ಪ್ಯಾರಿಸ್: ಕೋವಿಡ್ 19 ವೈರಸ್ ಹರಡುವುದನ್ನು ತಡೆಯಲು 2020ರ ಅಂತ್ಯದಲ್ಲಿ ಫ್ರಾನ್ಸ್ ನಲ್ಲಿ ಜಾರಿಗೊಳಿಸಲಾಗಿದ್ದ ರಾತ್ರಿ ಕರ್ಫ್ಯೂ ಜೂನ್ 20ರಿಂದ ಕೊನೆಗೊಳ್ಳಲಿದೆ ಎಂದು ಫ್ರಾನ್ಸ್ ಅಧ್ಯಕ್ಷ ಜೀನ್ ಕ್ಯಾಸ್ಟೆಕ್ಸ್ ಬುಧವಾರ(ಜೂನ್ 16) ಘೋಷಿಸಿದ್ದಾರೆ.
ಇದನ್ನೂ ಓದಿ:ಸಮಾಧಿಗಳ ಮಧ್ಯೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ; ಮೌಢ್ಯತೆ ವಿರುದ್ಧ ಯುವಕರ ಸಮರ
ದೇಶದಲ್ಲಿ ನಿರೀಕ್ಷೆಗೂ ಮೀರಿ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಮನೆಯಿಂದ ಹೊರಗೆ ತಿರುಗಾಡುವ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಧರಿಸುವುದು ಕೂಡಾ ಶೀಘ್ರದಲ್ಲಿಯೇ ಕೊನೆಗೊಳ್ಳಲಿದೆ ಎಂದು ಕ್ಯಾಸ್ಟೆಕ್ಸ್ ವಾರಕ್ಕೊಮ್ಮೆ ನಡೆಸುವ ಸರ್ಕಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾವೀಗ ಸಂತೋಷದ ಕ್ಷಣದಲ್ಲಿ ಬದುಕುತ್ತಿದ್ದೇವೆ. ಅಲ್ಲದೇ ಜನಜೀವನ ಕೂಡಾ ಯಥಾಸ್ಥಿತಿಗೆ ಮರಳಿದೆ. ಅದಕ್ಕಾಗಿ ನಾವು ಪ್ರತಿಯೊಬ್ಬರಿಗೂ ಧನ್ಯವಾದ ಹೇಳಬೇಕು. ನಾವೀಗ ಸಮರ್ಪಕವಾದ ಹಾದಿಯಲ್ಲಿದ್ದೇವೆ ಎಂದು ಕ್ಯಾಸ್ಟೆಕ್ಸ್ ಈ ಸಂದರ್ಭದಲ್ಲಿ ಹೇಳಿದರು.
ಸತತ ಒಂದು ವಾರಗಳ ಕಾಲದಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗತೊಡಗಿದ್ದು, ಮಂಗಳವಾರ 3,500 ಕೋವಿಡ್ ಪ್ರಕರಣ ವರದಿಯಾಗಿತ್ತು. ಎರಡು ತಿಂಗಳ ಹಿಂದೆ 40 ಸಾವಿರಕ್ಕಿಂತ ಅಧಿಕ ಕೋವಿಡ್ ಪ್ರಕರಣಗಳಿದ್ದವು ಎಂದು ವರದಿ ತಿಳಿಸಿದೆ.