Advertisement

ಲಾಸ್‌ ಏಂಜಲೀಸ್‌ನಲ್ಲಿ 7.1 ತೀವ್ರತೆಯ ಭೂಕಂಪ

01:14 AM Jul 07, 2019 | mahesh |

ಲಾಸ್‌ ಏಂಜಲೀಸ್‌: ಅಮೆರಿಕದ ದಕ್ಷಿಣ ಕ್ಯಾಲಿಪೋರ್ನಿಯಾದಲ್ಲಿ ಶುಕ್ರವಾರ ಭೂಕಂಪ ಉಂಟಾಗಿದೆ. ರಿಕ್ಟರ್‌ ಮಾಪಕದಲ್ಲಿ ಅದರ ತೀವ್ರತೆ 7.1ರಷ್ಟು ದಾಖಲಾಗಿದೆ. ಎರಡು ದಶಕಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಪ್ರಬಲ ಭೂಕಂಪ ಎಂದು ಬಣ್ಣಿಸಲಾಗಿದೆ. ಲಾಸ್‌ ಏಂಜ ಲೀಸ್‌ನಿಂದ 240 ಕಿಮೀ ದೂರದ ಪ್ರದೇಶದಲ್ಲಿಯೂ ಕಂಪನದ ಅನುಭವ ಉಂಟಾಗಿದೆ.

Advertisement

1999ರಲ್ಲಿ ಟ್ವೆಂಟೈನೈನ್‌ ಪಾಮ್ಸ್‌ ಮರೈನ್‌ ಕಾಪ್ಸ್‌ ಬೇಸ್‌ ಸಮೀಪ ಉಂಟಾಗಿದ್ದ 7.1 ರಷ್ಟು ಪ್ರಮಾಣದ ಭೂಕಂಪನ ಭೀಕರವಾಗಿತ್ತು. ಹಾಲಿ ಭೂಕಂಪದಿಂದ ಹಲವೆಡೆ ಕಟ್ಟಡಗಳು ಉರುಳಿ ಬಿದ್ದಿರುವ, ಬಿರುಕು ಬಿಟ್ಟಿರುವ ಘಟನೆಗಳು ವರದಿಯಾಗಿವೆ. ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯದಲ್ಲಿ ಉಂಟಾಗಿದೆ. ಜೀವ ಹಾನಿ, ಗಂಭೀರ ಪ್ರಮಾಣದ ಗಾಯ ಉಂಟಾಗಿಲ್ಲ. ಕಂಪನದಿಂದ ಬಿರುಕು ಬಿಟ್ಟ ಮನೆಗಳಲ್ಲಿ ಇರುವವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಲಾಸ್‌ ಏಂಜಲೀಸ್‌ ಪೊಲೀಸರು ನೀಡಿದ ಮಾಹಿತಿ ಪ್ರಕಾರ ರೈಲು ಮತ್ತು ಬಸ್‌ ಸಂಚಾರ ವ್ಯವಸ್ಥೆಗೆ ಧಕ್ಕೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next