Advertisement

ಏಪ್ರಿಲ್‌ನಿಂದ ಇ-ವೇ ಬಿಲ್‌ ಜಾರಿ: ಜಿಎಸ್‌ಟಿ ಸಭೆ ನಿರ್ಧಾರ

06:20 AM Mar 11, 2018 | |

ಹೊಸದಿಲ್ಲಿ: ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸರಕು ಸಾಗಣೆ ಮಾಡಲು ಇಲೆಕ್ಟ್ರಾನಿಕ್‌ ಬಿಲ್‌ ನೀಡುವ ವ್ಯವಸ್ಥೆ ಏಪ್ರಿಲ್‌ 1 ರಿಂದ ಜಾರಿಗೆ ಬರಲಿದೆ. ಈ ಬಗ್ಗೆ ಶನಿವಾರ ಹೊಸದಿಲ್ಲಿಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆ ನಿರ್ಧರಿಸಿದೆ. ಆದರೆ ರಿಟರ್ನ್ ಫೈಲಿಂಗ್‌ ಪ್ರಕ್ರಿಯೆಯ ಬಗ್ಗೆ ರಾಜ್ಯಗಳಲ್ಲಿ ಸಹಮತ ವ್ಯಕ್ತವಾಗದ್ದರಿಂದ, ಈ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ.

Advertisement

ಏಪ್ರಿಲ್‌ 1 ರಿಂದ ಇ-ವೇ ಬಿಲ್‌ ಆರಂಭಿಸಿದರೂ, ಇದು ರಾಜ್ಯದೊಳಗೆ ಸರಕು ಸಾಗಣೆಗೆ ಮಾತ್ರ ಇರಲಿದೆ. ಏಪ್ರಿಲ್‌ 15ರಿಂದ ಹಂತ ಹಂತವಾಗಿ ರಾಜ್ಯದಿಂದ ರಾಜ್ಯಕ್ಕೆ ಸಾಗಿಸಲು ಇ-ವೇ ಬಿಲ್‌ ವ್ಯವಸ್ಥೆ ಜಾರಿಗೆ ಬರಲಿದೆ. ಇದಕ್ಕಾಗಿ ರಾಜ್ಯ ಗಳನ್ನು 4 ವಿಭಾಗಗಳನ್ನಾಗಿ ಮಾಡಲಾಗಿದೆ. ಈ ಬಿಲ್‌ಗ‌ಳನ್ನು ಜಿಎಸ್‌ಟಿ ಇನ್‌ಸ್ಪೆಕ್ಟರ್‌ ಕೇಳಿದಾಗ ತೋರಿಸಬೇಕಿರುತ್ತದೆ. 

ತೆರಿಗೆ ತಪ್ಪಿಸಿಕೊಳ್ಳುವವರ ಮೇಲೆ ನಿಗಾ ಇಡಲು ಇದು ಪ್ರಮುಖವಾಗಿದೆ. ಸದ್ಯ ನಗದು ಆಧಾರದಲ್ಲಿ ನಡೆಯುವ ವಹಿವಾಟುಗಳನ್ನು ಇದು ಕಡಿಮೆ ಮಾಡಲಿದೆ. ಅಲ್ಲದೆ ಅಕ್ಟೋಬರ್‌ನಿಂದ ಇ ವ್ಯಾಲೆಟ್‌ ಜಾರಿಗೆ ತರಲಾಗುತ್ತಿದ್ದು, ಇದರ ವ್ಯಾಲೆಟ್‌ನಲ್ಲೇ ರಿಫ‌ಂಡ್‌ ನೀಡಲಾಗುತ್ತದೆ. ಅಲ್ಲಿಯ ವರೆಗೆ ವ್ಯಾಪಾರಿಗಳು ಪ್ರಸ್ತುತ ವಿಧಾನದಲ್ಲೇ ರಿಟರ್ನ್ಸ್ ಫೈಲ್‌ ಮಾಡಬಹುದು. 50 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದ ಎಲ್ಲ ಸಾಮಗ್ರಿಗಳಿಗೆ ಇ-ವೇ ಬಿಲ್‌ ಅಗತ್ಯವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next