Advertisement

ಮಾಸ್ಕ್ ಬಲುದೂರ, ಹೋಟೆಲ್‌ಗ‌ಳಿಗೆ ವ್ಯಾಪಾರ

11:58 PM Dec 30, 2020 | Team Udayavani |

ಕುಂದಾಪುರ: ನಗರದ ತುಂಬೆಲ್ಲ ಜನಜಂಗುಳಿ. ಹಬ್ಬದ ವಾತಾವರಣ. ಅದೆಷ್ಟೋ ತಿಂಗಳ ಬಳಿಕ ಇಷ್ಟು ಜನರನ್ನು ಏಕಕಾಲದಲ್ಲಿ ಕುಂದಾಪುರ ನಗರ ಕಂಡದ್ದು. ಕೊರೊನಾ, ಲಾಕ್‌ಡೌನ್‌ ಮತ್ತೂಂದು ಮಗದೊಂದು ಎಂದು ಜನಸಂಚಾರವೇ ವಿರಳವಾಗಿದ್ದ ದಿನಗಳಲ್ಲಿ ಆತ್ಭಾಂಧವನಂತೆ ನಗರದ ವ್ಯಾಪಾರದಲ್ಲಿ ಚೇತರಿಕೆಗೆ ಕಾರಣವಾದ್ದು ಮತ ಎಣಿಕೆ.

Advertisement

ಹೋಟೆಲ್‌ಗ‌ಳಲ್ಲಿ ಜನ
ಬಹುತೇಕ ಹೋಟೆಲ್‌ಗ‌ಳು ತುಂಬಿ ತುಳುಕುತ್ತಿದ್ದವು. ವ್ಯಾಪಾರ ಇಲ್ಲ, ಕೊರೊನಾ ಎಂದು ಪ್ರತಿದಿನ ಗೋಳಾಡುತ್ತಿದ್ದ ಹೋಟೆಲ್‌ಗ‌ಳಲ್ಲೆಲ್ಲಾ ಈ ದಿನ ಜನವೋ ಜನ. ಕೆಲವರು ಸಿದ್ಧತೆಯನ್ನಾದರೂ ಮಾಡಿಟ್ಟುಕೊಂಡಿದ್ದರು. ಇನ್ನು ಕೆಲವು ಹೋಟೆಲ್‌ಗ‌ಳಲ್ಲಿ ಬೆಳಗ್ಗೆ 10 ಗಂಟೆಗೆ ಮೊದಲೇ ಮಾಡಿಟ್ಟ ತಿಂಡಿ ಮುಗಿದಿತ್ತು.

ಪಾನೀಯಕ್ಕೆ ಬೇಡಿಕೆ
ಬಿಸಿಲಿನ ಝಳಕ್ಕೆ ಜನ ಹೆಚ್ಚಾಗಿ ತಂಪು ಪಾನೀಯದ ಅಂಗಡಿಗೆ ಹೋಗುತ್ತಿದ್ದರು. ಎಳನೀರು ಸೇರಿದಂತೆ ದ್ರವಾಹಾರದ ಕಡೆಗೆ ಗಮನ ನೀಡುತ್ತಿದ್ದರು. ಐಸ್‌ಕ್ಯಾಂಡಿ ಮಾರಾಟವೂ ಜನ ಸೇರಿದಲ್ಲಿ ನಡೆದಿತ್ತು.

ಮದ್ಯ ಇಲ್ಲ
ವಿಜಯೋತ್ಸವದ ಕಿಕ್‌ ಏರಿಸಲು ಮದ್ಯ ಮಾರಾಟ ಇರಲಿಲ್ಲ. ಮತ ಎಣಿಕೆ ನಡೆಯುವ ಕುಂದಾಪುರ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದ ಕಾರಣ ಮದ್ಯದ ಅಂಗಡಿಗಳು ಬಂದ್‌ ಆಗಿದ್ದವು. ಇದರಿಂದಾಗಿ ಕುಡಿತದ ಮೂಲಕ ವಿಜಯೋತ್ಸವ ಆಚರಿಸಲು ಕೆಲವರಿಗೆ ಸಾಧ್ಯವಾಗಲಿಲ್ಲ.

