Advertisement

Nighties,lungi ಧರಿಸಿ ಹೊರಕ್ಕೆ ಬರಬೇಡಿ; ನೋಯ್ಡಾದ ಅಪಾರ್ಟ್‌ಮೆಂಟ್‌ ಮಾಲಿಕರ ಸಂಘ ಮನವಿ

08:45 PM Jun 14, 2023 | Team Udayavani |

ನೋಯ್ಡಾ: ಉತ್ತರಪ್ರದೇಶದ ನೋಯ್ಡಾ ನಗರದ ಹಿಮಸಾಗರ ಎಂಬ ಅಪಾರ್ಟ್‌ಮೆಂಟ್‌ ಮಾಲಿಕರ ಸಂಘವೊಂದು ಮಾಡಿದ ಮನವಿ ಭಾರೀ ಚರ್ಚೆಗೊಳಗಾಗಿದೆ.

Advertisement

ನಿವಾಸಿಗಳು ಎಲ್ಲರೂ ಒಗ್ಗೂಡುವ ಸ್ಥಳದಲ್ಲಿ, ಉದ್ಯಾನವನದಲ್ಲಿ ಉಡುಪುಗಳ ಬಗ್ಗೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿದೆ.

ಮುಖ್ಯವಾಗಿ ಲುಂಗಿ ಉಟ್ಟುಕೊಂಡು, ನೈಟಿ ತೊಟ್ಟು ತಮ್ಮ ಫ್ಲ್ಯಾಟ್‌ಗಳಿಂದ ಹೊರಕ್ಕೆ ಹೋಗಬೇಡಿ ಎಂದು ಹೇಳಿದೆ. ಇದನ್ನು ಕೆಲವರು ಗೌರವದಿಂದ ಸ್ವೀಕರಿಸಿದ್ದರೂ, ಇನ್ನು ಕೆಲವರು ಆಕ್ರೋಶಗೊಂಡಿದ್ದಾರೆ. ಸಂಸ್ಥೆ ಜನರ ತೀರಾ ವೈಯಕ್ತಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಸಿಟ್ಟಾಗಿದ್ದಾರೆ.

ಆದರೆ ಹಿಮಸಾಗರ ಅಪಾರ್ಟ್‌ಮೆಂಟ್‌ ಮಾಲಿಕರ ಸಂಘ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ನಾವು ಯಾರ ವಿರುದ್ಧವೂ ತಾರತಮ್ಯ ಮಾಡುತ್ತಿಲ್ಲ. ನಿವಾಸಿಗಳು ಕೆಲವು ನೀತಿಸಂಹಿತೆಗಳನ್ನು ಪಾಲಿಸುವಂತೆ ಮನವಿ ಮಾಡಿದ್ದೇವೆಷ್ಟೇ. ಕೆಲವರು ದೂರು ನೀಡಿದ್ದರಿಂದ ಹೀಗೆ ಮಾಡಬೇಕಾಯಿತು. ಕೆಲವು ದಿನಗಳ ಹಿಂದೆ ಮಹಿಳೆ , ಹಿರಿಯ ನಾಗರಿಕರೊಬ್ಬರು ಲುಂಗಿ ಉಟ್ಟುಕೊಂಡು ಯೋಗ ಮಾಡುತ್ತಿದ್ದರ ಬಗ್ಗೆ ಆಕ್ಷೇಪಿಸಿದ್ದರು. ಮೊದಲು ಮಾತಿನ ಮೂಲಕ ಸಂದೇಶ ನೀಡಿದ್ದೆವು. ನಂತರ ಈ ಬಗ್ಗೆ ಸುತ್ತೋಲೆ ಹೊರಡಿಸಬೇಕಾಯಿತು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next