ಸಂತೆಮರಹಳ್ಳಿ: ತಾಲೂಕಿನ ಅಗರ ಮಾಂಬಳ್ಳಿಯಲ್ಲಿರುವ ನಾಡ ಕಚೇರಿಯಲ್ಲಿ ಕುಡಿವ ನೀರು, ಶೌಚಗೃಹ ಸೇರಿ ದಂತೆ ಇನ್ನಿತರ ಮೂಲ ಸೌಕರ್ಯವಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.
ನಾಡಕಚೇರಿ ವ್ಯಾಪ್ತಿಯಲ್ಲಿ ಗೌಡಹಳ್ಳಿ, ಬನ್ನಿಸಾರಿಗೆ, ರಾಮಪುರ, ಕಿನಕಹಳ್ಳಿ, ಕಟ್ನವಾಡಿ, ಮದ್ದೂರು, ಬೂದಿತಿಟ್ಟು, ಅಲ್ಕೆರೆ ಅಗ್ರಹಾರ, ಶಿವಕಹಳ್ಳಿ, ಎ .ದೇವರಹಳ್ಳಿ, ಬನ್ನಿಸಾರಿಗೆ, ಅಗರ, ಮಾಂಬಳ್ಳಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳ ಜನರು ಜಾತಿ, ಆದಾಯ ಧೃಢೀಕರಣ ಪತ್ರ, ವಂಶವೃಕ್ಷ, ಆಧಾರ್ ಕಾರ್ಡ್, ಆರ್‌ಟಿಸಿ ಸೇರಿದಂತೆ ಸರ್ಕಾ ರದ ವಿವಿಧ ಸವಲತ್ತು ಪಡೆಯಲು, ಹಲವು ದಿನಗಳ ಬೇಕು ತಕ್ಷಣ ಬೇಕಾದರೆ ತಾಲೂಕು ಕೇಂದ್ರದ ಕಚೇರಿಗೆ ಹೋಗ ಬೇಕು ಆದರೆ ಅಲ್ಲಿ ಅರ್ಜಿ ಸಲ್ಲಿಸಲು ಪರದಾಡುವ ಪರಿಸ್ಥಿತಿ ಇದೆ.
ಇದರೊಂದಿಗೆ ಈ ಕಚೇರಿಯಲ್ಲಿ ಕುಡಿವ ನೀರಿನ ವ್ಯವಸ್ಥೆ, ಕುಳಿತುಕೊಳ್ಳುಲು ಕುರ್ಚಿಗಳ ವ್ಯವಸ್ಥೆಯೂ ಇಲ್ಲ. ಸಾಮೂ ಹಿಕ ಶೌಚಗೃಹ ನಿರುಪಯುಕ್ತವಾಗಿದೆ. ಇದರಿಂದ ಸಾರ್ವಜನಿಕರು ಪರದಾ ಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುರ್ಚಿಯ ವ್ಯವಸ್ಥೆ ಕಲ್ಪಿಸಿ: ನಾಡ ಕಚೇರಿಗೆ ದಿನ ನಿತ್ಯ ನೂರಾರು ಜನರು ವಿವಿಧ ಯೋಜನೆಗಳಿಗೆ ಹಾಗೂ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇ ಕಾದರೆ ಸಾರ್ವಜನಿಕರು ಸರದಿಯಲ್ಲಿ ನಿಲ್ಲಬೇಕು, ಜೊತೆಗೆ ಯಾರಾದರೂ ಅಧಿಕಾರಿಗಳು ಅಕ್ಕ ಪಕ್ಕ ಕೆಲಸಗಳಿಗೆ ಹೋಗಿದ್ದರೆ. ಅವರಿಗಾಗಿ ಗಂಟೆಗಟ್ಟಲೆ ಕಾದು ನಿಲ್ಲಬೇಕು. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ನಿಲ್ಲಲು ಶಕ್ತರಾ ಗಿರುವುದಿಲ್ಲ. ಕಚೇರಿ ಆವರಣ ದಲ್ಲಿ ಎಲ್ಲಿಯೂ ಸಾರ್ವಜನಿಕರ ಅನು ಕೂಲ ಕ್ಕಾಗಿ ಕುರ್ಚಿ ಯ ವ್ಯವಸ್ಥೆ ಮಾಡಿಲ್ಲ, ಇದರಿಂದ ಕಚೇರಿ ಯ ಮುಂ ಭಾಗದ ಆವರಣದಲ್ಲಿ ನೆಲದ ಮೇಲೆ ಯೇ ಕುಳಿತುಕೊಳ್ಳುವಂತಹ ಪರಿಸ್ಥಿತಿ ಇದೆ.
