Advertisement
ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ? ಅಥವಾ ಆಧಾರ್ ತಯಾರಿಸುವಾಗ ನೀವು ಯಾವ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ನೀಡಿದ್ದಿರಿ ಎಂಬುದನ್ನು ಮರೆಯುವುದು ಸಾಮಾನ್ಯ ಸಮಸ್ಯೆಯಾಗಿದೆ. ವಿಶೇಷವಾಗಿ ನೀವು ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದಾಗ ಅಥವಾ ಎರಡು ಇಮೇಲ್ ಐಡಿಗಳನ್ನು ಬಳಸುತ್ತಿರುವಾಗ ಈ ರೀತಿಯ ಸಮಸ್ಯೆ ಎದುರಾಗುತ್ತದೆ. ಆದರೆ ಈ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ. ಆಧಾರ್-ಲಿಂಕ್ಡ್ ಸೇವಾ ಪೂರೈಕೆದಾರ ಯುಐಡಿಎಐ ಆಧಾರ್ ಕಾರ್ಡ್ ಹೊಂದಿರುವವರಿಗೆ ‘ಇಮೇಲ್ / ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ’ ಸೌಲಭ್ಯವನ್ನು ಒದಗಿಸುತ್ತದೆ. ಅದರ ಸಹಾಯದಿಂದ, ನಿಮ್ಮ ಮೊಬೈಲ್ ಸಂಖ್ಯೆ / ಇಮೇಲ್ ನನ್ನು ಯುಐಡಿಎಐ ಡೇಟಾ ಬೇಸ್ ನಲ್ಲಿ ನೋಂದಾಯಿಸಲಾಗಿದೆಯೆ ಎಂದು ನೀವು ತಿಳಿಯಬಹುದಾಗಿದೆ ಇದನ್ನು ಪರಿಶೀಲಿಸಲು ಸುಲಭವಾದ ಮಾರ್ಗವೂ ಇದೆ.
Related Articles
Advertisement
ಯುಐಡಿಎಐ ಪ್ರಕಾರ, ಆಧಾರ್ ಕೇಂದ್ರದಲ್ಲಿರುವ ಮೊಬೈಲ್ ಸಂಖ್ಯೆ / ಇಮೇಲ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು, ಆಧಾರ್ ಕಾರ್ಡ್ ಹೊಂದಿರುವವರು ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕಾಗುತ್ತದೆ. ಬಯೋಮೆಟ್ರಿಕ್ ದೃಢೀಕರಣ ಎಂದರೆ ವ್ಯಕ್ತಿಯನ್ನು ಗುರುತಿಸಲು ವ್ಯಕ್ತಿಯ ಹೆಬ್ಬೆರಳು, ಬೆರಳಚ್ಚುಗಳು ಮತ್ತು ಕಣ್ಣಿನ ರೆಟಿನಾವನ್ನು ಗುರುತಿಸುವುದು. ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಲಿಂಕ್ ಮಾಡಲು ಯಾವುದೇ ಡಾಕ್ಯುಮೆಂಟ್ ಅಗತ್ಯವಿಲ್ಲ. ಆದರೆ, ಇದಕ್ಕಾಗಿ 50 ರೂಪಾಯಿ ಶುಲ್ಕವನ್ನು ಪಾವತಿಸಬೇಕು.
ಆಧಾರ್ ನ ಮೊಬೈಲ್ ಆ್ಯಪ್ MAadhaar. ಭಾರತ ಸರ್ಕಾರದ ಪರವಾಗಿ ಅಭಿವೃದ್ಧಿಪಡಿಸಿದ ಈ ಅಪ್ಲಿಕೇಶನ್ ಯುಐಡಿಎಐ ನಿರ್ವಹಿಸುತ್ತದೆ. ಈ ಆ್ಯಪ್ ಮೂಲಕ ಸುಮಾರು 35 ರೀತಿಯ ಸರ್ಕಾರಿ ಸೇವೆಗಳನ್ನು ಪಡೆಯಬಹುದು. ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಆ್ಯಪ್ ಮೂಲಕ, ಆಧಾರ್ ಕಾರ್ಡ್ ಡೌನ್ ಲೋಡ್, ಸ್ಥಿತಿ ನವೀಕರಣ, ಆಧಾರ್ ಕಾರ್ಡ್ ಕೇಂದ್ರದ ಮಾಹಿತಿ ಸೇರಿದಂತೆ ಅನೇಕ ಸೇವೆಗಳನ್ನು ಪಡೆಯಬಹುದು. ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೆ, ಈ ಆ್ಯಪ್ ಮೂಲಕ ನಿಮ್ಮ ಆಧಾರ್ ಅನ್ನು ಡೌನ್‌ಲೋಡ್ ಮಾಡಲು ಮತ್ತು ಮುದ್ರಿಸಲು ಸಾಧ್ಯವಾಗುತ್ತದೆ. ಇದಲ್ಲದೆ, ನಿಮ್ಮ ಆಧಾರ್ ಅನ್ನು ಎಲ್ಲಿ ಬಳಸಲಾಗಿದೆ ಎಂಬುದರ ಕುರಿತು ಎಲ್ಲಾ ಮಾಹಿತಿಯನ್ನು ಈ ಅಪ್ಲಿಕೇಶನ್ ಮೂಲಕ ಸಹ ಕಾಣಬಹುದು.
ಓದಿ : ಪೆರ್ಡೂರು ಮೇಳದ ಖ್ಯಾತ ಯಕ್ಷಗಾನ ಕಲಾವಿದ ಕಡಬಾಳ ಉದಯ ಹೆಗಡೆ ನಾಪತ್ತೆ