ಮುಂಬಯಿ: ಬಿಜೆಪಿ-ಶಿವಸೇನೆ ನಡುವೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಅಗತ್ಯವಿಲ್ಲ. ತಮ್ಮ ಪಕ್ಷದ ನಿರ್ಣಯದ ಬಗ್ಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ದೃಢವಾಗಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ. ಕಾಳಜಿ ಪೂರ್ವಕ ಸರಕಾರ ಎನ್ನುವ ಬಿಜೆಪಿಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ರಾವುತ್ ಅವರು, ಶಿವಸೇನೆಯ ಜತೆ ಈ ಹಿಂದೆ ಏನು ನಿರ್ಧರಿಸಲಾಯಿತು ಅದರ ಬೇಡಿಕೆ ಮಾತ್ರ ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.
ಹಾಗೆಯೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ವಹಿಸುವ ಅವಶ್ಯಕತೆ ಇಲ್ಲವೆಂದು ಕೇಳುತ್ತಾ, ಕೇಂದ್ರದಿಂದ ನಿತಿನ್ ಗಡ್ಕರಿ ಅವರು ಬಂದರು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.ಈ ವೇಳೆ ಮಾತನಾಡಿದ ಸಂಜಯ್ ರಾವುತ್ ಅವರು, ನಿತಿನ್ ಗಡ್ಕರಿ ಮುಂಬಯಿ ನಿವಾಸಿಯಾಗಿದ್ದಾರೆ. ಆದ್ದರಿಂದ ಅವರನ್ನು ಭೇಟಿಯಾಗಲಿದ್ದು, ಲಿಖೀತ ಪತ್ರ ಪಡೆದು, ಅದನ್ನು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ನೀಡುವುದಾಗಿ ಹೇಳಿದರು.
ಶಿವ ಪ್ರತಿಷ್ಠಾನ ಅಧ್ಯಕ್ಷ ಸಂಭಾಜಿ ಭಿಡೆ ಅವರು, ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿ ಮಧ್ಯಸ್ಥಿಕೆ ವಹಿಸುವ ಎಂಬ ಹೇಳಿಕೆಯನ್ನು ರಾವುತ್ ನಿರಾಕರಿಸಿದರು. ಇದು ಶಿವಸೇನೆ-ಬಿಜೆಪಿಯ ನಡುವಿನ ವಿವಾದ ಇದಕ್ಕೆ ಮೂರನೇ ವ್ಯಕ್ತಿಗಳು ಒಳಗೆ ಬರಬೇಕಾದ ಅಗತ್ಯವಿಲ್ಲ. ಎರಡೂವರೆ ವರ್ಷಗಳ ಕಾಲ ಸಿಎಂ ನೀಡುವ ಬಗ್ಗೆ ಲಿಖೀತ ಪ್ರಸ್ತಾವನೆಯೊಂದಿಗೆ ಯಾರಾದರೂ ಬರುವವರಿದ್ದರೆ ಹೇಳಿ. ನಾನು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಅವರಿಗೆ ತಿಳಿಸುತ್ತೇನೆ ಎಂದು ರಾವುತ್ ಹೇಳಿದರು.
ಮಹಾರಾಷ್ಟ್ರದಲ್ಲಿ ಕರ್ನಾಟಕ ಮಾದರಿಯನ್ನು ಜಾರಿಗೆ ತರಲು ಬಿಜೆಪಿ ಪ್ರಯತ್ನಿಸುತ್ತಿರುವ ವಿಷಯದ ಬಗ್ಗೆ ಮಾತನಾಡಿದ ರಾವುತ್ ಅವರು, ಮಹಾರಾಷ್ಟ್ರದಲ್ಲಿ ಕುದುರೆ ವ್ಯಾಪಾರದ ಬಗ್ಗೆ ಸಂಶಯವಿದ್ದರೆ, ಅದು ಬಿಜೆಪಿಯ ಸರಕಾರದ ಪಾರದರ್ಶಕತೆಯ ಸವಾಲಾಗಿರುತ್ತದೆ. ನ್ಯಾಯ ಮತ್ತು ಅಸ್ಥಿತ್ವದ ಹೋರಾಟ ಹೀಗೆ ಮುಂದುವರಿಯಲಿದೆ. ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಆಡಳಿತಕ್ಕೆ ತರುವ ಎರಡನೇ ಯೋಜನೆ ಮಾಡುತ್ತಿದೆ. ರಾಷ್ಟ್ರಪತಿಯ ಆಳ್ವಿಕೆ ಬಂದರೆ ಇದು ಜನಾದೇಶಕ್ಕೆ ಅವಮಾನ ಮಾಡಿದಂತೆ. ಇದು ಸಂವಿಧಾನ ಮತ್ತು ಕಾನೂನಿಗೆ ಮಾಡಿದ ಅವಮಾನ. ಬಹುಮತ ಸಿದ್ಧ ಪಡಿಸಲು ಆಗದಿದ್ದರೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ರಾವುತ್ ಹೇಳಿದ್ದಾರೆ.