Advertisement
ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನಡುವೆ ಆಲೂರು ಅಭಿವೃದ್ಧಿ ಗಮನಿಸಿದರೆ ಶೂನ್ಯ. ಇದು ಸಾರ್ವಜನಿಕರ ಮಾತಾಗಿದೆ. ತಾ.ಹಾಸನ ನಗರ ಪಕ್ಕದಲ್ಲಿ ಇರುವುದರಿಂದವು ಅಭಿವೃದ್ಧಿ ಕಂಡಿಲ್ಲ ಎನ್ನುವುದು ಕೂಡಸಾಮಾನ್ಯವಾಗಿ ಬರುವ ಉತ್ತರ. ಆದರೆ ಚಿಕ್ಕತಾಲೂಕು ಎಂದ ಮೇಲೆ ಬಡವರು ನಿರ್ಗತಿಕರು ಇರುವುದಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ ?ಹಸಿವಿನಿಂದ ವಾಪಸ್ಸಾಗುವ ಜನತೆ: ತಾಲೂಕಿನಲ್ಲಿಯೂ ಬಡವರಿದ್ದಾರೆ. ಗ್ರಾಮೀಣ ಪ್ರದೇಶ ದಿಂದ 35 ರಿಂದ 40 ಕಿ.ಲೋ. ಮೀಟ ರ್‌ನಿಂದತಮ್ಮ ಕೆಲಸ ಕಾರ್ಯಗಳಿಗೆ ಪಟ್ಟ ಣಕ್ಕೆ ನಿತ್ಯಸಾವಿರಾರು ಮಂದಿ ಬಂದು ಹೋಗು ತ್ತಾರೆ. ಕಾಲೇಜಿಗೆ ಬರುವವಿದ್ಯಾ ರ್ಥಿ ಗಳು, ಆಟೋ ಚಾಲಕರು, ರಸ್ತೆಬದಿ ವ್ಯಾಪಾರಿ ಗಳು,ಆಸ್ಪತ್ರೆಗೆ ಬಂದೋಗುವವರು, ಹೀಗೆ ನಿತ್ಯ ಹಲವು ಕೆಲಸಕಾರ್ಯಗಳಿಗೆ ಸಾವಿರಾರೂ ಜನ ಪಟ್ಟಣಕ್ಕೆ ಬರುತ್ತಾರೆ.
Related Articles
Advertisement
ಹಿಂದೆಯೇ ಇಂದಿರಾ ಕ್ಯಾಂಟೀನ್ ಮಂಜೂರಾಗಿ ಹಳೇ ಪೊಲೀಸ್ ಕ್ವಾಟ್ರಸ್ ತೆರವುಗೊಳಿಸಿಇಂದಿರಾ ಕ್ಯಾಂಟೀನ್ ತೆರೆಯಲುತೀರ್ಮಾನಿಸ ಲಾಯಿತ್ತು. ಆದರೆಅದಕ್ಕೆ ಯಾವ ಕಾನೂನುಅಡಚಣೆ ಯಾಯಿತು ಎಂದು ಗೊತ್ತಾಗುತ್ತಿಲ್ಲ. ತಮ್ಮ ಕೆಲಸಕ್ಕಾಗಿದೂರದಿಂದ ಬರುವಜನಸಾಮಾನ್ಯ ರಿಗೆ ಊಟಕ್ಕಾಗಿ ಅಲೆಯುವಂತಾಗಿದೆ. ಇಂದಿರಾ ಕ್ಯಾಂಟೀನ್ ತೆರದರೆ ಕಡಿಮೆಬೆಲೆಯಲ್ಲಿ ಹಸಿವು ನೀಗಿಸಲು ಅನುಕೂಲವಾಗುತ್ತದೆ ಆದ್ದರಿಂದ ಶಾಸಕರು ಜತೆ ಚರ್ಚಿಸಲಾಗುವುದು. –ಕೆ.ಎಸ್.ಮಂಜೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ
ಶೇ.70ರಷ್ಟು ಕೂಲಿ ಕಾರ್ಮಿಕರು ಬಡವರು ಹೆಚ್ಚಿರುವ ಆಲೂರು ಪಟ್ಟಣದಲ್ಲಿ ಇಂದಿರಾಕ್ಯಾಂಟೀನ್ ಅವಶ್ಯಕತೆ ತುಂಬಾ ಇದೆ.ನಾಲ್ಕೈದು ವರ್ಷಗಳ ಹಿಂದೆಯೇ ಇಂದಿರಾಕ್ಯಾಂಟೀನ್‌ಆಗಬೇಕಿತ್ತು. ಜನಪ್ರತಿನಿಧಿಗಳ ಇಚ್ಛಾ ಶಕ್ತಿಕೊರೆತೆ ಎದ್ದು ಕಾಣುತ್ತಿದೆ. ಆದ್ದರಿಂದ ಈಗಲಾದರೂ ಇಂದಿರಾ ಕ್ಯಾಂಟೀನ್ ಬಗ್ಗೆ ಶಾಸಕರು ಗಮನ ಹರಿಸಬೇಕಿದೆ. –ಲೋಕೇಶ್ ಅಜ್ಜೆನಹಳ್ಳಿ, ಕಾಂಗ್ರೆಸ್ ಮುಖಂಡ
–ಟಿ.ಕೆ.ಕುಮಾರಸ್ವಾಮಿ ಆಲೂರು