Advertisement

ವಿಗ್ರಹ ಸ್ಥಳಾಂತರ ಬೇಡ: ಹೈಕೋರ್ಟ್‌

06:41 AM Apr 11, 2019 | Team Udayavani |

ಬೆಂಗಳೂರು: ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿರುವ ಅಗಸ್ತ್ಯ ದೇವಾಲಯದ ಅಗಸ್ತ್ಯ ಲಿಂಗದ ವಿಗ್ರಹ ಸ್ಥಳಾಂತರ ಮಾಡದಂತೆ ದೇವಾಲಯ ಸಮಿತಿಗೆ ಹೈಕೋರ್ಟ್‌ ಆದೇಶ ನೀಡಿದೆ.

Advertisement

ವಿಗ್ರಹ ಭಗ್ನವಾಗಿರುವ ಕಾರಣ ಲಿಂಗವನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಬೇಕು ಎಂಬ ಉದ್ದೇಶವನ್ನು ದೇವಾಲಯ ಸಮಿತಿ ಹೊ0ದಿದ್ದು, ಈ ಅಷ್ಟಮಂಗಲ ಅಧಿಕೃತವಲ್ಲ ಎಂದು ಆಕ್ಷೇಪಿಸಿ ಮೈಸೂರಿನ ಲೋಹಿತ್‌ ಅರಸು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ವಿಚಾರಣೆಯನ್ನು ಬುಧವಾರ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್‌ ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಅಗಸ್ತ್ಯ ಲಿಂಗದ ವಿಗ್ರಹ ಸ್ಥಳಾಂತರ ಮಾಡದಂತೆ ದೇವಾಲಯ ಸಮಿತಿಗೆ ನಿರ್ದೇಶಿಸಿತು.

ಜತೆಗೆ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಜರಾಯಿ ಇಲಾಖೆ ಆಯುಕ್ತರು, ಪುರಾತತ್ವ ಮತ್ತು ರಾಷ್ಟ್ರೀಯ ಸ್ಮಾರಕಗಳ ಸಂಗ್ರಹಾಲಯ ಇಲಾಖೆಯ ದಕ್ಷಿಣ ವಲಯದ ಪ್ರಾದೇಶಿಕ ನಿರ್ದೇಶಕರು ಮತ್ತು ಆಯುಕ್ತರು, ಕೊಡಗು ಜಿಲ್ಲಾಧಿಕಾರಿ, ಅಗಸ್ತ್ಯ ದೇವಾಲಯ ಸಮಿತಿ ಅಧ್ಯಕ್ಷ ತಮ್ಮಯ್ಯ ಮತ್ತು ಪ್ರಧಾನ ಅರ್ಚಕ ನಾರಾಯಣಾಚಾರ್ಯ ಅವರಿಗೆ ನೋಟಿಸಗ್‌ ಜಾರಿಗೊಳಿಸಿ ವಿಚಾರಣೆ ಮಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next