Advertisement

ಪಾರ್ಕ್‌ ಬೇಡ ಬಡವರಿಗೆ ನಿವೇಶನ ಕೊಡಿ

05:36 PM Dec 15, 2019 | Team Udayavani |

ಕೋಲಾರ: ನಗರದ ಹಳೇ ಆಗ್ರೋ ಕಚೇರಿಯ ಸ್ಥಳ ಖಾಲಿ ಇದ್ದು, ಈ ಸ್ಥಳದಲ್ಲಿ 1.70 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್‌ ನಿರ್ಮಾಣ ಮಾಡುತ್ತಿದೆ. ಇಲ್ಲಿ 7 ಎಕರೆ 30 ಗುಂಟೆ ಜಮೀನಿದೆ. 4 ಎಕರೆ 26 ಗುಂಟೆಯಲ್ಲಿ ಪಾರ್ಕ್‌ ನಿರ್ಮಾಣ ಮಾಡುತ್ತಿದೆ. ಉಳಿದ ಸ್ಥಳದಲ್ಲಿ ಅಂಬೇಡ್ಕರ್‌ ಕಲ್ಯಾಣ ಮಂಟಪ ನಿರ್ಮಿಸಿ, ಬಡವರಿಗೆ ನಿವೇಶನ ನೀಡಬೇಕೆಂದು ಅಂಬೇಡ್ಕರ್‌ ಸೇವಾ ಸಮಿತಿ ಪ್ರತಿಭಟಿಸಿತು.

Advertisement

ಆಗ್ರೋ ಕಚೇರಿಯ ಮುಂದೆ ಹೋರಾಟ ನಡೆಸಿ ಮಾತನಾಡಿದ ಅವರು, ಸರ್ವೇ ನಂ.128, ಜಯನಗರ 14ನೇ ವಾರ್ಡ್‌ನಲ್ಲಿ ದಲಿತರ ಸ್ಮಶಾನ ಕಬಳಿಕೆಯಾಗಿದೆ. ರಾಜಕೀಯ ಪ್ರಭಾವಿಗಳಿಂದ ಪಾರ್ಕ್‌ ಸ್ಥಳದಲ್ಲಿ ಅವ್ಯವಹಾರ ನಡೆಯುತ್ತಿದೆ. ಇವೆಲ್ಲವನ್ನು ನಿಲ್ಲಿಸಿ ಮನೆಗಳಿಲ್ಲದ ಬಡವರಿಗೆ ಪಾರ್ಕ್‌ ಬದಲು ನಿವೇಶನ ನೀಡ  ಬೇಕು ಹಾಗೂ ಗುತ್ತಿಗೆದಾರರಿಂದ ನಡೆದಿರುವ ಕಳಪೆ ಕಾಮಗಾರಿ ನಿಲ್ಲಿಸಿ. ಗುತ್ತಿಗೆದಾರರ ಲೈಸೆನ್ಸ್‌ ಕಪ್ಪು ಪಟ್ಟಿಗೆ ಸೇರಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್‌ ತಿಳಿಸಿದರು. ಮುಖಂಡರಾದ ದಲಿತ ನಾರಾಯಣಸ್ವಾಮಿ, ಲಾಯರ್‌ ಚಲಪತಿ, ಪಿ.ಸಿ.ಬಡಾವಣೆ ಮಂಜುನಾಥ್‌, ಸುಬ್ಬು, ಕಾಮಧೇನಹಳ್ಳಿ ಶ್ರೀನಿವಾಸಯ್ಯ, ವಿದ್ಯಾರ್ಥಿ ಘಟಕ ಅಧ್ಯಕ್ಷ ಹೇಮಂತ್‌, ತೊರಲಕ್ಕಿ ಶಶಿ, ಮುದುವಾಡಿ ಲೋಕೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next