Advertisement

ಕ್ರೆಡಿಟ್‌ ಕಾರ್ಡ್‌ಗಿಲ್ಲ ಚಕ್ರಬಡ್ಡಿ

12:56 AM Oct 29, 2020 | mahesh |

ಹೊಸದಿಲ್ಲಿ: “ಇಎಂಐ ಪಾವತಿ ಅವಧಿ ಮುಂದೂಡಿಕೆ’ (ಮೊರಟೋರಿಯಂ) ಪ್ರಯೋಜನವನ್ನು ಕೇಂದ್ರ ಸರಕಾರ ಇನ್ನಷ್ಟು ವಿಸ್ತರಿಸಿದೆ. ಕ್ರೆಡಿಟ್‌ ಕಾರ್ಡ್‌ನ ಸಾಲ ಬಾಕಿ ಉಳಿಸಿಕೊಂಡವರಿಗೂ ಚಕ್ರಬಡ್ಡಿ ಮನ್ನಾ ಪ್ರಯೋಜನ ದಕ್ಕಲಿದೆ.

Advertisement

ಮೊರಟೋರಿಯಂ ಆಯ್ಕೆ ತೆಗೆದುಕೊಳ್ಳದ ಕ್ರೆಡಿಟ್‌ ಕಾರ್ಡ್‌ ಬಳಕೆದಾರರು ಮಾರ್ಚ್‌ 1ರಿಂದ ಆಗಸ್ಟ್‌ 31ರವರೆಗೆ ಬಾಕಿ ಮೊತ್ತಕ್ಕೆ ನಿಗದಿತ ಅವಧಿಯಲ್ಲಿ ನಿರ್ದಿಷ್ಟಪಡಿಸಿದ ಕಂತು ಪಾವತಿಸಿದ್ದರೆ, ಅವರ ಸಾಲದ ಮೊತ್ತಕ್ಕೆ ಬಡ್ಡಿ ಮೇಲೆ ಬಡ್ಡಿ ಬೀಳುವುದಿಲ್ಲ. ಈಗಾಗಲೇ ಚಕ್ರಬಡ್ಡಿ ಪಾವತಿಸಿದ್ದಲ್ಲಿ ಆ ಹಣ ಖಾತೆಗೆ ಕ್ಯಾಶ್‌ಬ್ಯಾಕ್‌ ಆಗಲಿದೆ ಎಂದು ಆರ್‌ಬಿಐ ತಿಳಿಸಿದೆ.

ಒಂದು ವೇಳೆ ನಿಗದಿತ ಅವಧಿಗಿಂತ ತಡವಾಗಿ ಕಂತು ಪಾವತಿಸಿ ದಂಡ ವಿಧಿಸಲಾಗಿದ್ದರೆ, ಆ ಬಡ್ಡಿಗೆ “ಮನ್ನಾ’ ಅನ್ವಯವಾಗದು ಎಂಬುದನ್ನೂ ಆರ್‌ಬಿಐ ಸ್ಪಷ್ಟಪಡಿಸಿದೆ. ಬ್ಯಾಂಕಿಂಗ್‌ ಕಂಪನಿ ಅಥವಾ ಸಾರ್ವಜನಿಕ ವಲ ಯದ ಬ್ಯಾಂಕ್‌, ಸಹಕಾರಿ ಬ್ಯಾಂಕ್‌, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌, ಅಖೀಲ ಭಾರತ ಹಣಕಾಸು ಸಂಸ್ಥೆ, ಬ್ಯಾಂಕೇತರ ಹಣಕಾಸು ಸಂಸ್ಥೆ, ಗೃಹ ಹಣಕಾಸು ಸಂಸ್ಥೆ ಅಥವಾ ಸೂಕ್ಷ್ಮ ಹಣಕಾಸು ಸಂಸ್ಥೆಯ ಗ್ರಾಹಕರಿಗೆ ಇದು ಅನ್ವಯವಾಗಲಿದೆ.

ಈ ಎಲ್ಲ ಸಂಸ್ಥೆಗಳು ಮೊರಟೋರಿಯಂ ಆಯ್ಕೆ ಮಾಡಿಕೊಳ್ಳದ ಅರ್ಹ ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ನ.5 ರೊಳಗೆ ಚಕ್ರಬಡ್ಡಿ ಹಣವನ್ನು ಕ್ಯಾಶ್‌ಬ್ಯಾಕ್‌ ಮಾಡಬೇಕು. ಈ ಪ್ರಯೋಜನಕ್ಕೆ ಫ‌ಲಾನುಭವಿಗಳು ಯಾವುದೇ ಅರ್ಜಿ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ ಎಂದೂ ಆರ್‌ಬಿಐ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next