Advertisement
ಪುತ್ತೂರು ವಿಧಾನಸಭಾ ಕ್ಷೇತ್ರದೊಂದಿಗೆ ಸೇರಿದ್ದ ಸುಳ್ಯ ತಾಲೂಕು ಪ್ರತ್ಯೇಕಗೊಂಡು ಹೊಸ ಕ್ಷೇತ್ರವಾದ ಅನಂತರ 14 ಬಾರಿ ಚುನಾವಣೆ ಎದುರಿಸಿದೆ. ಇಲ್ಲಿನ ಜನಪ್ರತಿನಿಗಳು ಆಡಳಿತ ಪಕ್ಷದ ಸದಸ್ಯರಾಗಿದ್ದರೂ, ಅವರಿಗೆ ಗೂಟದ ಕಾರು ಏರುವ ಭಾಗ್ಯ ಸಿಕ್ಕಿಲ್ಲ.
1952 ಪ್ರಥಮ ಮತ್ತು 1957 ರ ದ್ವಿತೀಯ ಚುನಾವಣೆಯಲ್ಲಿ ಸುಳ್ಯ ತಾಲೂಕು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿತ್ತು. 1962 ರಲ್ಲಿ ಪುತ್ತೂರಿನಿಂದ ಪ್ರತ್ಯೇಕಗೊಂಡು ಸುಳ್ಯ ಹೊಸ ವಿಧಾನಸಭಾ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂತು. 1962 ರ ಅನಂತರ 14 ಚುನಾವಣೆಗಳು ನಡೆದು 7 ಬಾರಿ ಬಿಜೆಪಿ, 5 ಬಾರಿ ಕಾಂಗ್ರೆಸ್, 1 ಬಾರಿ ಸ್ವತಂತ್ರ ಪಕ್ಷ ಮತ್ತು 1 ಬಾರಿ ಜನತಾ ಪಕ್ಷದ ಅಭ್ಯರ್ಥಿ ಗಳು ಇಲ್ಲಿ ಗೆಲುವು ಸಾಧಿಸಿದ್ದರು.
Related Articles
1962 ರಲ್ಲಿ ಹೊಸ ಸುಳ್ಯ ಕ್ಷೇತ್ರ ರಚನೆಗೊಂಡು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿತ್ತು. 1967 ಅನಂತರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಬದಲಾಯಿತು. ಇಲ್ಲಿ ಪ್ರಥಮವಾಗಿ ಗೆದ್ದದ್ದು ಸ್ವತಂತ್ರ ಪಕ್ಷದ ರಾಮಚಂದ್ರ ಅವರು. ಅನಂತರ ಪಿ.ಡಿ ಬಂಗೇರ, ಎ.ರಾಮಚಂದ್ರ, ಬಾಕಿಲ ಹುಕ್ರಪ್ಪ, ಕೆ.ಕುಶಲ, ಅಂಗಾರ ಅವರು ಕ್ಷೇತ್ರ ಪ್ರತಿನಿಸಿದ್ದರು. ಹಾಲಿ ಶಾಸಕ ಎಸ್.ಅಂಗಾರ ಅವರು ಗರಿಷ್ಠ ಅವಧಿಯಿಂದ ಶಾಸಕರಾಗಿದ್ದಾರೆ.
Advertisement
ಸುಳ್ಯ ತಾಲೂಕಿನವರಾಗಿ, ಬೇರೆ ಕ್ಷೇತ್ರದಿಂದ ಗೆದ್ದವರು ಮುಖ್ಯಮಂತ್ರಿ, ಕೇಂದ್ರ-ರಾಜ್ಯದಲ್ಲಿ ಸಚಿವರಾದ ಉದಾಹರಣೆಗಳಿವೆ. ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಜನಪ್ರತಿನಿಧಿಗಳಿಗೆ ಆ ಭಾಗ್ಯ ಇನ್ನೂ ಸಿಕ್ಕಿಲ್ಲ.
