Advertisement
ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರೇಕ್ಷಕರಿಲ್ಲದ ಒಲಿಂಪಿಕ್ಸ್ ನಡೆಸುವ ಸಲಹೆ ನೀಡಿದ್ದರು. ಆದರೆ ಈ ಸಲಹೆಯನ್ನು ತಿರಸ್ಕರಿಸಿರುವ ಸಂಘಟಕರು ಸದ್ಯಕ್ಕೆ ಒಲಿಂಪಿಕ್ಸ್ ಕೂಟದಲ್ಲಿ ಯಾವ ಬದಲಾವಣೆ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ ಎನ್ನುತ್ತಿದ್ದಾರೆ. ಒಲಿಂಪಿಕ್ಸ್ ತಯಾರಿ ಭರದಿಂದ ನಡೆಯುತ್ತಿದೆ ಎಂದು ಜಪಾನ್ ಸರಕಾರವೂ ಹೇಳುತ್ತಿದೆ. ಶಿಂಜೊ ಅಬೆ ಕೂಡ ಇದೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ವಿಶ್ವವೇ ಕೊರೊನಾ ಭೀತಿಯಲ್ಲಿರುವಾಗ ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳು ಬರುವರೇ? ಇದು ಇನ್ನೊಂದು ದೊಡ್ಡ ಪ್ರಶ್ನೆ.
“ಸದ್ಯಕ್ಕೆ ಒಲಿಂಪಿಕ್ಸ್‌ನಲ್ಲಿ ಯಾವ ಬದಲಾವಣೆ ಮಾಡುವ ಇರಾದೆಯೂ ನಮಗಿಲ್ಲ. ಈ ಕುರಿತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಜತೆಗೆ ಮಾತುಕತೆ ನಡೆಸಿದ್ದೇವೆ. ಆ ಪ್ರಕಾರ ಎಲ್ಲವೂ ನಿಗದಿಯಾಗಿರುವಂತೆ ನಡೆಯಲಿದೆ. ಜಪಾನ್ ಸರಕಾರ, ಟೋಕಿಯೊ ಮಹಾನಗರ ಪಾಲಿಕೆ ಮತ್ತು ಒಲಿಂಪಿಕ್ಸ್ ಸಂಘಟನಾ ಸಮಿತಿ ಕೂಟದ ತಯಾರಿಯಲ್ಲಿ ಪೂರ್ಣವಾಗಿ ಮಗ್ನವಾಗಿದೆ’ ಎಂದಿದ್ದಾರೆ ಸರಕಾರದ ವಕ್ತಾರ ಯೋಶಿ ಹಿಡೆಸುಗ.
ಇತ್ತೀಚೆಗೆ ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಟ್ರಂಪ್ ನಡುವೆ, ಕೊರೊನಾ ವೈರಸ್ ಹಾವಳಿಯ ನಡುವೆಯೇ ಒಲಿಂಪಿಕ್ಸ್ ಕೂಟವನ್ನು ನಡೆಸುವ ವಿಚಾರವಾಗಿ ಮಾತುಕತೆಯಾಗಿತ್ತು. ಅನಂತರ ಟ್ರಂಪ್ ಪ್ರೇಕ್ಷಕರಿಲ್ಲದೆ ಒಲಿಂಪಿಕ್ಸ್ ನಡೆಸುವ ಬಗ್ಗೆ ಮಾತನಾಡಿದ್ದರು. ಆದರೆ ಜಗದ್ವಿಖ್ಯಾತ ಕ್ರೀಡಾಕೂಟವೊಂದನ್ನು ಪ್ರೇಕ್ಷಕ ರಹಿತವಾಗಿ ನಡೆಸುವ ಮನಸು ಜಪಾನ್ ಸರಕಾರಕ್ಕಿಲ್ಲ. ಆದರೆ ಟ್ರಂಪ್ ನೀಡಿದ ಸಲಹೆಯ ಬಗ್ಗೆ ಸುಗ ಪತ್ರಿಕಾಗೋಷ್ಠಿಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಬರೀ ಟ್ರಂಪ್ ಮತ್ತು ಅಬೆ ನಡುವೆ ಒಲಿಂಪಿಕ್ಸ್ ಕುರಿತು ಮಾತುಕತೆ ನೀಡಿದ ಮಾಹಿತಿಯನ್ನು ಮಾತ್ರ ಹಂಚಿಕೊಂಡಿದ್ದಾರೆ.
