Advertisement

ಮುಂಬಯಿಯ ಸುಪ್ರಸಿದ್ಧ ಲಾಲ್‌ಬಾಗ್‌ ರಾಜಾ ಗಣೇಶೋತ್ಸವ ರದ್ದು

02:45 AM Jul 02, 2020 | Hari Prasad |

ಮುಂಬಯಿ: ಕೋವಿಡ್ 19ನ ಕರಿನೆರಳು ಈ ಬಾರಿ ಗಣೇಶೋತ್ಸವಗಳ ಮೇಲೂ ಆವರಿಸಿದೆ.

Advertisement

ಮುಂಬಯಿಯ ಸುಪ್ರಸಿದ್ಧ ‘ಲಾಲ್‌ಬಾಗ್‌ ರಾಜಾ ಗಣೇಶ ಹಬ್ಬ’ 87 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರದ್ದಾಗಿದೆ.

11 ದಿನ ರಕ್ತದಾನ: ‘ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರುವ ಕಾರಣದಿಂದಾಗಿ ನಾವು ಈ ಬಾರಿ ಗಣೇಶನ ಮೂರ್ತಿಯನ್ನು ಇಡುವುದಿಲ್ಲ.

ಆದರೆ ಉತ್ಸವದ 11 ದಿನಗಳ ಅವಧಿಯಲ್ಲಿ ರಕ್ತದಾನ ಶಿಬಿರ, ಪ್ಲಾಸ್ಮಾ ದಾನ ಶಿಬಿರಗಳನ್ನು ಆಯೋಜಿ­ಸುತ್ತೇವೆ.
ಅಲ್ಲದೆ ದೇಶಕ್ಕಾಗಿ ಪ್ರಾಣ ಸಮರ್ಪಿಸಿ ಹುತಾತ್ಮರಾದ ಪೊಲೀಸ್‌ ಹಾಗೂ ಯೋಧರ ಕುಟುಂಬಗಳಿಗೆ ಇದೇ ವೇಳೆ ಸಮ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ’ ಎಂದು ಮಂಡಲ್‌ ಕಾರ್ಯದರ್ಶಿ ಸುಧೀರ್‌ ಸಾಳ್ವಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next