ಪುತ್ತೂರು-ಸುಳ್ಯ ತಾಲೂಕು ಏಕ ವಿಧಾನಸಭಾ ಕ್ಷೇತ್ರವಾಗಿದ್ದ ಕಾಲದಲ್ಲಿ 1952, 57 ಮತ್ತು 62 ರಲ್ಲಿ ಸುಳ್ಯದ ಬಾಳುಗೋಡು ನಿವಾಸಿ, ಪುತ್ತೂರಿನಲ್ಲಿ ನ್ಯಾಯವಾದಿಯಾಗಿದ್ದ ಕೂಜುಗೂಡು ವೆಂಕಟರಮಣ ಗೌಡ ಅವರು ಪುತ್ತೂರಿನಿಂದ ಸ್ಪರ್ಧಿಸಿ, ಮೂರು ಅವಗೆ ಶಾಸಕರಾಗಿದ್ದರು. ಈ ಸಂದರ್ಭ ಕೆ.ವಿ.ಗೌಡ ಅವರಿಗೆ ನಿಜಲಿಂಗಪ್ಪ ಸರಕಾರದಲ್ಲಿ ಉಪ ಸಚಿವ ಸ್ಥಾನದ ಆಹ್ವಾನ ಬಂದಿತ್ತು. ಆದರೆ ಕ್ಯಾಬಿನೆಟ್ ಸ್ಥಾನ ನಿರೀಕ್ಷೆಯಲ್ಲಿದ್ದ ಕೆ.ವಿ. ಗೌಡ ಅವರು ಇದನ್ನು ತಿರಸ್ಕರಿಸಿದ್ದರು. ಅದಾದ ಬಳಿಕ 2008 ರ ಬಿಜೆಪಿ ಸರಕಾರದ ಅವಧಿಯಲ್ಲಿ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ದೊರೆಯಲಿದೆ ಎಂದು ಭಾವಿಸಲಾಗಿತ್ತು. ಅದಕ್ಕಾಗಿ ನಿಯೋಗ ಕೂಡ ತೆರಳಿತ್ತು. ಆದರೆ ಅವಕಾಶ ಸಿಕ್ಕಿರಲಿಲ್ಲ.
ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರಅವಿಭಜಿತ ಜಿಲ್ಲೆಯಲ್ಲಿ ಸುಳ್ಯ ಏಕೈಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. 1989 ರಲ್ಲಿ ಅಂಗಾರ ಅವರು ಮೊದಲ ಬಾರಿಗೆ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಕೆ. ಕುಶಲ ಅವರ ವಿರುದ್ಧ ಪರಾಜಿತಗೊಂಡಿದ್ದರು. 1994 ರಲ್ಲಿ ಕಾಂಗ್ರೆಸ್ ನ ಕೆ.ಕುಶಲ ವಿರುದ್ಧ 52,133 ಮತ ಪಡೆದು 15,051 ಅಂತರದಿಂದ ಗೆಲುವು ಪಡೆದಿದ್ದರು. 1999 ರಲ್ಲಿ ಅಂಗಾರ ಅವರು ಕುಶಲ ಅವರ ವಿರುದ್ಧ 54,814 ಮತ ಪಡೆದು 6,997 ಅಂತರದಿಂದ ಗೆಲುವು ಪಡೆದಿದ್ದರು. 2004 ರಲ್ಲಿ ಕಾಂಗ್ರೆಸ್ ನ ಡಾ|ರಘು ಅವರ ವಿರುದ್ಧ ಅಂಗಾರ ಅವರು 61,480 ಮತ ಗಳಿಸಿ 17,085 ಅಂತರದ ಗೆಲುವು ದಾಖಲಿಸಿದ್ದರು. 2008 ರಲ್ಲಿ ಕಾಂಗ್ರೆಸ್ ನ ಡಾ| ರಘು ವಿರುದ್ಧ 61144 ಮತ ಪಡೆದು, 4322 ಅಂತರದಿಂದ ಗೆದ್ದಿದ್ದರು. 2013 ರಲ್ಲಿ ಕಾಂಗ್ರೆಸ್ ನ ಡಾ|ರಘು ವಿರುದ್ಧ ಅಂಗಾರ ಅವರು 65013 ಮತ ಪಡೆದು, 1372 ಮತಗಳ ಅಂತರದಿಂದ ಹಾಗೂ 2018 ರಲ್ಲಿ ಡಾ|ರಘು ವಿರುದ್ಧ 26,068 ಅಂತರದಿಂದ ಗೆಲುವು ದಾಖಲಿಸಿದ್ದರು. ಕಿರಣ್ ಪ್ರಸಾದ್ ಕುಂಡಡ್ಕ