Advertisement

DJ, Hate Speech ಇಲ್ಲ: ರಾಹುಲ್‌ ಮ.ಪ್ರ. ರ‍್ಯಾಲಿಗೆ ಖಡಕ್‌ ಷರತ್ತು

03:52 PM May 23, 2018 | Team Udayavani |

ಭೋಪಾಲ್‌ : ಮಧ್ಯಪ್ರದೇಶದ ಮಲ್ಹಾರಗಢದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ರ‍್ಯಾಲಿಯನ್ನು ಜೂನ್‌ 6ರಂದು ನಡೆಸುವುದಕ್ಕೆ ಮಲ್ಹಾರಗಢದ ಉಪ ವಿಭಾಗೀಯ ಅಧಿಕಾರಿ 19 ಶರತ್ತುಗಳನ್ನು ಹಾಕಿದ್ದಾರೆ.

Advertisement

ಈ ಶರತ್ತುಗಳಲ್ಲಿ ಈ ಕೆಳಗಿನವುಗಳು ಮುಖ್ಯವಾಗಿವೆ :

1.ರ‍್ಯಾಲಿಗೆ ಡಿ ಜೆ ಸೌಂಡ್‌ ಸಿಸ್ಟಮ್‌ ಬಳಸಕೂಡದು.

2. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಪದಗಳನ್ನು ಭಾಷಣದಲ್ಲಿ ಬಳಸಕೂಡದು.

3. ರ‍್ಯಾಲಿಗಾಗಿ ಹಾಕಲಾಗುವ ಟೆಂಟ್‌ ಗಾತ್ರ 15 ಅಡಿ ಉದ್ದ 15 ಅಡಿ ಅಗಲ ಮೀರಕೂಡದು. 

Advertisement

4. ರ‍್ಯಾಲಿ ನಡೆಯುವ ಸ್ಥಳದಲ್ಲಿ  ಸಾಕಷ್ಟು ಪಾರ್ಕಿಂಗ್‌ ಸ್ಥಳಾವಕಾಶ, ವಿದ್ಯುತ್‌, ನೀರು, ಅಗ್ನಿ ಶಾಮಕ ವ್ಯವಸ್ಥೆಗಳನ್ನು ಸಂಘಟಕರೇ ಮಾಡಬೇಕು.

5. ಬೆಂಕಿ, ಮಳೆ, ಗುಡುಗು, ಸಿಡಿಲು ಇತ್ಯಾದಿ ನೈಸರ್ಗಿಕ ಪ್ರಕೋಪಗಳಿಂದ ಉದ್ಭವವಾಗುವ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಸೂಕ್ತ ವ್ಯವಸ್ಥೆಯನ್ನು ಸಂಘಟಕರೇ ಮಾಡಬೇಕು.

6. ರಾಲಿಯಿಂದ ಜನ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗಕೂಡದು. ರ‍್ಯಾಲಿ ಸ್ಥಳದಲ್ಲಿ ವಾಹನಗಳ ಕಳವು ನಡೆದರೆ ಅದಕ್ಕೆ ಸಂಘಟಕರೇ ಜವಾಬ್ದಾರರು. 

7. ರಾಲಿಗೆ ನಿಯೋಜಿಸಲ್ಪಡುವ ಎಲ್ಲ ಸರಕಾರಿ ಅಧಿಕಾರಿಗಳ ಹೆಸರು ಮತ್ತು ಅವರ ಮೊಬೈಲ್‌ ನಂಬರ್‌ ಪಟ್ಟಿಯನ್ನು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ರ‍್ಯಾಲಿಗೆ ಸಾಕಷ್ಟು ಮುನ್ನವೇ ಸಲ್ಲಿಸತಕ್ಕದ್ದು.

8. ರ‍್ಯಾಲಿ ತಾಣದಲ್ಲಿ ದುಷ್ಕರ್ಮಿಗಳಿಂದ ಯಾವುದೇ ಉಪಟಳ, ಅನುಚಿತ ವರ್ತನೆ ನಡೆಯದಂತೆ ಸಂಘಟಕರೇ ನೋಡಿಕೊಳ್ಳಬೇಕು.

9. ಈ ಶರತುಗಳಿಗೆ ಚ್ಯುತಿ ಉಂಟಾದಲ್ಲಿ ರ‍್ಯಾಲಿಗೆ ನೀಡಲಾಗುವ ಅನುಮತಿಯನ್ನು ರದ್ದುಪಡಿಸಲಾಗುವುದು. 

10. ರ‍್ಯಾಲಿಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಮತ್ತು ಮಧ್ಯ ಪ್ರದೇಶ ಹೈಕೋರ್ಟ್‌ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಸಂಘಟಕರು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. 

Advertisement

Udayavani is now on Telegram. Click here to join our channel and stay updated with the latest news.

Next