Advertisement

Aadhaar: ಬೆರಳಿಲ್ಲವೇ? ಕಣ್ಣಿಂದಲೇ ಆಧಾರ್‌ ನೋಂದಣಿ

12:15 AM Dec 10, 2023 | Team Udayavani |

ಹೊಸದಿಲ್ಲಿ: ಆಧಾರ್‌ಗೆ ಅರ್ಹತೆ ಹೊಂದಿರುವ ವ್ಯಕ್ತಿಯ ಬೆರಳಚ್ಚು ಲಭ್ಯವಿಲ್ಲದ ಸಂದರ್ಭದಲ್ಲಿ ಕಣ್ಣಿನ ಸ್ಕ್ಯಾನ್‌ ಮೂಲಕ ಆಧಾರ್‌ಗೆ ನೋಂದಣಿಯಾಗ ಬಹುದಾಗಿದೆ ಎಂದು ಕೇಂದ್ರ ಸರಕಾರ ಶನಿವಾರ ತಿಳಿಸಿದೆ.

Advertisement

ಬೆರಳುಗಳು ಇಲ್ಲದ ಕೇರಳದ ಜೋಸಿಮೋಲ್‌ ಪಿ ಜೋಸ್‌ ಎಂಬ ಮಹಿಳೆಯು ಆಧಾರ್‌ಗೆ ನೋಂದಣಿ ವಿಚಾರದಲ್ಲಿ ಕೇಂದ್ರ ಎಲೆಕ್ಟ್ರಾನಿಕ್‌ ಮತ್ತು ಐಟಿ ಖಾತೆ ಸಹಾಯಕ ಸಚಿವ ರಾಜೀವ್‌ ಚಂದ್ರಶೇಖರ್‌ ಮಧ್ಯ ಪ್ರವೇಶಿಸಿದ ಬೆನ್ನಲ್ಲೇ ಈ ಪ್ರಕಟಣೆ ಹೊರಬಿದ್ದಿದೆ.

“ಆಧಾರ್‌ಗೆ ಅರ್ಹತೆ ಹೊಂದಿರುವ ವ್ಯಕ್ತಿಯ ಬೆರಳಚ್ಚು ಲಭ್ಯವಿಲ್ಲದಿದ್ದರೆ, ಕಣ್ಣಿನ ಸ್ಕ್ಯಾನ್‌ ಮೂಲಕ ಆಧಾರ್‌ ನೋಂದಣಿ ಮಾಡಬಹುದು. ಅದೇ ರೀತಿ, ಆಧಾರ್‌ಗೆ ಅರ್ಹತೆ ಹೊಂದಿರುವ ವ್ಯಕ್ತಿಗೆ ಯಾವುದೇ ಕಾರಣಕ್ಕೆ ಕಣ್ಣಿನ ಸ್ಕ್ಯಾನ್‌ ಸಾಧ್ಯವಿಲ್ಲದ ಸಂದರ್ಭದಲ್ಲಿ ಬೆರಳಚ್ಚು ಮೂಲಕ ಆಧಾರ್‌ ನೋಂದಣಿ ಮಾಡಬಹುದಾಗಿದೆ” ಎಂದು ಕೇಂದ್ರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next