ಬೆಂಗಳೂರು :‘ ಖಾಸಗಿ ಇಂಜಿನಿಯರಿಂಗ್ ಕಾಲೇಜು ಸಂಸ್ಥೆಗಳ ಜತೆ ಚರ್ಚೆ ನಡೆಸಲಾಗಿದ್ದು, ಯಾವುದೇ ಹೆಚ್ಚಳ ಇಲ್ಲದೆ, ಹಿಂದಿನ ರೀತಿಯಲ್ಲೇ ಶುಲ್ಕ ನಿಗದಿ ಪಡಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಬುಧವಾರ ಹೇಳಿದ್ದಾರೆ.
‘ಖಾಸಗಿ ಇಂಜಿನಿಯರಿಂಗ್ ಕಾಲೇಜು ಸಂಸ್ಥೆಗಳ ಜತೆ ವೃತ್ತಿಪರ ಕೋರ್ಸಗಳ ಶುಲ್ಕ ವಿಚಾರದಲ್ಲಿ ಚರ್ಚೆ ನಡೆಸಲಾಗಿದ್ದು, ಯಾವುದೇ ಹೆಚ್ಚಳ ಇಲ್ಲದೆ ಹಿಂದಿನ ರೀತಿಯಲ್ಲೇ ಶುಲ್ಕ ನಿಗದಿ ಮಾಡಲು ಸೂಚಿಸಲಾಗಿದೆ’ ಎಂದು ತಿಳಿಸಿದರು.
‘ಶುಲ್ಕ ಹೆಚ್ಚಳಕ್ಕೆ ಖಾಸಗಿ ಕಾಲೇಜುಗಳು ಮನವಿಮಾಡಿದ್ದರು ಆದರೆ ಚರ್ಚೆಯಲ್ಲಿ ಯಾವುದೇ ಶುಲ್ಕ ಹೆಚ್ಚಳ ಮಾಡದಿರಲು ತಿರ್ಮಾನ ಮಾಡಿದ್ದೇವೆ. ಇತರೆ ಶುಲ್ಕ 20 ಸಾವಿರಕ್ಕಿಂತ ಹೆಚ್ಚು ತೆಗೆದುಕೊಳ್ಳಬಾರದು ಎಂದು ತಿರ್ಮಾನಿಸಿದ್ದೇವೆ ‘ಎಂದರು.
‘ಕಾಲೇಜುಗಳು ಇತರೆ ಶುಲ್ಕ ಏನು ಎಂದು ಮುಂಚೆಯೇ ನಿಗದಿಮಾಡಬೇಕು, ಇತರೆ ಶುಲ್ಕಗಳ ಬಗ್ಗೆ ಪರೀಕ್ಷೆ ಪ್ರಾಧಿಕಾರಕ್ಕೆ ತಿಳಿಸಬೇಕು’ ಎಂದರು.
‘ದುರುಪಯೋಗ ತಪ್ಪಿಸಲು ಈ ನಿರ್ಧಾರ ಮಾಡಲಾಗಿದ್ದು, ಸ್ಕಿಲ್ ಟ್ರೈನಿಂಗ್ ಸಂಬಂಧ ಸಹ ಶುಲ್ಕ 20 ಸಾವಿರ ಮೀರಬಾರದು’ ಎಂದರು.
‘ಸಿಇಟಿ ಕೌನ್ಸಲಿಂಗ್ ವ್ಯವಸ್ಥಿತವಾಗಿ ಮಾಡಲಾಗುತ್ತಿದ್ದು, ನೀಟ್ ಕೌನ್ಸಲಿಂಗ್ ನೋಡಿಕೊಂಡು ನಮ್ಮ ಸಿಇಟಿ ಕೌನ್ಸಲಿಂಗ್ ಮಾಡುತ್ತೇವೆ. ಸೀಟು ಬ್ಲಾಕ್ ಆಗಬಾರದು ಎಂದು ಈ ತಿರ್ಮಾನ ಕೈಗೊಂಡಿದ್ದೇವೆ’ ಎಂದರು.