ಮಾಸ್ಕ್ ಇಲ್ಲ
ಮಾಸ್ಕ್ ಧಾರಣೆ ಕಡ್ಡಾಯವಾಗಿದ್ದರೂ ಮತ ಎಣಿಕೆ ಕೇಂದ್ರದ ಹೊರಗೆ ಬಹುತೇಕ ಮಂದಿ ಗಲ್ಲಕ್ಕೋ, ತಲೆಗೋ, ಕುತ್ತಿಗೆಗೋ ಮಾಸ್ಕ್ ಧರಿಸಿದ್ದರು. ಇನ್ನನೇಕರು ಮಾಸ್ಕ್ ಹಾಕಿರಲೇ ಇಲ್ಲ. ಕೇಂದ್ರ ಒಳಗೆ ಹೋಗಲು ಮಾಸ್ಕ್ ಹಾಗೂ ಸ್ಯಾನಿಟೈಸೇಶನ್‌ ಕಡ್ಡಾಯವಾಗಿತ್ತು. ಆರೋಗ್ಯ ಇಲಾಖೆ ಸಿಬಂದಿಯೇ ಮೈ ಬಿಸಿ ತಪಾಸಣೆ ಮಾಡಿ, ಅಭ್ಯರ್ಥಿಗಳು ಹಾಗೂ ಏಜೆಂಟರ ಕೈಗಳನ್ನು ಸ್ಯಾನಿಟೈಸ್‌ ಮಾಡುತ್ತಿದ್ದರು.

Advertisement

ನಮ್ಮದೇನಾಯಿತು
ಕೇಂದ್ರದ ಹೊರಗಿದ್ದವರದ್ದು ಒಂದೇ ಮಾತು. ನಮ್ಮದೇನಾಯಿತು ಎಂದು. ಎಲ್ಲರಿಗೂ ಅವರ ಪಂಚಾಯತ್‌, ಅವರ ಕ್ಷೇತ್ರ ಮಾತ್ರ ಮುಖ್ಯವಾಗಿತ್ತು. ಆ ಕಾರಣದಿಂದ ಹೊರಬರುತ್ತಿದ್ದ ಪ್ರತಿಯೊಬ್ಬರಿಗೂ ಇದೇ ಪ್ರಶ್ನೆ ಕೇಳುತ್ತಿದ್ದರು. ಪರಿಚಿತರ ಬಳಿಯೂ ಅದನ್ನೇ ಕೇಳುತ್ತಿದ್ದರು. ಕೆಲವರದ್ದು ಗೆಲುವಿನ ಮುಖ, ಇನ್ನು ಕೆಲವರದ್ದು ಸೋತಕಳೆ. ಗೆದ್ದ ಅಭ್ಯರ್ಥಿ ಕೇಂದ್ರದಿಂದ ಬಂದಾಗ ಬೆಂಬಲಿಗರ ಜಯಕಾರ ಕೇಳುತ್ತಿ¤ತ್ತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಆಗಮಿಸಿ ಸಮೀಕ್ಷೆ, ಲೆಕ್ಕಾಚಾರ ನಡೆಸಿ ಮಾಹಿತಿ ಪಡೆದು ತಮ್ಮ ಮುಖಂಡರಿಗೆ ತಲುಪಿಸುತ್ತಿದ್ದರು.

ಗೋಡೆ ಏರಿದರು
ಗಾಂಧಿಮೈದಾನದ ತುಂಬೆಲ್ಲ ಜನರೂ ವಾಹನಗಳೂ. ಆದರೆ ಕಾಲೇಜಿನ ಎಣಿಕೆ ಕೊಠಡಿ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹಾಗಾಗಿ ಕೆಲವರು ಏನಾದರೂ ಕಾಣಿಸೀತಾ ಎಂದು ಆವರಣ ಗೋಡೆ ಏರುತ್ತಿದ್ದರು. ಇನ್ನು ಕೆಲವರು ಕೊಠಡಿಯ ಹೊರಭಾಗದಿಂದ ವಿಜಯದ ಚಿಹ್ನೆ ಪ್ರದರ್ಶಿಸಿ ಬೆಂಬಲಿಗರ ಉತ್ಸಾಹ ಹೆಚ್ಚಿಸುತ್ತಿದ್ದರು.

