Advertisement

ಕ್ಯಾಲಿಫೋರ್ನಿಯಾ ಕಾಂಡರ್ಸ್‌ ಕುತೂಹಲಕಾರಿ ಸಂತಾನೋತ್ಪತ್ತಿ: ಗಂಡಿನ ಸಂಪರ್ಕವಿಲ್ಲದೆ ಜನನ

12:16 AM Nov 19, 2021 | Team Udayavani |

ವಾಷಿಂಗ್ಟನ್: ಕ್ಯಾಲಿಫೋರ್ನಿಯಾ ಕಾಂಡರ್ಸ್‌ ಎಂಬ ಜಾತಿಯ ಪಕ್ಷಿಗಳು, ಈಗ ತನ್ನ ಜಾತಿಯ ಪುರುಷ ಹಕ್ಕಿಯ ಸಹಾಯವಿಲ್ಲದೆ ಜನಿಸಬಲ್ಲ ಜೀವಿಗಳ ವರ್ಗಕ್ಕೆ ಹೊಸದಾಗಿ ಸೇರಲ್ಪಟ್ಟಿವೆ! ಇತ್ತೀಚಿನ ವರ್ಷಗಳಲ್ಲಿ ಈ ಜಾತಿಯಲ್ಲಿ ಜನಿಸಿರುವ ಎರಡು ಗಂಡು ಹಕ್ಕಿಗಳ ಡಿಎನ್‌ಎಯನ್ನು ಪರೀಕ್ಷಿಸಿದಾಗ ಇವು ಕೇವಲ ತಾಯಿಯ ಅಂಡಾಣುವಿನಿಂದ ರೂಪುಗೊಂಡಿ­ರುವ ಪಕ್ಷಿಗಳೆಂಬುದು ಪತ್ತೆಯಾಗಿವೆ. ಇವುಗಳಲ್ಲಿ ಯಾವುದೇ ಪುರುಷ ಹಕ್ಕಿಯ ಅಂಶಗಳು ಪತ್ತೆಯಾಗಿ­ಲ್ಲದಿರುವುದು ವಿಜ್ಞಾನಿಗಳಿಗೇ ಅಚ್ಚರಿ ತಂದಿದೆ!

Advertisement

1980ರ ದಶಕದಲ್ಲಿ ಅಮೆರಿಕದ ನೈಋತ್ಯ ಭಾಗದಲ್ಲಿ ಅಳಿವಿನಂಚಿಗೆ ಸರಿದಿದ್ದ 22 ಕಾಂಡೊರ್‌ಗಳನ್ನು ಗಂಡು-ಹೆಣ್ಣುಗಳ ಪ್ರತ್ಯೇಕ ಜೋಡಿಯಾಗಿಸಿ, ಪ್ರತಿಯೊಂದು ಜೋಡಿಯನ್ನೂ ಪ್ರತ್ಯೇಕ ಗೂಡುಗಳಲ್ಲಿ ಇರಿಸಲಾಗಿತ್ತು. ಅಲ್ಲಿ ಜನಿಸಿದ ಹೊಸ ಹಕ್ಕಿಗಳ ಡಿಎನ್‌ಎ ಪರೀಕ್ಷೆ ನಡೆಸಿದಾಗ ವಿಜ್ಞಾನಿಗಳು ಕೇವಲ ತಾಯಿಯಿಂದ ಜನಿಸಿದ ಎರಡು ಗಂಡು ಹಕ್ಕಿಗಳನ್ನು ಪತ್ತೆ ಹಚ್ಚಿದ್ದಾರೆ. ಹಾಗೆಂದು ಈ ರೀತಿಯ ಸಂತಾ ನೋತ್ಪತ್ತಿ ಇದೇ ಮೊದಲೇನಲ್ಲ. ಅಳಿವಿನಂಚಿನಲ್ಲಿ­ರುವ ಕೆಲವು ಪ್ರಾಣಿ, ಪಕ್ಷಿಗಳಲ್ಲಿ ಇದು ನಿಸರ್ಗವೇ ದಯಪಾಲಿಸಿ ರುವ ಒಂದು ಸಂತಾನೋತ್ಪತ್ತಿ ಸೌಲಭ್ಯ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಪಾರ್ಥೋಜೆನಿಸಿಸ್‌ನಿಂದ ಇದು ಸಾಧ್ಯ!: ಸಾಮಾನ್ಯ­ವಾಗಿ ಜೀವಿಗಳಲ್ಲಿ ಲೈಂಗಿಕ ಸಂಪರ್ಕಾಧಾರಿತ (ಸೆಕ್ಸು­ವಲ್‌), ಅಲೈಂಗಿಕಾಧಾರಿತ (ಅಸ್ಸೆಕ್ಸುವಲ್‌) ಗರ್ಭ­ಧಾರಣೆ ವ್ಯವಸ್ಥೆಯಿದೆ. ಮೇಲಿನ ಎರಡೂ ಕ್ರಮಗಳಲ್ಲಿ, ಹೆಣ್ಣಿನ ಅಂಡಾಣು ಹಾಗೂ ಗಂಡಿನ ವೀರ್ಯಾಣು ಸಮ್ಮಿಲನ­ಗೊಂಡು ಭ್ರೂಣವಾಗಿ, ಆನಂತರ ಜೀವಿ­ಯಾಗಿ ಮಾರ್ಪಾಡಾಗುತ್ತದೆ. ಲೈಂಗಿಕತೆ­­ಯಿಲ್ಲದ ಸಂತಾ­ನೋತ್ಪತ್ತಿಯಲ್ಲಿ ಪಾಥೋì­ಜೆನಿ­­­­ಸಿಸ್‌ ಎಂಬ ಮತ್ತೂಂದು ಬಗೆಯಿದೆ. ಇಲ್ಲಿ ಹೆಣ್ಣಿನ ಅಂಡಾಣು ತನ್ನಿಂತಾನೇ ಭ್ರೂಣವಾಗಿ ಬದಲಾಗಿ, ಅನಂತರ ಜೀವಿಯಾಗುತ್ತದೆ. ಕ್ಯಾಲಿಫೋರ್ನಿಯಾ ಕಾಂಡರ್ಸ್‌ಗಳ ವಿಚಾರದಲ್ಲೂ ಹಾಗೇ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next