Advertisement

ಅಯೋಧ್ಯೆ:ರಾಮಮಂದಿರ ನಿರ್ಮಾಣಕ್ಕೆ ದೇಶಿಯ ಹಣ ಬಳಕೆ, ವಿದೇಶಿ ದೇಣಿಗೆ ಸ್ವೀಕರಿಸಲ್ಲ: ಟ್ರಸ್ಟ್

03:30 PM Dec 17, 2020 | Nagendra Trasi |

ನವದೆಹಲಿ: ವಿವಿಧ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿದ ದೇಶಿಯ ಹಣದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ್ ಟ್ರಸ್ಟ್ ಗುರುರುವಾರ(ಡಿಸೆಂಬರ್ 17, 2020) ಘೋಷಿಸಿದೆ.

Advertisement

ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ , ವಿದೇಶಗಳಲ್ಲಿ ದೇಣಿಗೆ ಪಡೆಯಲು ಟ್ರಸ್ಟ್ ಗೆ ಯಾವುದೇ ಪೂರ್ವಾನುಮತಿಯ ಅಗತ್ಯವಿಲ್ಲ. ಆದರೆ ವಿದೇಶದ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ದೇಣಿಗೆ ಸಂಗ್ರಹಿಸಲು ದೇಶಾದ್ಯಂತ ದೇಣಿಗೆ ಅಭಿಯಾನ ನಡೆಸುವುದಾಗಿ ವಿವರಿಸಿದೆ. 2021ರ ಜನವರು 15ರಿಂದ ಫೆಬ್ರುವರಿ 27ರವರೆಗೆ “ಶ್ರೀ ರಾಮ್ ಮಂದಿರ್ ನಿಧಿ ಸಮರ್ಪಣ್” ಆಂದೋಲನ ನಡೆಸಲಾಗುವುದು ಎಂದು ರಾಯ್ ಹೇಳಿದರು.

ಭಗವಾನ್ ಶ್ರೀರಾಮ ಜನಿಸಿದ ಕ್ಷೇತ್ರವಾದ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಮಂದಿರ ನಿರ್ಮಾಣಕ್ಕಾಗಿ ದೇಶದ ಪ್ರತಿಯೊಬ್ಬ ರಾಮಭಕ್ತನೂ ಬೆಂಬಲ ನೀಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಮಂಗಳೂರು: ಬೈಕ್ ನಲ್ಲಿ ಬಂದ ದುಷ್ಕರ್ಮಿಯಿಂದ ಹೆಡ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ !

Advertisement

ದೇಶದ ಮನೆ, ಮನೆಗೂ ವಿಶ್ವ ಹಿಂದೂ ಪರಿಷತ್ ನ ಕಾರ್ಯಕರ್ತರು ಹಿರಿಯ ಸಾಧು, ಸಂತರ ಜತೆಗೂಡಿ ಭೇಟಿ ನೀಡಲಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಮುಂಬರುವ ಮಕರ ಸಂಕ್ರಾಂತಿ (2021, ಜನವರಿ 15)ಯಿಂದ ಮಹಾ ಪೌರ್ಣಮಿ(ಫೆ.27)ವರೆಗೆ ಪ್ರಚಾರಾಂದೋಲನ ನಡೆಸಲಾಗುವುದು ಎಂದು ವರದಿ ತಿಳಿಸಿದೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಯ್, ಪ್ರಚಾರಾಂದೋಲನ ಸಮಯದಲ್ಲಿ ನೂತನ ರಾಮಮಂದಿರದ ಫೋಟೋಗಳು ಕೋಟ್ಯಂತರ ಮನೆಯನ್ನು ಅಲಂಕರಿಸಲಿದೆ ಎಂದು ಹೇಳಿದರು.

ದೇಣಿಗೆ ಸಂಗ್ರಹಿಸುವ ರಾಮಭಕ್ತರ ಬಳಿ 10, 100 ಹಾಗೂ ಒಂದು ಸಾವಿರ ರೂಪಾಯಿ ಕೂಪನ್ ಗಳು ಲಭ್ಯ. ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕೆಂದು ಆದೇಶ ನೀಡಲಾಗಿದೆ. ಟ್ರಸ್ಟ್ 10 ರೂ. ಮೌಲ್ಯದ 4 ಕೋಟಿ ಕೂಪನ್ಸ್, 100 ರೂ. ಮೌಲ್ಯದ 8 ಕೋಟಿ ಕೂಪನ್ಸ್ 1000 ಮೌಲ್ಯದ 12 ಲಕ್ಷ ಕೂಪನ್ಸ್ ಮುದ್ರಿಸಿರುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next