Advertisement

ಚೀನದಲ್ಲಿ ಡಿಜಿಟಲ್‌ ಭಿಕ್ಷುಕರು!

11:33 PM Jul 13, 2019 | mahesh |

ಬೀಜಿಂಗ್‌: ನಗರಗಳ ರಸ್ತೆ ಟ್ರಾಫಿಕ್‌ ಸಿಗ್ನಲ್‌ಗ‌ಳು, ದೇವಸ್ಥಾನಗಳ ಎದುರು ಹಾಗೂ ಜನ ಸೇರುವ ಪ್ರದೇಶಗಳಲ್ಲಿ ಭಿಕ್ಷುಕರು ನುಗ್ಗಿ ಪಾತ್ರೆ ಹಿಡಿದು ಭಿಕ್ಷೆ ಬೇಡುವುದು ಭಾರತದಷ್ಟೇ ಚೀನದಲ್ಲೂ ಸಾಮಾನ್ಯ. ಆದರೆ ಒಂದೇ ವ್ಯತ್ಯಾಸವೆಂದರೆ ಚೀನದಲ್ಲಿ ಇತ್ತೀಚೆಗೆ ಇಂತಹ ಪಾತ್ರೆಗಳಿಗೆ ಒಂದು ಕ್ಯೂಆರ್‌ ಕೋಡ್‌ ಅನ್ನೂ ಚೀನೀ ಭಿಕ್ಷುಕರು ಅಂಟಿಸಿಕೊಂಡಿರುತ್ತಾರೆ.

Advertisement

ಚಿಲ್ಲರೆ ಇಲ್ಲ ಎಂದರೆ ಭಿಕ್ಷುಕರಿಗೆ ಏನೂ ಕೊಡದೇ ಹೋಗಬೇಕಿಲ್ಲ. ಒಂದು ರೂ. ಕೊಡುವುದಿದ್ದರೂ ಸ್ಕ್ಯಾನ್‌ ಮಾಡಿ ಡಿಜಿಟಲ್‌ ಪಾವತಿ ಮಾಡಬಹುದು. ಬಸ್‌, ರೈಲು ನಿಲ್ದಾಣ ಹಾಗೂ ಪ್ರವಾಸಿ ತಾಣಗಳಲ್ಲಿ ಇಂಥ ಕ್ಯೂಆರ್‌ ಕೋಡ್‌ ಹಿಡಿದು ಭಿಕ್ಷೆ ಬೇಡುವವರು ಸಾಮಾನ್ಯವಾಗಿ ಕಾಣಸಿಗುತ್ತಾರೆ.

ಅಚ್ಚರಿಯ ಸಂಗತಿಯೆಂದರೆ, ಬ್ಯಾಂಕ್‌ ಖಾತೆ ತೆರೆದು, ಬ್ಯಾಂಕ್‌ ಖಾತೆ ಸಂಖ್ಯೆ ಬಳಸಿ ಕ್ಯೂಆರ್‌ ಕೋಡ್‌ ಜನರೇಟ್‌ ಮಾಡುವಷ್ಟು ಹಣ ಇವರ ಬಳಿ ಇದ್ದರೆ ಯಾಕೆ ಇವರು ಭಿಕ್ಷೆ ಬೇಡುತ್ತಿದ್ದರು ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ವಾಸ್ತವ ಬೇರೆಯೇ ಇದೆ, ಚೀನದಲ್ಲಿ ಪ್ರಮುಖ ಇ-ವ್ಯಾಲೆಟ್‌ ಕಂಪೆನಿಗಳಾದ ಅಲಿಬಾಬಾ ಸಂಸ್ಥೆಯ ಅಲಿಪೇ ಮತ್ತು ಟೆನ್ಸೆಂಟ್‌ ಕಂಪೆನಿಯ ವಿಚ್ಯಾಟ್‌ ವ್ಯಾಲೆಟ್‌ ಕಂಪೆನಿಗಳು ಈ ಭಿಕ್ಷುಕರಿಗೆ ಕ್ಯೂಆರ್‌ಕೋಡ್‌ಗಳನ್ನು ಮಾಡಿಕೊಟ್ಟಿವೆ.

ಜನರು ಕೇವಲ ಸ್ಕ್ಯಾನ್‌ ಮಾಡಿದರೆ ಸಾಕು. ಸ್ಕ್ಯಾನ್‌ ಮಾಡುವ ಮೂಲಕ ಬರುವ ಡೇಟಾವನ್ನು ಈ ಕಂಪೆನಿಗಳು ಸಣ್ಣ ಉದ್ದಿಮೆಗಳಿಗೆ ಮಾರುತ್ತವೆ. ಪ್ರತಿ ಸ್ಕ್ಯಾನ್‌ಗೂ 7 ರಿಂದ 15 ರೂ.ವರೆಗೂ ಭಿಕ್ಷುಕರಿಗೆ ಸಿಗುತ್ತದೆ. ಅಂದರೆ ವಾರಕ್ಕೆ ಸುಮಾರು 45 ಸಾವಿರ ರೂ.ಗಳನ್ನು ಅವರು ಗಳಿಸುತ್ತಾರೆ. ಅಂದಹಾಗೆ, 45 ಸಾವಿರ ರೂ. ಎಂಬುದು ಚೀನದಲ್ಲಿ ವಿಪರೀತ ಹಣವೇನಲ್ಲ. ಅಲ್ಲಿ ವಾರಕ್ಕೆ 45 ಸಾವಿರ ರೂ. ಕನಿಷ್ಠ ಸಂಬಳ!

Advertisement

Udayavani is now on Telegram. Click here to join our channel and stay updated with the latest news.

Next