇವೆ. ಆದರೆ ನಮ್ಮ ಪಾಲಿಗೆ ಪ್ರಯೋಜನವಾಗಲಿಲ್ಲ. ಇಲ್ಲಿನ 100 ಮೀ.ಗಳಷ್ಟು ಮಾತ್ರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವುದಾದರೂ ಅಭಿವೃದ್ಧಿಗೆ ಅರಣ್ಯ ಎಂಬ ಪದ ಅಡ್ಡಿಯಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ನಿವಾಸಿಗಳು. ಸಮರ್ಪಕ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟರೆ ಎಲ್ಲರಂತೆ ನಮ್ಮ ಬದುಕು ಬೆಳಕಾಗುತ್ತದೆ ಎಂಬುದು ಇಲ್ಲಿನ ಜನರ ಆಶಾದಾಯಕ ಮಾತು.
Advertisement
ಅಧಿಕಾರಿಗಳ ನಿರ್ಲಕ್ಷ್ಯಅರಣ್ಯ ಹಕ್ಕು ಕಾಯ್ದೆ ನಿರ್ಲಕ್ಷಿಸಿದ ಅಧಿಕಾರಿಗಳ ಬೇಜವಾಬ್ದಾರಿ ಈ ಪ್ರದೇಶ ಅಭಿವೃದ್ಧಿಯಲ್ಲಿ ಹಿನ್ನಡೆಗೆ ಕಾರಣ. ಅರಣ್ಯ ಹಕ್ಕು ಕಾಯ್ದೆ ಜಾರಿಗಾಗಿ ತೀವ್ರ ಹೋರಾಟಕ್ಕೆ ಮುನ್ನುಗ್ಗಬೇಕಾದ ಅಗತ್ಯವಿದೆ.
-ಜಯಾನಂದ ಪಿಲಿಕಲ
ಪ್ರ. ಕಾರ್ಯದರ್ಶಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಬೆಳ್ತಂಗಡಿ ತಾ| ಸಮಸ್ಯೆ ಪರಿಹರಿಸಿ
ಚಿಮಿಣಿ ದೀಪಗಳಿಂದ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಕಷ್ಟವಾಗಿದೆ. ರೋಗಿಗಳನ್ನು ಹೊತ್ತೂಯ್ಯಬೇಕಾಗಿದೆ. ಜನಪ್ರತಿನಿಧಿ, ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಅರ್ಥೈಸಿಕೊಳ್ಳಬೇಕಿದೆ.
-ಮಮತಾ ಎಚ್., ಹೆಂಡೇಲು ಇಚ್ಛಾಶಕ್ತಿ ಇರಲಿ
ಇಲಾಖೆ- ಜನಪ್ರತಿನಿಧಿಗಳ ಬಾಗಿಲು ಬಡಿದರೂ ನಮಗೆ ಭಾಗ್ಯದ ಬಾಗಿಲು ತೆರೆಯಲಿಲ್ಲ. ರಾಜಕೀಯ ಇಚ್ಛಾಶಕ್ತಿ ಯಿಂದ ಅರಣ್ಯ ಹಕ್ಕು ಕಾಯ್ದೆಯಡಿ ನಮ್ಮ ಊರನ್ನು ಅಭಿವೃದ್ಧಿಪಡಿಸಲಿ.
-ಮೋನಪ್ಪ ಮಲೆಕುಡಿಯ ಹೆಂಡೇಲು, ಶಿರ್ಲಾಲು ವನ್ಯಜೀವಿ ವಿಭಾಗ ಪ್ರದೇಶ
ಹೆಂಡೇಲು ವನ್ಯಜೀವಿ ವಿಭಾಗ ಪ್ರದೇಶದ ಒಳಗಿರುವ ಕಾರಣ ಅಭಿವೃದ್ಧಿಗೆ ಅನುದಾನ ಒದಗಿಸಲು ಸಾಧ್ಯವಾಗುತ್ತಿಲ್ಲ. ಪ್ರತೀ ಮನೆಗೆ ಸೋಲಾರ್ ಅಳವಡಿಸಲಾಗಿದೆ. ಅದಕ್ಕೆ 5 ವರ್ಷ ಗ್ಯಾರಂಟಿ ಇದ್ದು, ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತಂದರೆ ಕಂಪೆನಿಯವರನ್ನು ಕರೆಸಿ ದುರಸ್ತಿ ಮಾಡಿಸುತ್ತೇವೆ. ಪ. ಜಾತಿ, ಪ. ಪಂಗಡದ ಅನುದಾನ ಪಂ.ನಲ್ಲಿ ಸಾಕಷ್ಟು ಇದೆ. ಆದರೆ ಇಲ್ಲಿ ಉಪಯೋಗಿಸಲು ಅಸಾಧ್ಯವಾಗಿದೆ. ಇಲ್ಲಿನ ಕೆಲವು ಸಂಪರ್ಕ ರಸ್ತೆಗೆ ಕಾಂಕ್ರಿಟ್ ಮಾಡಲಾಗಿದೆ. ಮುಂದಿನ ಅಭಿವೃದ್ಧಿ ಕಾರ್ಯಕ್ಕೆ ಅರಣ್ಯ ಇಲಾಖೆಯ ಅಧಿ ಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇವೆ.
- ರಾಜು, ಪಿಡಿಒ, ಶಿರ್ಲಾಲು ಗ್ರಾ.ಪಂ. ಪದ್ಮನಾಭ ವೇಣೂರು