Advertisement

ರೋಹಿತ್‌ ಶರ್ಮ ನಾಯಕತ್ವಕ್ಕೆ ಭೀತಿ ಇಲ್ಲ: ಬಿಸಿಸಿಐ

10:44 PM Jan 01, 2023 | Team Udayavani |

ಮುಂಬಯಿ: ರೋಹಿತ್‌ ಶರ್ಮ ಅವರ ಟೆಸ್ಟ್‌ ಹಾಗೂ ಏಕದಿನ ನಾಯಕತ್ವಕ್ಕೆ ಸದ್ಯ ಯಾವುದೇ ಭೀತಿ ಇಲ್ಲ, ಅವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ರವಿವಾರದ ಬಿಸಿಸಿಐ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

Advertisement

ಆದರೆ ಅವರ ಟಿ20 ನಾಯಕತ್ವ ಬಹುತೇಕ ಕೈಜಾರಿದೆ. ಇದಿನ್ನು ಖಾಯಂ ಆಗಿ ಹಾರ್ದಿಕ್‌ ಪಾಂಡ್ಯ ಪಾಲಾಗುವುದರಲ್ಲಿ ಅನುಮಾನವಿಲ್ಲ. ಇನ್ನುಳಿದಿರುವುದು, ರೋಹಿತ್‌ ಅವರಿಗೆ ಟಿ20 ತಂಡದಲ್ಲಿ ಸ್ಥಾನ ಸಿಕ್ಕೀತೇ ಎಂಬ ಪ್ರಶ್ನೆ.

“ರೋಹಿತ್‌ ಅವರ ಟೆಸ್ಟ್‌ ಹಾಗೂ ಏಕದಿನ ನಾಯಕತ್ವದ ಭವಿಷ್ಯದ ಕುರಿತು ಯಾವುದೇ ಚರ್ಚೆಗಳು ನಡೆಯಲಿಲ್ಲ. ಅವರು ಈ ಎರಡು ಮಾದರಿಗಳಲ್ಲಿ ನಾಯಕರಾಗಿ ಮುಂದುವರಿಯಲಿದ್ದಾರೆ’ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ಸಭೆಯಲ್ಲಿ ಟಿ20 ನಾಯಕ ಹಾರ್ದಿಕ್‌ ಪಾಂಡ್ಯ ಉಪಸ್ಥಿತರಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next