Advertisement

ನೋ ಡ್ರಾಮಾ ಶರ್ಮಾ: ಅಲೋಕ್‌ ಗೇಲಿ

11:57 PM Nov 12, 2021 | Team Udayavani |

ಹೊಸದಿಲ್ಲಿ: ತಮ್ಮನ್ನು ತಾವೇ ಹಾಸ್ಯ ಮಾಡಿ ಕೊಳ್ಳುವ ವ್ಯಕ್ತಿತ್ವ ಉಳ್ಳವರಾದ ಆಗ್ರಾ ಮೂಲದ  ಬ್ರಿಟನ್‌ನ ರಾಜಕಾರಣಿ, ಅಲೋಕ್‌ ಶರ್ಮಾ, ತಮ್ಮನ್ನು ಜನರು “ನೋ ಡ್ರಾಮಾ… ಶರ್ಮಾ’ ಎಂದು ಆಡಿಕೊಳ್ಳುತ್ತಾರೆ ಎಂದು ತಮ್ಮನ್ನು ತಾವು ಗೇಲಿ ಮಾಡಿಕೊಂಡಿದ್ದಾರೆ.

Advertisement

ಅಸಲಿಗೆ, “ನೋ ಡ್ರಾಮಾ…’ ಎಂಬ ಕುಚೋ ದ್ಯದ ಸಾಲು ಬಳಕೆಯಾಗುತ್ತಿದ್ದುದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರಿಗೆ. 2009ರಲ್ಲಿ ಅವರು ಅಧ್ಯಕ್ಷರಾದ ಹೊಸತರಲ್ಲಿ ಡೆನ್ಮಾರ್ಕ್‌ನ ಕೋಪನ್‌ಹೇಗ್‌ನಲ್ಲಿ ಆಯೋಜಿಸಲಾಗಿದ್ದ ಜಾಗತಿಕ ಹವಾಮಾನ ಸಮ್ಮೇಳನದ (ಸಿಒಪಿ 2009) ವೇಳೆ ಒಂದು ಅಚಾತುರ್ಯ ಮಾಡಿ ಕೊಂಡಿದ್ದರು. ಆಗ, ಅವರನ್ನು “ನೋ ಡ್ರಾಮಾ ಒಬಾಮಾ’ ಎಂದು ಜನರು ಕುಚೋದ್ಯ ಮಾಡಿದ್ದರು. ಈಗ, ಬ್ರಿಟನ್‌ನ ಜನ ಅದೇ ವಾಕ್ಯ ವನ್ನು ಬಳಸಿ ನೋ ಡ್ರಾಮಾ ಶರ್ಮಾ ಎನ್ನುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಗ್ಲಾಸೊYàದಲ್ಲಿ ನಡೆ ಯುತ್ತಿರುವ ಜಾಗತಿಕ ಹವಾಮಾನ ಸಮ್ಮೇಳನ ವನ್ನು (ಸಿಒಪಿ 26) ನಿಭಾಯಿಸುವ ಹೊಣೆಗಾರಿಕೆ ಯನ್ನು ಬ್ರಿಟನ್‌ ಸರಕಾರ ಶರ್ಮಾರಿಗೆ ವಹಿಸಿದೆ. ಆದರೆ, ಸಮ್ಮೇಳನ ನಿಭಾಯಿಸಿದ ಬಗ್ಗೆ ಟೀಕೆಗಳು ಬಂದಿವೆ ಹಾಗಾಗಿ ತಮ್ಮನ್ನು ಜನರು ಗೇಲಿ ಮಾಡುತ್ತಿದ್ದಾರೆ ಎಂದು ಶರ್ಮಾರೇ ಹೇಳಿದ್ದಾರೆ.

ಭಾರತದ ಆಗ್ರಹ:

2015ರಲ್ಲಿ ನಡೆದಿದ್ದ ಸಿಒಪಿ 15ರ ಸಮ್ಮೇಳನದಲ್ಲಿ ಅಭಿವೃದ್ಧಿಗೊಂಡ ರಾಷ್ಟ್ರ  ಗಳಿಂದ ಆಗಿರುವ ಪರಿಸರ ಮಾಲಿನ್ಯದಿಂದಾಗಿ ಅಭಿವೃದ್ಧಿಶೀಲ ರಾಷಟ್‌ರಗಳು ಅನುಭವಿಸುತ್ತಿ ರುವ ಸಮಸ್ಯೆಗಳ ನಿವಾರಣೆಗಾಗಿ ಧನ  ಸಹಾಯ ನೀಡುವುದಾಗಿ ಅಭಿವೃದ್ಧಿ ಗೊಂಡಿ  ರುವ ರಾಷ್ಟ್ರಗಳು ವಾಗ್ಧಾನ ಮಾಡಿ  ದ್ದವು. ಅದನ್ನು ನಿಭಾ  ಯಿಸಬೇಕು ಎಂದು ಪರಿಸರ ಸಚಿವ ಭುಪೇಂದರ್‌ ಯಾದವ್‌, ಗ್ಲಾಸೊYà ದ ಸಿಒಪಿ 26 ಸಮ್ಮೇಳನದಲ್ಲಿ ಆಗ್ರಹಿಸಿದ್ದಾರೆ.

ಕಲ್ಲಿದ್ದಲು ನಿಷೇಧಕ್ಕೆ ಹಿಂದೇಟು?: ವಿಶ್ವವನ್ನು ಮಾಲಿನ್ಯ ಮುಕ್ತವಾಗಿಸಲು ಎಲ್ಲ ದೇಶಗಳು ತಮ್ಮಲ್ಲಿನ ಕಲ್ಲಿದ್ದಲು ಆಧಾರಿತ ವಿದ್ಯುತ್‌ ಉತ್ಪಾ  ದನೆಗೆ ಇತಿಶ್ರೀ ಹಾಡಬೇಕೆಂದು ಹಲವಾರು ರಾಷ್ಟ್ರ  ಗಳು, ಸಿಒಪಿ 26 ಸಮ್ಮೇಳನದಲ್ಲಿ ಒತ್ತಾಯಿಸಿದ್ದವು. ಸಮ್ಮೇಳನದ ಅಂತ್ಯದ ಹೊತ್ತಿಗೆ ಈ ಕುರಿತಂತೆ ನಿರ್ಣಯವನ್ನು

Advertisement

ಕೈಗೊಳ್ಳಲು ಕಲ್ಲಿದ್ದಲು ನಿಷೇಧಕ್ಕೆ ಆಗ್ರಹಿಸಿದ್ದ ರಾಷ್ಟ್ರ ಗಳೇ ಹಿಂದೇಟು ಹಾಕುತ್ತಿವೆ ಎಂದು ಹೇಳಲಾಗುತ್ತಿದೆ. ಸಮ್ಮೇಳನದಲ್ಲಿ ಕೈಗೊಳ್ಳಲಾಗುವ ನಿರ್ಧಾರಗಳ ಬಗ್ಗೆ ಕರಡು ಪ್ರತಿ ಬಿಡುಗಡೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next