Advertisement
ಶುಕ್ರವಾರದ ರಾಜ್ಯಸಭಾ ಕಲಾಪದಲ್ಲಿ, ಕಾಂಗ್ರೆಸ್‌ನ ಧೀರಜ್ ಪ್ರಸಾದ್ ಸಾಹು ಹಾಗೂ ಆಮ್ ಆದ್ಮಿ ಸಂಸದ ಸಂಜಯ್ ಸಿಂಗ್ ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತರ ಪ್ರತಿಭಟನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಕೈಗೊಂಡಿದ್ದ ಕ್ರಮಗಳಲ್ಲಿ ಯಾವುದೇ ರೈತರು ಸಾವಿಗೀಡಾಗಿಲ್ಲ. ಇದರ ಹೊರತಾಗಿಯೂ ನಡೆದಿರುವ ಪ್ರತಿಭಟನ ಸಂಬಂಧಿತ ಘಟನೆಗಳಲ್ಲಿ ರೈತರು ಸಾವಿಗೀಡಾಗಿದ್ದರೆ ಅವರಿಗೆ ಆರ್ಥಿಕ ಪರಿಹಾರ ಕೊಡುವ ಜವಾಬ್ದಾರಿ ಆಯಾ ರಾಜ್ಯ ಸರಕಾರಗಳದ್ದೇ ಆಗಿರುತ್ತದೆ’ ಎಂದು ತಿಳಿಸಿದರು.
Related Articles
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಬೇಟಿ ಪಢಾವೊ, ಬೇಟಿ ಬಚಾವೊ’ ಗಾಗಿ ಮೀಸಲಿರಿಸಿದ್ದ ಹಣದಲ್ಲಿ ಶೇ. 80ರಷ್ಟು ಹಣವನ್ನು ಮಾಧ್ಯಮಗಳ ಜಾಹೀರಾತಿಗೆ ಖರ್ಚು ಮಾಡಲಾಗಿದೆ ಎಂದು ಮಹಿಳಾ ಸಶಕ್ತೀಕರಣ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ತಿಳಿಸಿದೆ. ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮಾಧ್ಯಮಗಳ ಮೂಲಕ ಚಾಲನೆ ನೀಡಲಾಗಿದ್ದ ಅಭಿಯಾನಕ್ಕೆ ಬರೋಬ್ಬರಿ 446.72 ಕೋಟಿ ರೂ.ಗಳಷ್ಟು ಹಣ ಖರ್ಚು ಮಾಡಲಾಗಿದೆ. ಇದು ಈ ಯೋಜನೆಗಾಗಿ ಮೀಸರಿಸಿದ ಒಟ್ಟಾರೆ ಹಣದ ಶೇ. 80ರಷ್ಟು ಹಣವಾಗಿದ್ದು, ಇನ್ನು ಮುಂದೆ, ಯೋಜನೆಯ ಹಣವನ್ನು ಹೆಣ್ಣುಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯ ಕುರಿತಾದ ಯೋಜನೆಗಳಿಗೆ ವ್ಯಯಿಸಬೇಕು ಎಂದು ಸಮಿತಿ ಕೇಂದ್ರಕ್ಕೆ ಕಿವಿಮಾತು ಹೇಳಿದೆ.
Advertisement