Advertisement

ಉತ್ತರ ಕರ್ನಾಟಕಕ್ಕೆ ಇಲ್ಲದ ಅನುದಾನ ಶಿವಮೊಗ್ಗಕ್ಕೆ ನೀಡಿದ್ದಾರೆ: ರೇವಣ್ಣ ಕಿಡಿ

09:35 AM Aug 21, 2019 | keerthan |

ಹುಬ್ಬಳ್ಳಿ: ಶಿವಮೊಗ್ಗ ಹಾಗೂ ಶಿಕಾರಿಪುರಕ್ಕೆ ಎರಡು ಸಾವಿರ ಕೋಟಿ ರೂ. ಅನುದಾನ ಕೊಡಬೇಕಾಗಿತ್ತು ಹೀಗಾಗಿ ಸಚಿವ ಸಂಪುಟ ವಿಳಂಬ ಮಾಡಿದ್ದಾರೆ. ಶಿಕಾರಿಪುರ ಏತ ನೀರಾವರಿಯೊಂದಕ್ಕೆ 450 ಕೋಟಿ ರೂ. ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಎರಡು ಸಾವಿರ ಕೋಟಿ ರೂ ನೀಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಇಷ್ಟೊಂದು ನಷ್ಟವಾಗಿದ್ದರೂ ಅನುದಾನಕ್ಕೆ ದುಡ್ಡಿಲ್ಲ ಎಂದು ‌ಮಾಜಿ‌ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

Advertisement

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಕ್ಷೆತ್ರಕ್ಕೆ ಇಷ್ಟೊಂದು ಹಣ ನೀಡಲು ಖಜಾನೆ ತುಂಬಿದೆ. ಸಮ್ಮಿಶ್ರ ಸರಕಾರದಲ್ಲಿ ರಾಮನಗರ, ಹಾಸನ, ಮಂಡ್ಯ ಭಾಗಗಳಿಗೆ ನೂರಾರು ಕೋಟಿ ರೂಪಾಯಿ ಕೊಟ್ಟಿದನ್ನೇ ದೊಡ್ಡ ದೊಡ್ಡ ರಾದ್ಧಂತ ಮಾಡಿದರು. ಕೇವಲ 22 ದಿನದಲ್ಲಿ ಸುಮಾರು 2000 ಕೋಟಿ ರೂ. ಹಣ ನೀಡಿದ್ದಾರೆ. ನಮ್ಮ ಅವಧಿಯಲ್ಲಿ ನಮ್ಮ ಭಾಗಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಗೆ ನೀಡಿದ ಅನುದಾನ ಕುರಿತು ಚರ್ಚೆಗೆ ಸಿದ್ದ. ನೆರೆ ಸಂತ್ರಸ್ತರಿಗೆ ನೀಡಲು ಹಣವಿಲ್ಲ. ಆದರೆ ತಮ್ಮ ಕ್ಷೇತ್ರಕ್ಕೆ ನೀಡಲು ಹಣವಿದೆ‌ ಇದು ಯಾವ ರಾಜಕಾರಣ. ನನ್ನ ಅವಧಿಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅಳಿಯವರಿಂದ ಎಷ್ಟು ಹಣ ಪಡೆದಿದ್ದೇನೆ ? ಅವರು ಕೇಳಿದವರನ್ನೇ ಅವರ ಜಿಲ್ಲೆಗೆ ಕೊಟ್ಟಿದ್ದೇನೆ. ಅವರು ಕೊಟ್ಟಿರು ಶಿಫಾರಸ್ಸು ಪತ್ರಗಳ ಬಂಡಲ್ ನನ್ನ ಬಳಿಯಿದೆ ಎಂದು ಎಚ್.ಡಿ.ರೇವಣ್ಣ ಹೇಳಿದರು.

ಯಡಿಯೂರಪ್ಪ ಅವರ ಆಡಿಯೋ ಬಿಡುಗಡೆಯಾದಾಗ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರೆ ಬಿಜೆಪಿ ನಾಯಕರು ಬಂದು ದ್ವೇಷದ ರಾಜಕಾರಣ ಬೇಡ ಎಂದು ಮನವಿ ಮಾಡಿದರು. ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದ‌ ಕ್ಷಣದಿಂದ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅಂದು ಮನಸ್ಸು ಮಾಡಿದ್ದರೆ ಎಚ್.ಡಿ.ಕುಮಾರಸ್ವಾಮಿ ತನಿಖೆಗೆ ಕೊಡಬಹುದಿತ್ತು. ಆದರೆ ಇವರಂತೆ ಪಾಪದ ಕೆಲಸ ಮಾಡಲಿಲ್ಲ. ಸಮಯ ಬಂದಾಗ ಬಸವರಾಜ ಬೊಮ್ಮಾಯಿ ಜೊತೆಗೆ ಬಂದಿದ್ದ ನಾಯಕರ‌ಹೆಸರು ಹೇಳುತ್ತೇನೆ. ಹೋರಾಟ ಹಾಗೂ ತನಿಖೆಯಿಂದ ನಾವು ರಾಜಕರಣದಲ್ಲಿದ್ದೇವೆ. ಫೋನ್ ಕದ್ದಾಲಿಕೆ ಸಿಬಿಐ ಸೇರಿದಂತೆ ಇತರೆ ಯಾವುದೇ ತನಿಖೆ ನೀಡಲಿ. ಯಾವುದಕ್ಕೂ ಹೆದರುವ ಪ್ರಶ್ನೆಯಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next