Advertisement

ಮಂಗಳೂರಲ್ಲಿ ಬುಧವಾರ ನೋ ಹಾರ್ನ್ ಡೇ!

12:30 AM Jan 24, 2019 | Team Udayavani |

ಮಂಗಳೂರು: ನಗರದಲ್ಲಿ ಶಬ್ದ ಮಾಲಿನ್ಯವನ್ನು ಕಡಿಮೆಗೊಳಿಸುವ ಉದ್ದೇಶದಿಂದ ನೋ ಹಾರ್ನ್ ವೆಡ್ನೆಸ್‌ಡೇ ಅಭಿಯಾನ ಆರಂಭವಾಗಿದೆ.

Advertisement

ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರ ಮುಂದಾಳತ್ವದಲ್ಲಿ ಮೂರು ವಾರಗಳ ಹಿಂದೆ ಅಭಿಯಾನ ಶುರುವಾಗಿದೆ. ಇದಕ್ಕಾಗಿ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಪ್ರಚಾರವೂ ನಡೆಯುತ್ತಿದೆ. ಈ ಅಭಿಯಾನವನ್ನು ಸಿಟಿ ಬಸ್‌ ಮಾಲಕರ ಸಂಘವೂ ಸ್ವಾಗತಿಸಿದ್ದು, ಅಭಿಯಾನದಲ್ಲಿ ಕೈಜೋಡಿಸುವುದಾಗಿ ಹೇಳಿದೆ.

ಬುಧವಾರವನ್ನು ನೋ ಹಾರ್ನ್ ದಿನವನ್ನಾಗಿ ಆಚರಿಸಲು ಕೆಲವು ರಿಕ್ಷಾ, ಬಸ್‌ ಮಾಲಕರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ವಾರದೊಳಗೆ ವಿವಿಧ ಬಸ್‌, ರಿಕ್ಷಾ ಸಂಘಟನೆಗಳ ಪ್ರಮುಖರ ಜತೆ ಈ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುವುದು. ಶೇ. 100ರಷ್ಟು ಫಲಪ್ರದವಾಗದಿದ್ದರೂ ಒಂದಷ್ಟು ಮಂದಿಗೆ ಪ್ರೇರಣೆಯಾದರೆ ಪ್ರಯತ್ನ ಸಾರ್ಥಕವಾಗಲಿದೆ ಎನ್ನುತ್ತಾರೆ ಶಾಸಕರು. ಇದೇ ರೀತಿ ಬೆಂಗಳೂರಿನಲ್ಲೂ 2011ರಲ್ಲಿ ನೋಹಾರ್ನ್ ಡೇಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸೋಮವಾರ ಜಾರಿಗೆ ತಂದಿತ್ತು. ಇಂದಿಗೂ ಇದಕ್ಕೆ ಪ್ರಚಾರ ನೀಡಲಾಗುತ್ತದೆ. ಆದರೆ ವಾಹನ ಸವಾರರು ಅಷ್ಟಾಗಿ ಪರಿಗಣನೆಗೆ ತೆಗೆದುಕೊಳ್ಳದೆ ಯಶಸ್ವಿಯಾಗಿಲ್ಲ. ಪುಣೆ, ತಿರುವನಂತಪುರಗಳಲ್ಲೂ ನೋಹಾರ್ನ್ ಡೇ ಆಚರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next