Advertisement

ರಾಜ್ಯದಲ್ಲಿ ಇನ್ನು ಮೋಡ ಬಿತ್ತನೆಯಿಲ್ಲ: ಈಶ್ವರಪ್ಪ

12:30 PM Nov 07, 2019 | keerthan |

ಬೆಂಗಳೂರು: ರಾಜ್ಯದಲ್ಲಿ ಜಲಪ್ರಳಯ ಆಗುತ್ತಿದೆ. ಹೀಗಾಗಿ ಮೋಡ ಬಿತ್ತನೆ ಬೇಡ ಅನ್ನೋದು ನನ್ನ ನಿರ್ಧಾರ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಮೋಡ ಬಿತ್ತನೆ ಟೆಂಡರ್ ವಿಚಾರವಾಗಿ ಮಾತನಾಡಿದ ಸಚಿವ ಈಶ್ವರಪ್ಪ, ಕಳೆದ ಬಾರಿ ಸರ್ಕಾರ 2 ವರ್ಷದ ಟೆಂಡರ್ ಕರೆದಿತ್ತು ಇದರ ಬಗ್ಗೆ ವಿಚಾರಿಸುತ್ತೇವೆ. ಸಧ್ಯಕ್ಕೆ ಯಾವುದೇ ಕಾರಣಕ್ಕೂ ಮೋಡ ಬಿತ್ತನೆ ಮುಂದುವರೆಸಬಾರದು ಎಂದರು.

ಎರಡು ವರ್ಷ ಮೋಡ ಬಿತ್ತನೆ ಯಾಕೆ ಕೊಟ್ಟಿದ್ದಾರೆ ಅಂತ ಗೊತ್ತಿಲ್ಲ. ಯಾರಿಗೆ ಯಾಕೆ ಕಾಂಟ್ರಾಕ್ಟ್ ಕೊಟ್ಟಿದ್ದಾರೆ ಅದು ನಮಗೆ ಸಂಬಂಧ ಇಲ್ಲ.  ರಾಜ್ಯದ ಹಣ ಸರಿಯಾಗಿ ಬಳಕೆ ಆಗ್ಬೇಕು. ಅದರಲ್ಲಿ ಏನೇನು ಅಗ್ರಿಮೆಂಟ್ ಇದೆಯೋ ವಿಚಾರಿಸುತ್ತೇನೆ. ಎರಡು ವರ್ಷದವರೆಗೆ ಹೇಗೆ ತೀರ್ಮಾನ ಮಾಡಿದರೋ ಗೊತ್ತಿಲ್ಲ ಎಂದು ಈಶ್ವರಪ್ಪ ಹೆಳಿದರು.

ಮುಂದುವರಿದು ಮಾತನಾಡಿದ ಅವರು, ಈಗಾಗಲೇ 528 ಗ್ರಾಮ ಪಂಚಾಯತ್ ಅಧ್ಯಕ್ಷರ ಜೊತೆ ಮಾತನಾಡಿದ್ದೇನೆ.  ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಹೆಚ್ಚಿನ ಆದ್ಯತೆ ಕೊಡಲು ನಿರ್ಧಾರ ಮಾಡಲಾಗಿದೆ. ಇದಲ್ಲದೆ ಬ್ಯಾಟರಿ‌ ಸಿಸ್ಟಮ್ ಇಲ್ಲದೇ ಸೋಲಾರ್ ಹೇಗೆ ಕೊಡಬಹುದು ಎಮಬ ಬಗ್ಗೆಯೂ ಯೋಚನೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next