Advertisement

ಮಂಗಳೂರಲ್ಲಿ ಎಐಎ ಕೇಂದ್ರ ಅಗತ್ಯವಿಲ್ಲ: ದಿನೇಶ್‌

11:18 AM Jul 25, 2017 | Team Udayavani |

ಬೆಂಗಳೂರು: ಕೋಮು ಗಲಭೆಯ ಪ್ರಕರಣಗಳಿಂದಾಗಿ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಸ್ಥಾಪಿಸುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಗಲಭೆಗೆ ಪ್ರಚೋದನೆ ನೀಡುತ್ತಾರೆ. ರಾಜ್ಯ ಸರ್ಕಾರ ಹಾಗೂ ಪೋಲಿಸರು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಹೇಳಿದರು.

Advertisement

ಕಳೆದ ಹತ್ತು ವರ್ಷದಲ್ಲಿ ಮಂಗಳೂರಿನಲ್ಲಿ 279 ಕೋಮು ಗಲಭೆ ಪ್ರಕರಣಗಳು ದಾಖಲಾಗಿವೆ. 2 ವರ್ಷಗಳಲ್ಲಿ ಕಲ್ಲಡ್ಕ ಪೊಲೀಸ್‌ ಸ್ಟೇಶನ್‌ ವ್ಯಾಪ್ತಿಯಲ್ಲಿ ಶೇ. 70 ರಷ್ಟು ಕೋಮು ಗಲಭೆಗಳು ನಡೆದಿವೆ. ಅವು ಬಿಜೆಪಿ ಪ್ರಾಯೋಜಿತ ಕೋಮುಗಲಭೆಗಳು. ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರು ಕಾನೂನಿನ ಕೈಗೆ ಸಿಗದಂತೆ ಪ್ರಚೋದನೆ ಮಾಡುತ್ತಿದ್ದು, ಅಮಾಯಕರು ಬಲಿಯಾಗುತ್ತಿದ್ದಾರೆ. ಅದನ್ನು ಕಾಂಗ್ರೆಸ್‌ ರಾಜಕೀಯವಾಗಿಯೇ ಎದುರಿಸುತ್ತದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಗೋ ರಕ್ಷಕರ ಹೆಸರಲ್ಲಿ ಹಿಂಸೆ ಮಾಡುವವರಿಗೆ ರಕ್ಷಣೆ ಕೊಡಬೇಡಿ ಎಂದು ಮನವಿ ಮಾಡುತ್ತಾರೆ. ಅವರ ಸಂಘಟನೆಯವರೇ ಗಲಾಟೆ ಮಾಡಿಸುತ್ತಾರೆ. ಪ್ರಧಾನಿಯವರು ಕೋಮು ಗಲಭೆ ಸೃಷ್ಠಿಸುವ ಶೋಭಾ ಕರಂದ್ಲಾಜೆ, ನಳಿನ ಕುಮಾರ್‌ ಕಟಿಲ್‌ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ಕೊಡಲಿ ಎಂದು ಆಗ್ರಹಿಸಿದರು. 

ಶೋಭಾ ಕ್ಷಮೆ ಕೇಳಲಿ: ಸಂಸದೆ ಶೋಭಾ ಕರಂದ್ಲಾಜೆ ಮಂಗಳೂರಿನ ಗಲಭೆ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ತಪ್ಪು ಮಾಹಿತಿ ಕೊಟ್ಟು ಪತ್ರ ಬರೆದಿದ್ದಾರೆ. ಈಗ ಅವರೇ ಮತ್ತೂಂದು ಪತ್ರ ಬರೆದು ತಾವು ತಪ್ಪು ಮಾಡಿರುವುದನ್ನು ಒಪ್ಪಿಕೊಳ್ಳಬೇಕು ಹಾಗೂ ಬಹಿರಂಗ ಕ್ಷಮೆ ಕೇಳಬೇಕು ಎಂದು ದಿನೇಶ್‌ ಗುಂಡೂರಾವ್‌ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next