Advertisement
ಹೌದು, ಶಾಸಕರ ಭವನದಲ್ಲಿ ರಾತ್ರಿ ವೇಳೆ ಸಾರ್ವಜನಿಕರ ಹೆಸರಿನಲ್ಲಿ ರಾಜಕೀಯ ನಾಯಕರ ಬೆಂಬಲಿಗರು, ಆಪ್ತರುಅನಗತ್ಯ ವ್ಯಕ್ತಿಗಳು ಪ್ರವೇಶ ಪಡೆದು ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಪೀಕರ್
ಕೆ.ಆರ್.ರಮೇಶ್‌ಕುಮಾರ್ ಈ ಕ್ರಮ ಕೈಗೊಂಡಿದ್ದಾರೆ.
ಬದಲಾವಣೆ ಮಾಡಿದ್ದು, ಮಂಗಳವಾರದಿಂದಲೇ ಹೊಸ ನಿಯಮ ಜಾರಿಯಾಗಲಿದೆ. ಈ ಕುರಿತು ಮಾಹಿತಿ ನೀಡಿದ ರಮೇಶ್ ಕುಮಾರ್, ಶಾಸಕರ ಭವನದಲ್ಲಿನ ಶಾಸಕರ ಖಾಸಗಿತನಕ್ಕೆ ಧಕ್ಕೆಯಾಗದಂತೆ ಭೇಟಿಯ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಸಾರ್ವಜನಿಕರು ಸೇರಿದಂತೆ ಇತರರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ನಂತರದ ಅವಧಿಯಲ್ಲಿ ಭೇಟಿಗೆ ಅವಕಾಶ ಇರುವುದಿಲ್ಲ. ಮಂಗಳವಾರದಿಂದ ಪರಿಷ್ಕೃತ ವೇಳಾಪಟ್ಟಿ ಅನುಷ್ಠಾನವಾಗಲಿದೆ. ಜತೆಗೆ ಪಾಸ್ ಪಡೆಯದ ವಾಹನಗಳ ಪ್ರವೇಶಕ್ಕೂ ನಿರ್ಬಂಧ
ವಿಧಿಸಲಾಗುತ್ತಿದೆ ಎಂದು ಹೇಳಿದರು. ಸದನದಲ್ಲಿ ಶಾಸಕರ ಹಾಜರಾತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಗಳನ್ನು ಅಧಿಕಾರಿಗಳಂತೆ ಪರಿಗಣಿಸಲು
ಸಾಧ್ಯವಿಲ್ಲ. ಜನಪ್ರತಿನಿಧಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ತಿಳಿಸಿದರು.