Advertisement

ವೈದ್ಯರಿಗೆ ಉಡುಗೊರೆ ನಿಷೇಧ 

01:02 AM Mar 18, 2022 | Team Udayavani |

ಹೊಸದಿಲ್ಲಿ: ಉಡುಗೊರೆ ನೀಡುವಂತಿಲ್ಲ, ಸ್ಪಾ ಸೇವೆಗಳ ಕೊಡುಗೆಗೆ ತಡೆ, ಮನೋರಂಜನೆಯ ವ್ಯವಸ್ಥೆಗೆ ಆಸ್ಪದವಿಲ್ಲ…

Advertisement

ಇದು ಕೇಂದ್ರ ಸರಕಾರ ವೈದ್ಯಕೀಯ ಪರಿಕರಗಳನ್ನು ವೈದ್ಯರಿಗೆ ಪೂರೈಸುವ ಕಂಪೆನಿಗಳಿಗೆ ಅನ್ವಯವಾ ಗುವಂತೆ ಜಾರಿಗೆ ತರಲುದ್ದೇಶಿಸಿದ ಸಂಹಿತೆ.

ವೈದ್ಯರಿಗೆ ಸಲ್ಲದ ರೀತಿಯಲ್ಲಿ ಉಡುಗೊರೆ ನೀಡಿ ಅವರನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದನ್ನು ತಪ್ಪಿಸಲು ವೈದ್ಯಕೀಯ ಪರಿಕರಗಳನ್ನು ಸಿದ್ಧಪಡಿಸುವ ಕಂಪೆನಿಗಳ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರ ಕರಡು ನಿಯಮ ಸಿದ್ಧಪಡಿಸಿದೆ. ಸಮಾನ ಸಂಹಿತೆ ಎಂದು ಹೆಸರು ನೀಡಿದೆ. ಕಂಪೆನಿಗಳ ವತಿಯಿಂದ ಅದಕ್ಕೆ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದ್ದು, ಎ. 15ರ ಒಳಗಾಗಿ ಸಲ್ಲಿಸುವಂತೆ ಸೂಚಿಸಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಔಷಧಗಳ ವಿಭಾಗ ಈ ಕರಡು ನಿಯಮಗಳನ್ನು ಬಿಡುಗಡೆ ಮಾಡಿದೆ. ಅವುಗಳ ಪಾಲನೆಯನ್ನು ಮೆಡಿಕಲ್‌ ಡಿವೈಸ್‌ ವಲಯಕ್ಕೆ ಆಯ್ಕೆಯ ವಿಚಾರವನ್ನಾಗಿಸಲಾಗಿದೆ.

ಕರಡು ನಿಯಮದಲ್ಲಿ ಏನಿದೆ? :

  • ವೈದ್ಯರಿಗೆ ಮತ್ತು ಅವರ ಕುಟುಂಬಕ್ಕೆ ಅನುಕೂಲವಾಗುವಂತೆ ಮನೋ ರಂಜನೆ ಕಾರ್ಯಕ್ರಮಗಳಿಗೆ ಟಿಕೆಟ್‌ ನೀಡುವಂತಿಲ್ಲ.
  • ಯಾವುದೇ ರೀತಿಯಲ್ಲಿ ವಿತ್ತೀಯ ಉಡುಗೊರೆಯನ್ನು ವೈಯಕ್ತಿಕ ನೀಡುವಂತಿಲ್ಲ. ಔಷಧಗಳ ಸ್ಯಾಂಪಲ್‌ಗ‌ಳನ್ನು ಮಿತಿಗಿಂತ ಹೆಚ್ಚು ನೀಡುವಂತಿಲ್ಲ.
  • ಕಂಪೆನಿಗಳು ಶಿಕ್ಷಣ ನೀಡುವ ನಿಮಿತ್ತ ವೈದ್ಯಕೀಯ ಕಾಲೇಜುಗಳಿಗೆ, ವೈದ್ಯಕೀಯ ಕಾಲೇಜು ಆಸ್ಪತ್ರೆ ಗಳಿಗೆ, ಆಸ್ಪತ್ರೆಗಳಿಗೆ ವೈಜ್ಞಾನಿಕವಾಗಿ ಅಧ್ಯಯನ ನಿಮಿತ್ತ ಉಡು ಗೊರೆಗಳನ್ನು ನೀಡಬಹದು.
  • ವೈದ್ಯಕೀಯ ಪರಿಕರಗಳ ಕಂಪೆನಿ ಗಳು ಅಪರೂಪಕ್ಕೊಮ್ಮೆ ರೋಗಿಗಳಿಗೆ ತರಬೇತಿ ಮತ್ತು ಅನುಕೂಲ ಕ್ಕಾಗಿ ವೈದ್ಯರಿಗೆ ಕೆಲವೊಂದು ವಸ್ತುಗಳನ್ನು ನೀಡಲು ಅವಕಾಶ ಇದೆ. ಆದರೆ ಅದರ ಮೊತ್ತ 1 ಸಾವಿರ ರೂ. ಮೀರಬಾರದು.
  • ವೈದ್ಯರಿಗೆ ಉಡುಗೊರೆ, ಸ್ಪಾ, ಮನೋರಂಜನೆಯ ಕಾರ್ಯ ಕ್ರಮಗಳ ಟಿಕೆಟ್‌ಗಳ ಆಫ‌ರ್‌ಗಳನ್ನು ನೀಡಬಾರದು.
Advertisement
Advertisement

Udayavani is now on Telegram. Click here to join our channel and stay updated with the latest news.

Next