Advertisement

ವಿದ್ಯುತ್‌ ಮಸೂದೆ ತಿದ್ದುಪಡಿ ಬೇಡ

07:37 AM May 28, 2020 | Lakshmi GovindaRaj |

ಕೋಲಾರ: ಕೇಂದ್ರ ಸರ್ಕಾರ ಮಂಡಿಸಲು ಹೊರಟಿರುವ ಹೊಸ ವಿದ್ಯುತ್‌ ಮಸೂದೆ ಕೂಡಲೇ ಹಿಂಪಡೆ ಯಬೇಕೆಂದು ಒತ್ತಾ ಯಿಸಿ ಜಿಲ್ಲಾ ಕಾಂಗ್ರೆಸ್‌ ಕಿಸಾನ್‌ ಘಟಕ ದಿಂದ ಜಿಲ್ಲಾಧಿಕಾರಿ ಸತ್ಯಭಾಮಾರಿಗೆ ಮನವಿ ಸಲ್ಲಿಸಿದರು.  ಕೇಂದ್ರ ಸರಕಾರ ವಿದ್ಯುತ್‌ ಮಸೂದೆ (ತಿದ್ದುಪಡಿ), ಖಾಸಗೀಕರಣ ಮಾಡಿ ಬಂಡವಾಳ ಶಾಹಿಗಳಿಗೆ ಅನು ಕೂಲ ಮಾಡಿಕೊಡುವ ಯೋಜನೆಯನ್ನು ರೂಪಿ ಸುತ್ತಿರು ವುದು ಖಂಡನೀಯ.

Advertisement

ರೈತರು ಬಳಸುವ ವಿದ್ಯುತ್‌ ರಾಜ್ಯದಲ್ಲಿ ಉಚಿತವಾಗಿದ್ದು, ಈ ಬದಲಾವಣೆಯಿಂದ ಕಷ್ಟಕ್ಕೀಡಾಗುವ ಪರಿಸ್ಥಿತಿ ಇದೆ ಎಂದರು. ರಾಜ್ಯದಲ್ಲಿ ಕೊರೊನಾ ಆವರಿಸಿ ರೈತರ ಬದುಕು ಸಂಕಷ್ಟದಲ್ಲಿದೆ. ಇಂತಹ ಸಂದ ರ್ಭದಲ್ಲಿ ವಿದ್ಯುತ್‌ ಬಿಲ್ಲನ್ನು ತಿದ್ದುಪಡಿ ಮಾಡಿ ರೈತರ ಕೊಳವೆ ಬಾವಿಗಳ  ಉಪಯೋಗಕ್ಕೆ ತೊಂದರೆಯಾಗುವ ಯೋಜನೆ ತಂದು ಅವರಿಗೆ ಮತ್ತಷ್ಟು ಕಣ್ಣೀರು ತರಿಸುವ ಯೋಜನೆಯಾಗಿದೆ ಎಂದು ಆರೋಪಿಸಿದರು.

ಕಿಸಾನ್‌ ಘಟಕ ರಾಜ್ಯಾಧ್ಯಕ್ಷ ಸಚಿನ್‌ ಮಿಗಾರ ಆದೇಶದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿದ್ಯುತ್‌ ಬಿಲ್‌  (ತಿದ್ದುಪಡಿ) ತಡೆ ಹಿಡಿಯಬೇಕು ಎಂಬ ಆದೇಶ ಹಿಂಪಡೆಯಬೇಕೆಂದು ಒತ್ತಾಯಿ ಸಲಾಗುತ್ತಿದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಕಿಸಾನ್‌ ಘಟಕದ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌, ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಸ್‌.ಮಂಜುನಾಥ್‌, ಕಿಸಾನ್‌ ಘಟಕದ ತಾಲೂಕು ಅಧ್ಯಕ್ಷ ತೊರದೇವಂಡಹಳ್ಳಿ ನಾಗರಾಜ್‌, ಕಿಸಾನ್‌ ಘಟಕದ ಪ್ರಧಾನ ಕಾರ್ಯದರ್ಶಿ ನೂರುಲ್‌ ಹುದಾ, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಬೊಮ್ಮ ಸಂದ್ರ ಕೃಷ್ಣೇಗೌಡ, ಕೂಟೇರಿ ಅರುಣ್‌ ಇನ್ನಿತರರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next