Advertisement

GST: ಗಂಗಾಜಲಕ್ಕೆ ಜಿಎಸ್‌ಟಿ ಇಲ್ಲ: CBIC ಸ್ಪಷ್ಟನೆ

08:11 PM Oct 12, 2023 | Team Udayavani |

ನವದೆಹಲಿ: ಗಂಗಾಜಲಕ್ಕೆ ಯಾವುದೇ ರೀತಿಯ ಜಿಎಸ್‌ಟಿ ವಿಧಿಸಿಲ್ಲ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ ಮಂಡಳಿ(ಸಿಬಿಐಸಿ) ಸ್ಪಷ್ಟನೆ ನೀಡಿದೆ.

Advertisement

ಗಂಗಾಜಲದ ಮೇಲೆ ಶೇ.18 ಜಿಎಸ್‌ಟಿ ವಿಧಿಸಲಾಗುತ್ತಿದೆ ಎಂದು ಕೆಲವು ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಸ್ಪಷ್ಟಪಡಿಸಿರುವ ಸಿಬಿಐಸಿ, “ಗಂಗಾಜಲವನ್ನು ದೇಶಾದ್ಯಂತ ಪೂಜೆ ಮಾಡಲಾಗುತ್ತದೆ. ಜಿಎಸ್‌ಟಿ ಅಡಿಯಲ್ಲಿ ಪೂಜಾ ಸಾಮಾಗ್ರಿಗಳಿಗೆ ವಿನಾಯಿತಿ ನೀಡಲಾಗಿದೆ’ ಎಂದು ಟ್ವೀಟ್‌(ಎಕ್ಸ್‌) ಮೂಲಕ ಮಾಹಿತಿ ನೀಡಿದೆ.

“ದೇಶದಲ್ಲಿ ಗಂಗಾಜಲಕ್ಕೆ ಪೂಜನೀಯ ಸ್ಥಾನವಿದೆ. ಗಂಗಾಜಲವು ಮೋಕ್ಷಕ್ಕೆ ಕಾರಣವಾದದು ಎಂಬ ಭಾವನೆ ಇದೆ. ಹುಟ್ಟಿನಿಂದ ಸಾಯುವವರೆಗೂ ಭಾರತೀಯರಿಗೆ ಗಂಗಾಜಲವು ಉನ್ನತವಾದದು. ಆದರೆ ಈ ಗಂಗಾಜಲದ ಮೇಲೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೇ.18ರಷ್ಟು ಜಿಎಸ್‌ಟಿ ವಿಧಿಸುತ್ತಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದರು.

“ಗಂಗಾಜಲಕ್ಕೆ ಆರ್ಡರ್‌ ಮಾಡಿ, ಅದನ್ನು ಮನೆಯಲ್ಲಿ ಇರಿಸಿ ಪೂಜಿಸುವವರಿಗೆ ಇದರಿಂದ ಹೊರೆಯಾಗಿದೆ. ಇದು ಕೇಂದ್ರ ಸರ್ಕಾರದ ಲೂಟಿ ಮತ್ತು ಬೂಟಾಟಿಕೆಯ ಪರಮಾವಧಿ’ ಎಂದೂ ದೂರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next