Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಎರಡನೇ ಹಂತದ ಮುನ್ಸೂಚನೆ ಇರುವ ಹಿನ್ನೆಲೆ ಆರೋಗ್ಯ ಇಲಾಖೆ, ಮುಖ್ಯ ಆಸ್ಪತ್ರೆ ವೈದ್ಯರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ನಿರ್ದಿಷ್ಟ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
Related Articles
Advertisement
ಪೂರ್ವ ಸಿದ್ಧತೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಕೂಡ ಸಭೆ ಮಾಡಲಾಗಿದೆ. ಕಂದಾಯ ಇಲಾಖೆಯವರನ್ನೂ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆ್ಯಪ್ ಬಳಕೆಯನ್ನು ಮುಂದುವರೆಸುತ್ತೇವೆ. ತಾಂತ್ರಿಕ ಸೌಲಭ್ಯ ಬಳಕೆ ಮಾಡಲಾಗುವುದು. ಪಾರದರ್ಶಕವಾಗಿರಲು ರಿಯಲ್ ಟೈಮ್ ಬಳಸಲಾಗುವುದು. ಯಾವುದರಲ್ಲಾದರೂ ಲೋಪ ಕಂಡು ಬಂದರೆ, ಆಯಾ ಇಲಾಖೆ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದರು.
ಇದನ್ನೂ ಓದಿ: ಜಾರಕಿಹೊಳಿಯವರಿಂದ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಯುವತಿ ಕೇಳಿದ್ದಳು: CD ಶಂಕಿತ ನರೇಶ್
ಇಡೀ ದೇಶದಲ್ಲೇ ನಮ್ಮ ರಾಜ್ಯದಲ್ಲಿ ಮರಣ ಹೊಂದಿರುವ ಸರಾಸರಿ ಕಡಿಮೆ ಇದೆ. ಪಾಸಿಟಿವ್ ಸರಾಸರಿಯು ಕೂಡ ಕಡಿಮೆಯಿದೆ. ಗುಣಮುಖರಾದವರ ಸಂಖ್ಯೆ 97ರಷ್ಟಿದೆ ಎಂದರು. ಇದು ಗಂಭೀರ ವಿಚಾರವಾಗಿರುವ ಹಿನ್ನೆಲೆಯಲ್ಲಿ ಜನರಿಗೆ ಮಾರ್ಗದರ್ಶನ ಮಾಡಬೇಕು. ಮಾಧ್ಯಮಗಳು ಸುಳ್ಳು ಸುದ್ದಿಗಳನ್ನ ಬಿತ್ತರಿಸಬಾರದು. ಪತ್ರಕರ್ತರಿಗೂ ಇಂದಿನಿಂದ ಲಸಿಕೆ ಹಾಕಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸಣ್ಣ ಪುಟ್ಟ ಲೋಪಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದರು.
ಜನರು ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡ ಬಳಿಕ ಸೋಂಕು ಬರುವುದಿದಿಲ್ಲಎಂದು ಮಾಸ್ಕ್ ಮರೆಯಬಾರದು. ಕಡ್ಡಾಯವಾಗಿ ಮಾಸ್ಕ್ ಬಳಸಬೇಕು. ಜನರು ಗುಂಪು ಸೇರಬಾರದು ಎಂದು ಸಚಿವ ಸುಧಾಕರ್ ಸೂಚನೆ ನೀಡಿದರು.