Advertisement

ತ.ನಾಡು ಟಿ20 ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆದಿಲ್ಲ!

11:29 PM Oct 03, 2019 | Sriram |

ಚೆನ್ನೈ: ತಮಿಳುನಾಡು ಟಿ20 ಕ್ರಿಕೆಟ್‌ ಲೀಗ್‌ನಲ್ಲಿ ಕ್ರಮ ತೆಗೆದುಕೊಳ್ಳುವಂತಹ ಯಾವುದೇ ಫಿಕ್ಸಿಂಗ್‌ ಕೃತ್ಯ ನಡೆದಿಲ್ಲ ಎಂದು ಆಂತರಿಕ ತನಿಖಾ ಸಮಿತಿ ವರದಿ ನೀಡಿದೆ. ಇದನ್ನು ಆಧರಿಸಿ ಪ್ರತಿಕ್ರಿಯೆ ನೀಡಿದ ತಮಿಳುನಾಡು ಕ್ರಿಕೆಟ್‌ ಮಂಡಳಿ ಕಾರ್ಯದರ್ಶಿ ಆರ್‌.ಎಸ್‌. ರಾಮಸ್ವಾಮಿ, “ನಾವು ವರದಿಯನ್ನು ಒಪ್ಪಿಕೊಳ್ಳಲು ತೀರ್ಮಾನಿಸಿದ್ದೇವೆ. ಸಮಿತಿ ಕೆಲವು ರಹಸ್ಯವಾದ ಪ್ರಮುಖ ಶಿಫಾರಸುಗಳನ್ನು ಮಾಡಿದೆ. ತಮಿಳುನಾಡು ಕ್ರಿಕೆಟನ್ನು ಸ್ವತ್ಛವಾಗಿಟ್ಟುಕೊಳ್ಳಲು ಇದು ಅಗತ್ಯವಾಗಿದೆ’ ಎಂದಿದ್ದಾರೆ.

Advertisement

ಇತ್ತೀಚೆಗೆ ತಮಿಳುನಾಡು ಕ್ರಿಕೆಟ್‌ ಟಿ20 ಲೀಗ್‌ನಲ್ಲಿ ಭಾರೀ ಪ್ರಮಾಣದ ಫಿಕ್ಸಿಂಗ್‌ ನಡೆದಿದೆ ಎಂದು ವರದಿ ಆಗಿತ್ತು. ಇಬ್ಬರು ತರಬೇತುದಾರರು, ಕೆಲವು ಪ್ರಥಮ ದರ್ಜೆ ಕ್ರಿಕೆಟಿಗರ ಮೇಲೆ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ಕಣ್ಣಿಟ್ಟಿತ್ತು. ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸೆ. 16ರಂದು ತಮಿಳುನಾಡು ಕ್ರಿಕೆಟ್‌ ಸಂಸ್ಥೆ ಆಂತರಿಕ ತನಿಖಾ ಸಮಿತಿಯನ್ನು ರಚಿಸಿತ್ತು. ಇದರ ವರದಿಯಲ್ಲಿ ಟಿಎನ್‌ಪಿಎಲ್‌ ಸ್ವತ್ಛವಾಗಿದೆ, ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಲಾಗಿದೆ. ಆದರೆ ಈ ವರದಿ ನಿರೀಕ್ಷಿತ ಎಂದು ಕೆಲವು ವಲಯ ಗಳಲ್ಲಿ ಟೀಕೆಗಳು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next