Advertisement
ಜನ ಬೆಳಗಾಗುತ್ತಿದ್ದಂತೆ ಗೇಟಿನಲ್ಲಿರುವ ವಾಹನಗಳಿಗೆ ನೀರಿನ ಕ್ಯಾನ್ ಅಥವಾ ಬಿಂದಿಗೆಗಳನ್ನು ನೇತುಹಾಕುತ್ತಾರೆ. ಚಿಲ್ಲರೆ ಜೇಬಿಗಿಳಿಸಿಕೊಂಡು, ಊರ ಹೊರಗಿರುವ ಖಾಸಗಿ ಕುಡಿಯುವ ನೀರಿನ ಘಟಕದತ್ತ ಮುಖಮಾಡುತ್ತಾರೆ. ಅಲ್ಲಿ ಹದಿನೈದು ರೂಪಾಯಿ ಕೈಗಿಟ್ಟು, ನೀರು ತುಂಬಿಕೊಂಡು ವಾಪಸ್ಸಾಗುತ್ತಾರೆ.
Related Articles
Advertisement
ಆದರೆ, ಕುಡಿಯುವ ನೀರಿನದ್ದೇ ಗೋಳು. ಮೂರು ತಿಂಗಳ ಹಿಂದೆ ಕಾವೇರಿ ಪೈಪ್‌ಲೈನ್ ಹಾಕಿದ್ದಾರೆ. ಇನ್ನೂ ನೀರು ಹರಿದಿಲ್ಲ. ಸರ್ಕಾರದ ಶುದ್ಧ ಕುಡಿಯುವ ನೀರಿನ ಘಟಕ ದೂರದಲ್ಲಿದೆ. ಹಾಗಾಗಿ, ಪಕ್ಕದಲ್ಲೇ ಇರುವ ಖಾಸಗಿ ಕುಡಿಯುವ ನೀರಿನ ಘಟಕಕ್ಕೆ ಹೋಗಿ ನೀರು ತರುತ್ತೇವೆ’ ಎಂದು ಚಿಕ್ಕಸಂದ್ರದ ರವಿ ತಿಳಿಸುತ್ತಾರೆ.
ಟ್ಯಾಂಕ್ ಸ್ವತ್ಛಗೊಳಿಸಿ ದಶಕವಾಯ್ತು!: ಇನ್ನು ಮರಿರಾಮು ಅವರ ಮನೆ ಮುಂದೆಯೇ ದೊಡ್ಡ ಟ್ಯಾಂಕ್ ಇದೆ. ಆದರೆ, ಅದನ್ನು ಸ್ವತ್ಛಗೊಳಿಸಿ ದಶಕ ಕಳೆದಿದೆ! ಕೊಳವೆಬಾವಿ ನೀರು ಈ ಟ್ಯಾಂಕ್‌ಗೆ ತುಂಬಲಾಗುತ್ತದೆ. ಅಲ್ಲಿಂದ ಮನೆಗಳಿಗೆ ಪೂರೈಸಲಾಗುತ್ತದೆ. ಹೀಗೆ ಪೂರೈಕೆಯಾಗುವ ನೀರಿನಲ್ಲಿ ಎಷ್ಟೋ ಸಲ ಹುಳುಗಳು ಬಂದ ಉದಾಹರಣೆಗಳೂ ಇವೆ. ಆದರೆ, ಬಳಕೆಗೆ ಮಾತ್ರ ಮೀಸಲಿಡಲಾಗಿದೆ.
ಸರ್ಕಾರದ ಶುದ್ಧ ಕುಡಿಯುವ ನೀರಿನ ಘಟಕಕ್ಕಿಂತ ಖಾಸಗಿ ಘಟಕದಲ್ಲಿ ನೀರು ಹೆಚ್ಚು ಶುಚಿಯಾಗಿರುತ್ತವೆ. ಹಾಗಾಗಿ, ತುಸು ದುಬಾರಿ ಎನಿಸಿದರೂ ಅಲ್ಲಿಂದಲೇ ತರುತ್ತೇವೆ ಎಂದು ಮರಿರಾಮು ಅಸಹಾಯಕತೆ ತೋಡಿಕೊಂಡರು. “ಶೆಟ್ಟಿಹಳ್ಳಿಯ ಬೈರವೇಶ್ವರ ನಗರ, ಅಂಜನಾದ್ರಿ ನಗರ, ಎವೈಆರ್ ಲೇಔಟ್ ಸೇರಿದಂತೆ ಸುಮಾರು ನಾಲ್ಕು ಸಾವಿರ ಮನೆಗಳು ಇವೆ. ನೀರಿನ ಸೌಲಭ್ಯ ಮಾತ್ರ ಸಮರ್ಪಕವಾಗಿಲ್ಲ.