ಉಪಯೋಗಕ್ಕೆ ಬಾರದ ಶೌಚ ಗೃಹ:ನೌಕರರು, ಅಧಿಕಾರಿಗಳು ಸೇರಿ ದಂತೆ ಸಾರ್ವಜನಿಕರಿಗೆ ಶೌಚ ಗೃಹಕ್ಕಾಗಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಬಯಲನ್ನೇ ಆಶ್ರಯಿಸಿದ್ದಾರೆ. ಪ್ರತಿ ಕುಟುಂಬವೂ ಶೌಚಗೃಹ ಹೊಂದ ಬೇಕು ಎನ್ನುವ ಉದ್ಧೇಶದಿಂದ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಇದಕ್ಕಾಗಿ ಗ್ರಾಮ ಪಂಚಾಯಿತಿಗಳು ಮೂಲಕ ಶೌಚಗೃಹಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ನಾಡ ಕಚೇರಿಯಲ್ಲೇ ಶೌಚಗೃಹವು ನಿರುಪ ಯುಕ್ತವಾಗಿ ಬಾಗಿಲು ಹಾಕಿ ರುವುದು ಸಾರ್ವಜ ನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸಂಬಂಧಪಟ್ಟ ಅಧಿಕಾರಿ ಗಳು ಇನ್ನಾದರೂ ಇತ್ತ ಗಮನಹರಿಸಿ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಬೇ ಕೆಂದು ಒತ್ತಾಯಿಸಿದ್ದಾರೆ.
ಕೆಟ್ಟು ನಿಲ್ಲುವ ಯುಪಿಎಸ್: ಸಾರ್ವ ಜನಿಕ ಕೆಲಸ ಗಳ ಅನುಕೂಲಕ್ಕಾಗಿ ವಿದ್ಯು ತ್ ಅಭಾವ ತಲೆದೋ ರಿದರೂ ಯುಪಿ ಎಸ್ ಮೂಲಕ ಸೇವೆ ನೀಡಬೇ ಕೆಂಬ ನಿಯಮವಿದೆ. ಆದರೆ ಹಲವು ತಿಂಗಳಿಂದಲೂ ನಾಡ ಕಚೇರಿಯಲ್ಲಿರುವ ಯುಪಿಎಸ್ ಕೆಟ್ಟು ಹೋಗಿದೆ. ವಿದ್ಯುತ್ ಇಲ್ಲದಿದ್ದರೆ ಕಂಪ್ಯೂಟರ್ ಹಾಗೂ ಪ್ರಿಂಟರ್ ಕೆಲಸ ಮಾಡುವುದಿಲ್ಲ ಹಾಗಾ ಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಉದಯವಾಣಿಯೊಂದಿಗೆ ಸ್ಥಳೀಯ ರಾದ ರಾಜು ಮಾತನಾಡಿ, ನಾಡಕಚೇರಿ ಯಲ್ಲಿ ಸಾರ್ವ ಜನಿಕ ಕೆಲಸಗಳನ್ನು ಸುಲಭವಾಗಿ ಆಗುತ್ತಿಲ್ಲ. ವಿನಾ ಕಾರಣ ವಿಳಂಬವಾದಾಗ ಸರ್ಕಾರಿ ಸೌಲಭ್ಯ ಪಡೆ ಯಲು ಸಾಧ್ಯವಾಗುವುದಿಲ್ಲ ಎಂದರು.
● ಫೈರೋಜ್‌ಖಾನ್