Advertisement

ವಿದ್ಯಾರ್ಥಿಗಳಿಗೆ ಪುಸ್ತಕದ ಅಭಯ

04:13 PM Aug 11, 2019 | Team Udayavani |

ಹುಬ್ಬಳ್ಳಿ: ಭಾರಿ ಮಳೆ ಹಾಗೂ ನೀರು ನುಗ್ಗಿದ್ದರಿಂದ ಪಠ್ಯಪುಸ್ತಕಗಳು ತೇಲಿ ಹೋದವು, ಮಾಡಿದ ಪ್ರೊಜೆಕ್ಟ್ ಹಾಳಾಗಿ ಹೋಯಿತು ಎಂದು ಚಿಂತಿಸುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಅಭಯ ನೀಡಿದೆ.

Advertisement

ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ನಗರ ಅಷ್ಟೇ ಅಲ್ಲದೆ ಗ್ರಾಮೀಣ ಭಾಗದಲ್ಲೂ ಮನೆಗಳಿಗೆ ನೀರು ನುಗಿದ್ದು, ಇದರಿಂದ ವಿದ್ಯಾರ್ಥಿಗಳ ಪಠ್ಯಪುಸ್ತಕ ಹಾಗೂ ಪ್ರೊಜೆಕ್ಟ್ಗಳು ಹಾಳಾಗಿದ್ದವು. ಇದರಿಂದ ವಿದ್ಯಾರ್ಥಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳ ಪುಸ್ತಕಗಳು ಹಾಳಾಗಿದ್ದಲ್ಲಿ ಅಂತಹವರಿಗೆ ಇಲಾಖೆಯಿಂದ ಪುಸ್ತಕ ಕೊಡಿಸುವ ಕೆಲಸ ಮಾಡಲಾಗುವುದು. ಜೊತೆಗೆ ವಿದ್ಯಾರ್ಥಿಗಳು ಮಾಡಿರುವ ಪ್ರೊಜೆಕ್ಟ್ ಹಾಳಾಗಿದ್ದರೆ ಚಿಂತಿಸುವ ಅವಶ್ಯಕತೆ ಇಲ್ಲ. ಈಗಾಗಲೇ ಎಲ್ಲ ಶಾಲೆಗಳಲ್ಲಿ ಪ್ರೊಜೆಕ್ಟ್ಗಳನ್ನು ಶಿಕ್ಷಕರು ಪರಿಶೀಲಿಸಿ ಅಂಕಗಳನ್ನು ನೀಡಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದಕ್ಕೂ ಅಂಜದೆ ತಮ್ಮ ವಿದ್ಯಾಭ್ಯಾಸ ಕಡೆ ಲಕ್ಷ್ಯ ವಹಿಸಬೇಕು ಎಂದು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದೆ.

Advertisement

Udayavani is now on Telegram. Click here to join our channel and stay updated with the latest news.

Next