Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನೇಹಾ ಪ್ರಕರಣವನ್ನು ಸಿಐಡಿ ತನಿಖೆ ಕೈಗೊಂಡಿದೆ. ಅಂಜಲಿ ಪ್ರಕರಣವನ್ನು ಕೂಡ ಸಿಐಡಿ ಗೆ ವರ್ಗಾಯಿಸಲಾಗುವುದು. ಸ್ಥಳೀಯ ಪೊಲೀಸರು ಕೂಡ ಸಮರ್ಥರಿದ್ದು, ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎನ್ನುವ ಕಾರಣಕ್ಕೆ ಎರಡು ಪ್ರಕರಣಗಳನ್ನು ಸಿಐಡಿ ಗೆ ವಹಿಸಲಾಗಿದೆ. ಈ ಎರಡು ಹತ್ಯೆಗಳು ದುರದೃಷ್ಟಕರ. ಮಾನವೀಯತೆ ಹಾಗೂ ಕಾನೂನಾತ್ಮಕವಾಗಿ ಎರಡು ಕುಟುಂಬದ ಸದಸ್ಯರನ್ನು ಭೇಟಿಯಾಗಿ ಮಾತನಾಡಿದ್ದೇನೆ. ನಾನು ತಡವಾಗಿ ಬಂದಿದ್ದಾರೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಆದರೆ ಕಾನೂನು ಮತ್ತು ನಿಯಮಗಳ ಪ್ರಕಾರ ಘಟನೆ ನಡೆದ ತತ್ ಕ್ಷಣ ಗೃಹ ಸಚಿವರು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Related Articles
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬ್ಲೂಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.ಇಲ್ಲಿಯವರೆಗೂ ಇಂಟರ್‌ಪೋಲ್‌ನಿಂದ ಯಾವ ಮಾಹಿತಿ ಬಂದಿಲ್ಲ. ಮುಂದಿನ ಹಂತವಾಗಿ ಅವರ ಪಾಸ್‌ಪೋರ್ಟ್‌ರದ್ದುಪಡಿಸುವಂತೆ ವಾರಂಟ್ ಸಹಿತ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
Advertisement
ಇದೂವರೆಗೂ ಇಂತಹ ದೇಶದಲ್ಲಿದ್ದಾರೆ ಎನ್ನುವು ಕುರಿತು ಇಂಟರ್‌ಪೋಲ್ ಅಧಿಕೃತವಾಗಿ ತಿಳಿಸಿಲ್ಲ. ಈಗಾಗಲೇ ಎರಡ್ಮೂರು ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ. ಆದರೂ ಪ್ರಜ್ವಲ್ ರೇವಣ್ಣ ಬಂದಿಲ್ಲ. ಮುಂದಿನ ಹಂತದಲ್ಲಿ ಅವರ ಪಾಸ್‌ಪೋರ್ಟ್ ರದ್ದು ಪಡಿಸುವಂತೆ ಮನವಿ ಮಾಡಲಾಗುವುದು. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ರದ್ದು ಕೋರಿ ಕೋರ್ಟ್‌ನಿಂದ ಇಲಾಖೆಯು ವಾರಂಟ್ ಪಡೆದಿದ್ದು, ಇದನ್ನು ದೆಹಲಿ ಪಾಸ್‌ಪೋರ್ಟ್ ಕಚೇರಿಗೆ ಪಾರ್ಸ್ ಪೋರ್ಟ್ ರದ್ದು ಮಾಡುವಂತೆ ಪತ್ರ ಬರೆಯಲಾಗುವುದು. ಈ ವಾರಂಟ್‌ಗೆ ಅಧಿಕಾರಿಗಳು ಗೌರವ ಕೊಡಬೇಕಾಗುತ್ತದೆ. ಪಾಸ್‌ಪೋರ್ಟ್ ರದ್ದಾದರೆ ಯಾವುದೇ ದೇಶದವರು ಅವರನ್ನು ಇಟ್ಟುಕೊಳ್ಳುವುದಿಲ್ಲ ಎಂದರು.