Advertisement
ಸಿಬಿಐ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಸಂಜಯ್ ರಾಯ್ ನ ನಾರ್ಕೋ ಅನಾಲಿಸಿಸ್ ಪರೀಕ್ಷೆ ನಡೆಸಲು ಅವಕಾಶ ಕೋರಿತ್ತು, ಕೋಲ್ಕತಾದ ಕೋರ್ಟ್ ನಿರಾಕರಿಸಿದೆ.
ಆರೋಪಿಯೊಬ್ಬನ ದೇಹದೊಳಗೆ ಸೋಡಿಯಂ ಪೆಂಟೋಥಾಲ್ ಎಂಬ ದ್ರವವನ್ನು ಇಂಜೆಕ್ಟ್ ಮಾಡಿ, ಆತನ ಜ್ಞಾನತಪ್ಪಿಸಿ ಬಳಿಕ ಅವನಿಂದ ಸತ್ಯ ಹೊರಬೀಳಿಸುವ ಕ್ರಿಯೆ ಇದು. ಈ ಸೋಡಿಯಂ ಪೆಂಟೋಥಾಲ್‌ಗೆ ಟ್ರಾಥ್ ಸೆರಮ್ ಎಂದೂ ಕರೆಯುತ್ತಾರೆ. ವ್ಯಕ್ತಿಯೊಬ್ಬ ಸ್ವಯಂ ಜ್ಞಾನ ಕಳೆದುಕೊಂಡಾಗ ಆತ ಹಿಪ್ನೋಟಿಕ್ ಮೋಡ್‌ಗೆ ಹೋಗುತ್ತಾನೆ. ಆಗ ತನಿಖಾಧಿಕಾರಿಗಳು ಮುಕ್ತವಾಗಿ ಪ್ರಶ್ನೆ ಕೇಳಿ ಉತ್ತರ ಪಡೆಯಬಹುದು.
Related Articles
ಒಬ್ಬ ಮಾನಸಿಕ ತಜ್ಞ, ತನಿಖಾಧಿಕಾರಿ ಅಥವಾ ಫಾರೆನ್ಸಿಕ್ ತಜ್ಞರೊಬ್ಬರ ಉಪಸ್ಥಿತಿ ಯಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಕೋರ್ಟ್‌ನ ಒಪ್ಪಿಗೆ ಬೇಕು,ವೈದ್ಯಕೀಯವಾಗಿಯೂ ಫಿಟ್ ಆಗಿರಬೇಕು. ಇದನ್ನು ಪರಿಶೀಲಿಸಿ, ಸೋಡಿಯಂ ಪೆಂಟೋಥಾಲ್ ಅನ್ನು ಆತನ ದೇಹಕ್ಕೆ ಚುಚ್ಚಲಾಗುತ್ತದೆ. ಎಷ್ಟು ಡೋಸೇಜ್ ನೀಡಬೇಕು ಎಂಬುದು ಆರೋಪಿಯ ವಯಸ್ಸು, ಲಿಂಗ ಮತ್ತು ಇತರ ವೈದ್ಯಕೀಯ ಸ್ಥಿತಿ ನೋಡಿ ನಿರ್ಧಾರ ಮಾಡಲಾಗುತ್ತದೆ.
Advertisement
ಡೋಸೇಜ್ ಹೆಚ್ಚು ಕಡಿಮೆಯಾದರೆ?ಒಂದು ವೇಳೆ ಡೋಸೇಜ್ ಹೆಚ್ಚು ಕಡಿಮೆಯಾದರೆ ಆರೋಪಿ ಅಥವಾ ರೋಗಿ ಕೋಮಾಗೆ ಜಾರಬಹುದು,
ಸಾವೇ ಸಂಭವಿಸಬಹುದು. ಇದು ನಿಖರವೇ?
ನಾರ್ಕೊ ಅನಾಲಿಸಿಸ್ ಟೆಸ್ಟ್ ಹೆಚ್ಚು ನಿಖರ ಎಂಬುದು ದೃಢ ಪಟ್ಟಿಲ್ಲ. ಕೆಲವೊಮ್ಮೆ ಆರೋಪಿ ಸುಳ್ಳನ್ನೂ ಹೇಳಿರುತ್ತಾನೆ. ಭಾರತದಲ್ಲಿ ನಾರ್ಕೊ ಟೆಸ್ಟ್
ನಾರ್ಕೊ ಟೆಸ್ಟ್ ಅನ್ನು 2002ರ ಗೋಧ್ರಾ ಪ್ರಕರಣದ ಆರೋಪಿಗಳಿಗೆ ಮೊದಲು ಮಾಡಲಾಯಿತು. ಬಳಿಕ 2003ರ ತೆಲಗಿ ನಕಲಿ ಛಾಪಾ ಕಾಗದ ಹಗರಣದಲ್ಲಿ ಅಬ್ದುಲ್ ಕರೀಂ ತೆಲಗಿಗೂ ಮಾಡಲಾಗಿತ್ತು. ಗುಜರಾತ್‌ನ ನಿಥಾರಿ ಪ್ರಕರಣದ ಆರೋಪಿಗಳಿಗೂ ನಾರ್ಕೊ ಟೆಸ್ಟ್ ನಡೆಸಲಾಗಿತ್ತು.