ತಾ.ಪಂ.ನಿಂದ ಗ್ರಾ.ಪಂ.ಗೆ
ಕರ್ಕುಂಜೆ ಪಂಚಾಯತ್‌ನಲ್ಲಿ ಸತೀಶ್‌ ಪೂಜಾರಿ ಅವರು ಬೆಳಗ್ಗೆಯೇ ಗೆಲುವಿನ ನಗೆ ಬೀರಿದರು. ಇವರು ಪ್ರಸ್ತುತ ತಾ.ಪಂ. ಸದಸ್ಯರು. ಮುಂದಿನ ಮೇ ತಿಂಗಳಿಗೆ ಅವಧಿ ಮುಗಿಯಲಿದೆ. ಇವರಂತೆ ತಾ.ಪಂ. ಸದಸ್ಯರಾದ ಉಮೇಶ್‌ ಶೆಟ್ಟಿ ಕಲ್ಗದ್ದೆ ಹಾಗೂ ವಾಸುದೇವ ಪೈ ಅವರೂ ಗ್ರಾ.ಪಂ.ಗೆ ಸ್ಪರ್ಧಿಸಿದ್ದರು.

ಅಚ್ಚುಕಟ್ಟು
ಮತಎಣಿಕೆ ಸಿಬಂದಿ ಎಣಿಕೆ ಕೇಂದ್ರದ ವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅತಿಹೆಚ್ಚು ಪಂಚಾಯತ್‌ಗಳಿರುವ ಕಾರಣ ಫ‌ಲಿತಾಂಶ ಪ್ರಕಟ ವಿಳಂಬವಾಗುತ್ತಿತ್ತು. ಮಾಧ್ಯಮಗಳಿಗೆ ಮಾಹಿತಿ ಮಾತ್ರ ಸಕಾಲದಲ್ಲಿ ದೊರೆಯುತ್ತಿರಲಿಲ್ಲ. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌ ಭೇಟಿ ನೀಡಿದರು. ಸಹಾಯಕ ಕಮಿಷನರ್‌ ಕೆ. ರಾಜು, ತಹಶೀಲ್ದಾರ್‌ ಆನಂದಪ್ಪ ನಾಯ್ಕ, ಸಿಪಿಐ ಗೋಪಿಕೃಷ್ಣ ಸ್ಥಳದಲ್ಲಿಯೇ ಇದ್ದರು.

ಕೋವಿಡ್‌ ಪರಿಣಾಮ ಇಲ್ಲ
ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಗ್ರಾ.ಪಂ.ಗಳಿರುವ, ಅತಿಹೆಚ್ಚು ಸದಸ್ಯರಿರುವ, ಅತಿ ಹೆಚ್ಚು ಸ್ಪರ್ಧಿಗಳು ಇರುವ ತಾಲೂಕು ಕುಂದಾಪುರ. ಇಲ್ಲಿ 43 ಪಂಚಾಯತ್‌, 554 ಸದಸ್ಯರಿದ್ದಾರೆ. 24 ಸದಸ್ಯರು ಅವಿರೋಧ ಆಯ್ಕೆಯಾಗಿದ್ದು ಉಳಿಕೆ 530 ಸ್ಥಾನಗಳಿಗೆ 1,262 ಮಂದಿ ಸ್ಪರ್ಧಿಸಿದ್ದು ಅವರೆಲ್ಲರ ಮತಗಳ ಎಣಿಕೆ ನಡೆಯಬೇಕಿತ್ತು. ಮೊದಲು ಅಂಚೆ ಮತಗಳನ್ನು ಎಣಿಸಲಾಗುತ್ತಿತ್ತು. ಕೊರೊನಾ ಕಾರಣದಿಂದ ಇವಿಎಂ ಬಳಸದೇ ಮತಪತ್ರಗಳನ್ನು ಬಳಸಿದ್ದರೂ ಕೊರೊನಾ ಕಾರಣಕ್ಕಾಗಿ ಕೈಗೊಂಡ ಸುರಕ್ಷಾ ಕ್ರಮಗಳಿಂದಾಗಿ ಮತ ಎಣಿಕೆ ವಿಳಂಬವಾಗಲಿಲ್ಲ. ಅದು ಫ‌ಲಿತಾಂಶದ ಸಮಯದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next