Advertisement

ಅನಾಮಧೇಯ ಪತ್ರ- ದೂರು ಆಧರಿಸಿ ಸರ್ಕಾರಿ ನೌಕರರ ಮೇಲೆ ತನಿಖೆ ನಡೆಸಬಾರದು: ರಾಜ್ಯ ಸರ್ಕಾರ

02:49 PM Oct 10, 2020 | keerthan |

ಬೆಂಗಳೂರು: ಅನಾಮಧೇಯ ದೂರು ಅಥವಾ ಪತ್ರ ಆಧರಿಸಿ ಸರ್ಕಾರಿ ನೌಕರರ ಮೇಲೆ ತನಿಖೆ ನಡೆಸಬಾರದು ಎಂದು ರಾಜ್ಯ ಸರ್ಕಾರ ಇಂದು ಸುತ್ತೋಲೆ ಹೊರಡಿಸಿದೆ.

Advertisement

ಕೇಂದ್ರ ಸರ್ಕಾರದ ಮಾದರಿಯಂತೆ ಸರ್ಕಾರಿ ನೌಕರರ ವಿರುದ್ಧ ಅನಾಮಧೇಯ ದೂರು ಅಥವಾ ಪತ್ರಗಳು ಬಂದಲ್ಲಿ ತನಿಖೆ ನಡೆಸಬೇಕಾದ ಅಗತ್ಯವಿಲ್ಲ. ಯಾವುದೇ ನೌಕರನ ವಿರುದ್ಧ ವಿಳಾಸ ಸಹಿತ ದೂರುಗಳು ಬಂದರೆ ಮಾತ್ರ ತನಿಖೆ ನಡೆಸಬೇಕು, ಅನಾಮಧೇಯ ಪತ್ರ ಇಲ್ಲವೇ ದೂರುಗಳ ಅರ್ಜಿಗಳನ್ನು ಕಡತಗೊಳಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ:ವಿದ್ಯಾಗಮ ಕಾರ್ಯಕ್ರಮ ನಿಲ್ಲಿಸಲು ಆಗ್ರಹ: ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

ಕೆಲವರು ಸರ್ಕಾರಿ ನೌಕರರ ವಿರುದ್ಧ ವೈಯಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಾಗ್ರಹ ಪೀಡಿತರಾಗಿ ಯಾವುದೇ ಆರೋಪಗಳಿಲ್ಲಿದಿದ್ದರೂ ತನಿಖೆ ನಡೆಸಬೇಕೆಂದು ದೂರು ಕೊಡುತ್ತಿದ್ದರು. ಇದರಿಂದ ದೈನಂದಿನ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗಿ ಪ್ರಾಮಾಣಿಕ ನೌಕರರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತಿದ್ದು ಜೊತೆಗೆ ಮುಕ್ತ ಮತ್ತು ನಿರ್ಭೀತರಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ನೌಕರರ ಸಂಘ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿತ್ತು. ಈ ಹಿನ್ನಲೆಯಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಎಂ ಯಡಿಯೂರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next