Advertisement

Cancer Medicine: ಇನ್ನೂ 3 ಕ್ಯಾನ್ಸರ್‌ ಔಷಧಗಳಿಗೆ ಕಸ್ಟಮ್ಸ್‌ ಶುಲ್ಕವಿಲ್ಲ!

08:15 PM Jul 23, 2024 | Team Udayavani |

ಹೊಸದಿಲ್ಲಿ : ದೇಶದಲ್ಲಿ ಕ್ಯಾನ್ಸರ್‌ ರೋಗಿಗಳಿಗೆ ಅನುಕೂಲವಾಗುವ ಕ್ರಮವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಅದಕ್ಕೆ ಸಂಬಂಧಿಸಿದ ಇನ್ನೂ 3 ಔಷಧಗಳಿಗೆ ಶೇ.10ರಿಂದ ಶೂನ್ಯ ಪ್ರಮಾಣಕ್ಕೆ ಕಸ್ಟಮ್ಸ್‌ ಸಂಕವನ್ನು ಇಳಿಕೆ ಮಾಡಿದೆ. ಔಷಧಿಗಳಾಗಿರುವ Trastuzumab Deruxtecan, Osimertinib and Durvalumab ಈ ಸೌಲಭ್ಯ ದೊರೆಯಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.

Advertisement

2020ರಲ್ಲಿ ನಡೆದಿದ್ದ ಅಧ್ಯಯನದ ಪ್ರಕಾರ ದೇಶದಲ್ಲಿ 14 ಲಕ್ಷ ಕ್ಯಾನ್ಸರ್‌ ರೋಗಿಗಳು ಇದ್ದಾರೆ. ಅವರ ಸಂಖ್ಯೆ 2025ರ ವೇಳೆಗೆ 15 ಲಕ್ಷಕ್ಕೆ ಏರಿಕೆಯಾಗಿರುವ ಬಗ್ಗೆ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮ ಮಹತ್ವ ಪಡೆದಿದೆ. ಇದಲ್ಲದೆ, ಎಕ್ಸ್‌ರೇ ಟ್ಯೂಬ್‌ಗಳ ಮೇಲಿನ ಅಬಕಾರಿ ಸುಂಕವನ್ನೂ ಇಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next