Advertisement

ದಿಲ್ಲಿ ಸರಕಾರಕ್ಕೆ ಹೊಸ ಅಧಿಕಾರವಿಲ್ಲ:ಸುಪ್ರೀಂ ತೀರ್ಪು ಬಗ್ಗೆ ಜೇತ್ಲಿ

03:31 PM Jul 05, 2018 | Team Udayavani |

ಹೊಸದಿಲ್ಲಿ : ‘ದಿಲ್ಲಿ ಸರಕಾರದ ಮೇಲಿನ ನಿಯಂತ್ರಣ ಕುರಿತಾದ ಸುಪ್ರೀಂ ಕೋರ್ಟ್‌ ತೀರ್ಪನ್ನು ಆಮ್‌ ಆದ್ಮಿ ಪಕ್ಷ ಸಂಭ್ರಮಿಸುವುದಕ್ಕೆ ಯಾವುದೇ ಕಾರಣಗಳಿಲ್ಲ; ಆಪ್‌ ಸರಕಾರಕ್ಕೆ ಈಗಲೂ ಐಎಎಸ್‌ ಅಧಿಕಾರಿಗಳ ವರ್ಗಾವಣೆಯನ್ನು ನಿಯಂತ್ರಿಸುವ ಅಥವಾ ತನಿಖಾ ಆಯೋಗವನ್ನು ಸ್ಥಾಪಿಸುವ ಕಾನೂನು ಸಮ್ಮತ ಅಧಿಕಾರಗಳು ಸುಪ್ರೀಂ ಕೋರ್ಟಿನ ತೀರ್ಪಿನಿಂದ ಪ್ರಾಪ್ತವಾಗಿಲ್ಲ’ ಎಂದು ಕೇಂದ್ರ ಸಚಿವ ಅರುಣ್‌ ಜೇತ್ಲಿ ಹೇಳಿದ್ದಾರೆ.

Advertisement

ಸರ್ವೋಚ್ಚ ನ್ಯಾಯಾಲಯದ ತೀರ್ಪು ನಿನ್ನೆ ಪ್ರಕಟವಾದೊಡನೆಯೇ ಆಮ್‌ ಆದ್ಮಿ ಪಕ್ಷ ತನಗಿನ್ನು ತನ್ನ ಇಷ್ಟಾನುಸಾರ ಸರಕಾರಿ ಅಧಿಕಾರಿಗಳನ್ನು ನೇಮಿಸುವ ಮತ್ತು ವರ್ಗಾಯಿಸುವ ಅಧಿಕಾರ ತನಗೆ ಪ್ರಾಪ್ತವಾಗಿದೆ ಎಂದು ಸಂಭ್ರಮಿಸಿತ್ತು. 

ಅರುಣ್‌ ಜೇತ್ಲಿ ಅವರು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಮೂರು ಮುಖ್ಯ ಅಂಶಗಳನ್ನು ಗುರುತಿಸಿದ್ದಾರೆ: ಅವೆಂದರೆ 1. ದಿಲ್ಲಿ ಒಂದು ಕೇಂದ್ರಾಡಳಿತ ಪ್ರದೇಶ; 2. ಕೇಂದ್ರ ಸರಕಾರಕ್ಕೆ ಇಲ್ಲಿನ ಪೊಲೀಸ್‌, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿಯ ಮೇಲೆ ಏಕಮೇವ ಅಧಿಕಾರ ಇರುತ್ತದೆ; 3. ದಿಲ್ಲಿ ಸರಕಾರಕ್ಕೆ ಅಧಿಕಾರಿಗಳನ್ನು ನೇಮಿಸುವ ಮತ್ತು ವರ್ಗಾಯಿಸುವ ಅಧಿಕಾರ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next