Advertisement

ಸುಖೋಯ್‌ ಬಗ್ಗೆ ಮಾಹಿತಿ ಇಲ್ಲ; ಶಾಂತಿ ಕದಡಬೇಡಿ: ಭಾರತಕ್ಕೆ ಚೀನ

04:21 PM May 24, 2017 | Team Udayavani |

ಬೀಜಿಂಗ್‌ : ನಿನ್ನೆ ಮಂಳವಾರ ತನ್ನ ಎಂದಿನ ಅಭ್ಯಾಸ ಹಾರಾಟದಲ್ಲಿ ಭಾರತ-ಚೀನ ಗಡಿಗೆ ಸಮೀಪದಲ್ಲಿ ನಾಪತ್ತೆಯಾಗಿದ್ದ ಭಾರತೀಯ ವಾಯು ಪಡೆಯು ಸುಖೋಯ್‌-30 ಯುದ್ಧ ವಿಮಾನದ ಬಗ್ಗೆ ತನಗೇನೂ ಮಾಹಿತಿ ಇಲ್ಲ ಎಂದು ಚೀನ ಹೇಳಿದೆ. ಮಾತ್ರವಲ್ಲದೆ, ಭಾರತ ಈ ಪ್ರದೇಶದಲ್ಲಿನ ಶಾಂತಿ ಮತ್ತು ಸುಭದ್ರತೆಗೆ ಧಕ್ಕೆ ಉಂಟುಮಾಡಬಾರದು ಎಂದೂ ಅದು ಹೇಳಿದೆ. 

Advertisement

ಇಬ್ಬರು ಪೈಲಟ್‌ಗಳನ್ನು ಒಳಗೊಂಡಿದ್ದ ಸುಖೋಯ್‌ ಯುದ್ಧ ವಿಮಾನವು ನಿನ್ನೆ ಮಂಗಳವಾರ ಅಸ್ಸಾಂನ ತೇಜಪುರ ವಾಯುನೆಲೆಯಿಂದ ಗಗನಕ್ಕೇರಿದ ಬಳಿಕ ನಿಗೂಢವಾಗಿ ನಾಪತ್ತೆಯಾಗಿತ್ತು. 

ನಾಪತ್ತೆಯಾಗಿರುವ ಯುದ್ಧ ವಿಮಾನವನ್ನು ಪತ್ತೆ ಹಚ್ಚಲು ಚೀನವು ಭಾರತಕ್ಕೆ ನೆರವಾಗುವುದೇ ಎಂಬ ಪ್ರಶ್ನೆಗೆ ಚೀನ ವಿದೇಶ ಸಚಿವಾಲಯದ ವಕ್ತಾರ ಲೂ ಕಾಂಗ್‌ ಅವರು “ಭಾರತ ಈಶಾನ್ಯ ಗಡಿ ಭಾಗದಲ್ಲಿನ ಶಾಂತಿಯನ್ನು ಕದಡಬಾರದು’ ಎಂದು ಹೇಳಿದರು. 

“ವಿಮಾನ ನಾಪತ್ತೆಗೆ ಸಂಬಂಧಿಸಿದಂತೆ ನಮಗೆ ಈ ಕ್ಷಣದಲ್ಲಿ  ಯಾವುದೇ ಮಾಹಿತಿ ಇಲ್ಲ’ ಎಂದವರು ಹೇಳಿದರು. 

ಚೀನವು ಭಾರತದ ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ ಎಂದು ಹೇಳುತ್ತಿದ್ದು ಈ ವರ್ಷ ಎಪ್ರಿಲ್‌ನಲ್ಲಿ  ಟಿಬೆಟ್‌ ಧರ್ಮಗುರು ದಲಾಯಿ ಲಾಮಾ ಅವರು ಅರುಣಾಚಲಕ್ಕೆ ಭೇಟಿ ನೀಡಿರುವುದನ್ನು ಅನುಸರಿಸಿ ಉಭಯ ದೇಶಗಳ ನಡುವಿನ ಬಾಂಧವ್ಯ ಕದಡಿದೆ.

Advertisement

ಭಾರತದ ಈಶಾನ್ಯ ರಾಜ್ಯಗಳ ಮುಂಚೂಣಿ ವಾಯು ನೆಲೆಗಳಲ್ಲಿ ಸುಖೋಯ್‌ 30 ಯುದ್ಧ ವಿಮಾನಗಳನ್ನು ನಿಯೋಜಿಸಲಾಗಿರುವುದು ಕೂಡ ಚೀನಕ್ಕೆ ಅಸಮಾಧಾನ ಉಂಟು ಮಾಡಿದೆ. 

ನಾಪತ್ತೆಯಾಗಿರುವ ಯುದ್ಧ ವಿಮಾನಕ್ಕಾಗಿ ಭಾರತೀಯ ವಾಯು ಪಡೆ ಇನ್ನೂ ತೀವ್ರವಾದ ಹುಡುಕಾಟದಲ್ಲಿ ತೊಡಗಿದೆ. ಅಸ್ಸಾಂನ ಎಲ್ಲ ಜಿಲ್ಲಾಧಿಕಾರಿಗಳಿಗೆ ವಿಮಾನದ ಅವಶೇಷಗಳು ಪತ್ತೆಯಾದಲ್ಲಿ ತತ್‌ಕ್ಷಣ ವರದಿ ಮಾಡುವಂತೆ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next