Related Articles
ಇದೇ ವೇಳೆ ಒಂದು ವರ್ಷದ ಮಟ್ಟಿಗೆ ಒಲಿಂಪಿಕ್ಸ್ ಕೂಟವನ್ನು ಮುಂದೂಡುವ ಸಲಹೆಯನ್ನೂ ಟ್ರಂಪ್ ನೀಡಿದ್ದಾರೆ. ಒಂದೋ ಖಾಲಿ ಸ್ಟೇಡಿಯಂನಲ್ಲಿ ಕ್ರೀಡಾಕೂಟ ನಡೆಯಲಿ, ಇಲ್ಲವೇ ರದ್ದು ಮಾಡಿ. ಅದು ಎರಡು ಸಾಧ್ಯವಾಗದಿದ್ದರೆ ಕನಿಷ್ಠ ಒಂದು ವರ್ಷದ ಮಟ್ಟಿಗೆ ಮುಂದೂಡುವ ಎಂದಿದ್ದಾರೆ ಟ್ರಂಪ್. ಆದರೆ ಈ ಯಾವ ಸಲಹೆಗೂ ಜಪಾನ್‌ನ ಸಹಮತವಿಲ್ಲ.
Advertisement
ರದ್ದುಪಡಿಸುವುದು ಸುಲಭವಲ್ಲಹಾಗೆಂದು ಒಲಿಂಪಿಕ್ಸ್ ರದ್ದುಪಡಿಸುವುದು ಹೇಳಿದಷ್ಟು ಸುಲಭವಲ್ಲ. ಇದರಿಂದ ಗಂಭೀರವಾದ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ಬಾಕ್. ಹಾಗೆಂದು ಒಲಿಂಪಿಕ್ಸ್ ರದ್ದಾಗಿಲ್ಲ ಎಂದಲ್ಲ. ಜಾಗತಿಕ ಸಮರ ನಡೆಯುತ್ತಿದ್ದ ಸಂದರ್ಭದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆದಿರಲಿಲ್ಲ. ಆದರೆ ಆಗ ಈ ಕೂಟಕ್ಕೆ ವಾಣಿಜ್ಯದ ಆಯಾಮ ಇರಲಿಲ್ಲ. ಆರೋಗ್ಯ ಸಂಸ್ಥೆ ಏನು ಹೇಳುತ್ತದೆ?