ಅಂತರ್ಜಲ ಸಾಕಷ್ಟು ಕುಸಿದಿದ್ದು, ಬೇಸಿಗೆಯಲ್ಲಿ ಇದು ಮತ್ತಷ್ಟು ಉಲ್ಬಣಿಸಿದೆ. ಸುತ್ತಲಿನ ಶಾಲೆಗಳ ಸಾವಿರಾರು ಮಕ್ಕಳಿಗೆ ನಾನೇ ಉಚಿತವಾಗಿ ಶುದ್ಧ ಕುಡಿಯುವ ನೀರು ಪೂರೈಸುತ್ತಿದ್ದೇನೆ. ಸಾಮಾನ್ಯ ಜನರಿಗೆ ಮಾತ್ರ ಕ್ಯಾನ್‌ಗೆ 15 ರೂ. ನಿಗದಿಪಡಿಸಿದ್ದೇನೆ,’ ಎಂದು ಸಾಯಿ ಅಕ್ವಾ ಬಿವರೇಜಸ್ ಮಾಲಿಕ ಸುರೇಶ್ ಮಾಹಿತಿ ನೀಡುತ್ತಾರೆ.
ಎಂಟು ವಾರ್ಡ್‌ಗಳಲ್ಲಿ ಏಳು ಕಡೆ ಯಾವುದೇ ಸಮಸ್ಯೆ ಇಲ್ಲ. ಒಂದು ಕಡೆ ಮಾತ್ರ ತುಸು ತೊಂದರೆ ಇದೆ. ಅದೂ ನಾಲ್ಕು ಹಳ್ಳಿಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಲೆಲ್ಲಾ ಕೊಳವೆಬಾವಿಗಳನ್ನು ಕೊರೆದು, ನೀರು ಪೂರೈಸಲಾಗುತ್ತಿದೆ ಎಂದು ಬಿಬಿಎಂಪಿ ದಾಸರಹಳ್ಳಿ ವಲಯದ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.
ನೀರು ಪೂರೈಕೆ; ತಾರತಮ್ಯ ಯಾಕೆ?: ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳ ಪೈಕಿ ನಾಲ್ಕು ಹಳ್ಳಿಗಳು ದಾಸರಹಳ್ಳಿ ವಲಯಕ್ಕೆ ಬರುತ್ತವೆ. ಹೀಗೆ ಸೇರ್ಪಡೆಗೊಂಡು ಹತ್ತು ವರ್ಷವಾದರೂ ಈ ಗ್ರಾಮಗಳಿಗೆ ಕಾವೇರಿ ನೀರು ಕನಸಾಗಿಯೇ ಉಳಿದಿದೆ. ಉದ್ದೇಶಿತ ವಲಯದಲ್ಲಿ 8 ವಾರ್ಡ್‌ಗಳು ಬರುತ್ತವೆ. ಏಳು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ, ಶೆಟ್ಟಿಹಳ್ಳಿ, ಚಿಕ್ಕಸಂದ್ರ, ಅಬ್ಬಿಗೆರೆ, ಮ್ಯಾಗರಹಳ್ಳಿಗಳಲ್ಲಿ ಮಾತ್ರ ನೀರಿಗೆ ಹಾಹಾಕಾರ. ಈ ತಾರತಮ್ಯ ಯಾಕೆ ಎಂದು ಸ್ಥಳೀಯ ನಿವಾಸಿಗಳು ಪ್ರಶ್ನಿಸುತ್ತಾರೆ.
* ವಿಜಯಕುಮಾರ ಚಂದರಗಿ