ಇದೇ ವೇಳೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥ ಥಾಮಸ್ ಬಾಕ್ ಜರ್ಮನ್ ಟಿವಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, “ನಾವು ವಿಶ್ವ ಆರೋಗ್ಯ ಸಂಸ್ಥೆ ಮಾಡುವ ಶಿಫಾರಸುಗಳನ್ನು ಪಾಲಿಸುತ್ತೇವೆ’ ಎಂದಿರುವುದು ಈ ವರ್ಷದ ಒಲಿಂಪಿಕ್ಸ್ ಕ್ರೀಡಾಕೂಟದ ಎದುರು ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನಿಟ್ಟಿದೆ. ಒಂದು ವೇಳೆ ವಿಶ್ವ ಆರೋಗ್ಯ ಸಂಸ್ಥೆ ಒಲಿಂಪಿಕ್ಸ್ ನಡೆಸುವುದು ಬೇಡ ಎಂದೇನಾದರೂ ಸಲಹೆ ನೀಡಿದರೆ ಜಪಾನ್‌ನ ಕನಸು ನುಚ್ಚುನೂರಾಗಲಿದೆ. ಐಒಎ ನಿಯೋಗದ ಟೋಕಿಯೊ ಭೇಟಿ ಇಲ್ಲ
ಒಲಿಂಪಿಕ್ಸ್ ಸಿದ್ಧತೆಗಳನ್ನು ಪರಿಶೀಲಿಸಲು ಕೇಂದ್ರ ಕ್ರೀಡಾ ಸಚಿವ ಕಿರನ್ ರಿಜಿಜು ಸೇರಿದಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಶನ್‌ನ (ಐಒಎ) ಉನ್ನತ ಮಟ್ಟದ ನಿಯೋಗದ ಟೋಕಿಯೊ ಪ್ರವಾಸ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ. ಮಾ. 25-29ರ ಅವಧಿಯಲ್ಲಿ ಈ ನಿಯೋಗ ಟೋಕಿಯೊಗೆ ತೆರಳಬೇಕಿತ್ತು. ನೂತನ ದಿನಾಂಕವನ್ನು ಮತ್ತೆ ಪ್ರಕಟಿಸಲಾಗುವುದು ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ. ಕಿರಣ್ ರಿಜಿಜು ಅವರೊಂದಿಗೆ ಐಒಎ ಅಧ್ಯಕ್ಷ ನರೀಂದರ್ ಬಾತ್ರಾ, ಕಾರ್ಯದರ್ಶಿ ರಾಜೀವ್ ಮೆಹ್ತಾ, ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಅಜಯ್ ಸಿಂಗ್, ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್ ಜುಲಾನಿಯ ಮತ್ತು ನ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಮಹಾ ನಿರ್ದೇಶಕ ಸಂದೀಪ್ ಪ್ರಧಾನ್ ಜಪಾನ್‌ಗೆ ತೆರಳುವ ತಂಡದಲ್ಲಿದ್ದ ಪ್ರಮುಖರಾಗಿದ್ದರು. ಭಾರತ ತನ್ನದೇ ಆದ “ಒಲಿಂಪಿಕ್ ಹಾಸ್ಪಿಟಾಲಿಟಿ ಹೌಸ್’ ಒಂದನ್ನು ಟೋಕಿಯೊದಲ್ಲಿ ನಿರ್ಮಿಸಿದೆ. 2,200 ಚದರ ಮೀ. ವ್ಯಾಪ್ತಿಯ ಈ ಕಟ್ಟಡದಲ್ಲಿ ಒಲಿಂಪಿಕ್ಸ್ ವೀಕ್ಷಣೆಗಾಗಿ ಬರುವ ಭಾರತದ ಪ್ರವಾಸಿಗರಿಗೆ ವಿಶೇಷ ವ್ಯವಸ್ಥೆಗಳ ಏರ್ಪಾಡು ಮಾಡಲಾಗುವುದು. ಹಾಗೆಯೇ ಪಾರ್ಟಿ, ಪದಕ ಸಂಭ್ರಮ ಇನ್ನಿತರ ಚಟುವಟಿಕೆ ಗಳಿಗೂ ಇಲ್ಲಿ ಅವಕಾಶ ನೀಡಲಾಗುವುದು. ಜತೆಗೆ ವಿಶೇಷ ವೈದ್ಯಕೀಯ ಸೌಲಭ್ಯ ಕೂಡ ಇರಲಿದೆ. ಭಾರತದ ಬ್ರ್ಯಾಂಡೆಡ್ ಉತ್ಪನ್ನಗಳ ವ್ಯಾಪಾರಕ್ಕೂ ಇಲ್ಲಿ ಅವಕಾಶವಿದೆ. ಇದನ್ನು ವೀಕ್ಷಿಸುವುದು ಭಾರತದ ನಿಯೋಗದ ಉದ್ದೇಶವಾಗಿತ್ತು.